ಟೋಕಿಯೋ ಪ್ಯಾರಾಲಿಂಪಿಕ್ಸ್ 2021 – ಕಂಚು ಗೆದ್ದ ಶೂಟರ್ ಸಿಂಗ್ ರಾಜ್..!
ಟೋಕಿಯೋ ಪ್ಯಾರಾಲಿಂಪಿಕ್ಸ್ 2021 ರ ಸಾಲಿನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದೆ. ಶೂಟರ್ ಸಿಂಗ್ ರಾಜ್ ಅವರು P1 – 10 m Air – ಪಿಸ್ತೂಲ್ SH1 ಪುರುಷರ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಭಾರತದ ಶೂಟರ್ ಸಿಂಗರಾಜ್ ಅದಾನಾ ಪಿ 1 ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಗೆಲುವು ತಂದು ಕೊಟ್ಟಿದ್ದಾರೆ.
ಅಫ್ಗಾನ್ ತೊರೆದ್ರೂ ತಾಲಿಬಾನಿಗಳಿಗೆ ಶಾಕ್ ಕೊಟ್ಟು ಬಂದ ಅಮೆರಿಕಾ ಸೇನೆ..!
ಅದಾನಾ ಒಟ್ಟು 216.8 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಭಾವಿನಾ ಪಟೇಲ್ ಸೇರಿದಂತೆ ಭಾರತೀಯ ಮಹಿಳಾ ಟೇಬಲ್ ಟೆನಿಸ್ ತಂಡವು ಕ್ಲಾಸ್ 4-5 ಕ್ವಾರ್ಟರ್ ಫೈನಲ್ ನಲ್ಲಿ 0-2ರಿಂದ ಚೀನಾವನ್ನು ಮಣಿಸಿತು. ಭಾನುವಾರ ನಡೆದ ಸಿಂಗಲ್ಸ್ ಸ್ಪರ್ಧೆಯಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ಭಾವಿನಾ, ಸ್ಪರ್ಧೆಯಲ್ಲಿ ಮೂರನೇ ಬಾರಿ 0-3 (4-11 7-11 6-11) ಯಿಂಗ್ ಯೌಂಗ್ ವಿರುದ್ಧ ಸೋತರು. ಆದರೆ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟು ಭಾರತದ ಪದಕದ ಬರ ನೀಗಿಸಿ ಐತಿಹಾಸಿಕ ಸಾಧನೆ ಮಾಡಿದರು.








