ಬಾಗಲಕೋಟೆಯಲ್ಲಿ ಬೆಡ್ ಗಳ ಮಾಹಿತಿಗಾಗಿ ಟೋಲ್ ಫ್ರಿ ನಂಬರ್
ಬಾಗಲಕೋಟೆ : ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಜಿಲ್ಲಾಡಳಿತಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಡಿಸಿ ಡಾ.ರಾಜೇಂದ್ರ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್,ಸಿಇಓ ಟಿ.ಭೂಬಾಲನ್ ಜಂಟಿ ಸುದ್ದಿಗೋಷ್ಠಿ ಮಾಹಿತಿ ನೀಡಿದರು.
ಮುಖ್ಯವಾಗಿ ಸುದ್ದಿಗೋಷ್ಠಿಯಲ್ಲಿ ಬೆಡ್ ಸಮಸ್ಯೆ ಬಗ್ಗೆ ಮಾತನಾಡಿ ಬೆಡ್’ಗಳ ಮಾಹಿತಿಗಾಗಿ ಜಿಲ್ಲಾಡಳಿತದಿಂದ ಟೋಲ್ ಫ್ರೀ ನಂಬರ್ ಸೇವೆ ಆರಂಭ ಮಾಡಲಾಗಿದೆ. ಟೋಲ್ ಫ್ರೀ ನಂಬರ್ 08354-235512 ಗೆ ಕರೆ ಮಾಡಿ ಬೆಡ್’ಗಳ ಮಾಹಿತಿ ಪಡೆಯಬಹುದು.. ಅವಶ್ಯವಿರುವ ಮಾಹಿತಿಯನ್ನ ದಿನದ 24/7 ಸೇವೆ ಲಭ್ಯವಾಗಿರುತ್ತದೆ ಎಂದು ಎಸ್ಪಿ ಲೋಕೇಶ ಜಗಲಾಸರ್ ಮಾಹಿತಿ ನೀಡಿದರು.
ಇನ್ನು ಅನಾಥ ಮಕ್ಕಳು ಹಾಗೂ ಕೋವಿಡ್ ಚಿಕಿತ್ಸೆಗೆ ತಂದೆ-ತಾಯಿ ಇಬ್ಬರೂ ದಾಖಲಾಗಿದ್ರೆ ಮಕ್ಕಳಿಗೆ ರಕ್ಷಣೆ ಪಾಲನೆ ಪೋಷಣೆ ಇಲ್ಲದಿದ್ದರೆ. ಮಕ್ಕಳ ಸಹಾಯವಾಣಿಗೆ ಕರೆ ಮಾಡಲು ಮನವಿ ಎಸ್ ಪಿ ಅವರು ಮನವಿ ಮಾಡಿಕೊಂಡರು. 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ರೆ ಎಲ್ಲ ರೀತಿಯ ಸಹಾಯ ಸಹಕಾರ ಸಿಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಮದುವೆ ಮಾಡುವುದಕ್ಕೆ ನಿರ್ಬಂದ ಹೇರಿರುವುದಾಗಿ ತಿಳಿಸಿದ ಅವರು, ಈಗಾಗಲೇ ಪರವಾನಿಗೆ ಪಡೆದವರ ಪಾಸ್’ಗಳು ರದ್ದು ಮಾಡಲಾಗಿದೆ. ಜಿಲ್ಲೆಯಲ್ಲಿ 968 ಮದುವೆ ಪರವಾನಿಗೆ ಪಡೆದಿದ್ದರು. ಇದನ್ನ ವೈಯಕ್ತಿಕ ಹಿತಾಸಕ್ತಿ ಆಧಾರಧ ಮೇಲೆ ಮನೆಯಲ್ಲೇ ಮದುವೆ ಗಂಡು ಹೆಣ್ಣು ಸೇರಿಸಿ ಮದುವೆ ಮಾಡಿಕೊಳ್ಳಬಹುದು. ಆದ್ರೆ ಜನರನ್ನ ಸೇರಿಸುವ ಹಾಗಿಲ್ಲ. ಇಷ್ಟು ದಿನ 50 ಜನ ಸೇರುವುದಕ್ಕೆ ನೀಡಿದ್ದ ಪರವಾನಿಗೆ ರದ್ದು ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾ.ಡಾ.ಕೆ.ರಾಜೇಂದ್ರ ತಿಳಿಸಿದರು.









