ಟೋಕಿಯೋ ಒಲಿಂಪಿಕ್ಸ್ : ಕ್ವಾರ್ಟರ್ ಫೈನಲ್ ಗೆ ತಲುಪಿದ ಭಾರತ
ಟೋಕಿಯೋ : ಹಾಲಿ ಚಾಂಪಿಯನ್ ಅಜೆರ್ಂಟೀನಾ ವಿರುದ್ಧ ಗೆಲ್ಲುವ ಮೂಲಕ ಭಾರತದ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದೆ.
ಗುರುವಾರ ನಡೆದ ತನ್ನ ಅಂತಿಮ ಪೂಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಜೆರ್ಂಟೀನಾ ವಿರುದ್ಧ ಭಾರತದ ಹಾಕಿ ತಂಡ 3-1 ಗೋಲುಗಳಿಂದ ಗೆಲುವು ಸಾಧಿಸಿದೆ.
ಪಂದ್ಯದ 43 ನೇ ನಿಮಿಷದಲ್ಲಿ ಭಾರತದ ವರುಣ್ ಕುಮಾರ್ ಗೋಲ್ ಬಾರಿಸಿದರು. ಬಳಿಕ ಪಂದ್ಯದ ಮುಕ್ತಾಯದ ನಿಮಿಷಗಳಲ್ಲಿ ವಿವೇಕ್ ಸಾಗರ್ ಪ್ರಸಾದ್ (58 ನೇ) ಮತ್ತು ಹರ್ಮನ್‍ಪ್ರೀತ್ ಸಿಂಗ್ (59 ನೇ) ಗೋಲು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಇತ್ತ ಅಜೆರ್ಂಟೀನಾ ಪರವಾಗಿ 48 ನೇ ನಿಮಿಷದಲ್ಲಿ ಷುತ್ ಕ್ಯಾಸೆಲ್ಲಾ ಮಾಡಿದ ಪೆನಾಲ್ಟಿ ಕಾರ್ನರ್ ನಿಂದಾಗಿ ಏಕೈಕ ಗೋಲು ಒಲಿಯಿತು. ಈ ಗೆಲುವಿನ ಮೂಲಕ ಭಾರತವು `ಎ’ ಪೂಲ್ ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಭಾರತ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿದ್ದು, ಶುಕ್ರವಾರ ನಡೆಯಲಿರುವ ಅಂತಿಮ ಪೂಲ್ ಪಂದ್ಯದಲ್ಲಿ ಆತಿಥೇಯ ಜಪಾನ್ ವಿರುದ್ಧ ಸೆಣಸಲಿದೆ.










