ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಶರತ್ ಕಮಾಲ್ – ಮಾನಿಕಾ ಬಾತ್ರ
Tokyo Olympics: Sharath-Manika seal mixed doubles spot
ಶರತ್ ಕಮಲ್ ಮತ್ತು ಮಾನಿಕಾ ಬಾತ್ರ ಅವರು ಮಿಕ್ಸೆಡ್ ಟೇಬಲ್ ಟೆನಿಸ್ ನಲ್ಲಿ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ದೋಹಾದಲ್ಲಿ ನಡೆದ ಏಷ್ಯನ್ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಶರತ್ ಕಮಾಲ್ ಮತ್ತು ಮಾನಿಕಾ ಬಾತ್ರ ಅವರು ವಿಶ್ವದ ಎಂಟನೇ ಶ್ರೇಯಾಂಕಿತ ಜೋಡಿ ಸಂಗ್ ಸು ಲೀ ಮತ್ತು ಜೀಹೀ ಅವರನ್ನು 4-2ರಿಂದ ಪರಾಭವಗೊಳಿಸಿದ್ರು.
ಶರತ್ ಕಮಾಲ್ ಮತ್ತು ಮನಿಕಾ ಬಾತ್ರ 2018ರ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದೀಗ ದೋಹಾ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಶರತ್ ಕಮಾಲ್ ಮತ್ತು ಮಾನಿಕಾ 8-11, 6-11, 11-5, 11-6, 13-11, 11-8ರಿಂದ ಸಂಗ್ ಸು ಲೀ ಮತ್ತು ಜಿಹೀ ಅವರನ್ನು ಸೋಲಿಸಿದ್ರು.
#TokyoOlympics #Sharathkamal #manikaBatra #table tennis #saakshatv #saakshatvsports #sports








