ಒಂದೇ ಚಿತ್ರದಲ್ಲಿ ಚರಣ್, ಅರ್ಜುನ್ – ಸುಳಿವು ಬಿಟ್ಟುಕೊಟ್ಟ ಅಲ್ಲು ಅರವಿಂದ್
ಮೆಗಾ ಪರಿವಾರದ ಹೀರೋಗಳದಾ ಅಲ್ಲು ಅರ್ಜುನ್ ರಾಮ್ ಚರಣ್ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎನ್ನವ ಮತುಕಥೆಗಳು ಟಾಲಿವುಡ್ ನಲ್ಲಿ ಶುರುವಾಗಿದೆ.
RRR ಮತ್ತು ಪುಷ್ಪಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಇಬ್ಬರು ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ನ್ಯೂಸ್ ಅಭಿಮಾನಿಗಳನ್ನ ಎಕ್ಸೈಟಿಂಗ್ ಆಗುವಂತೆ ಮಾಡಿದೆ.
ಅಂದ್ಹಾಗೆ ಈ ಇಬ್ಬರೂ ಸ್ಟಾರ್ ಗಳು, ಮಲ್ಟಿಸ್ಟಾರರ್ ಸಿನಿಮಾದಲ್ಲಿ ಒಂದಾಗ್ತಿದ್ದಾರೆ ಅನ್ನೋ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದೆ..
ಅಂದ್ಹಾಗೆ ಈಗಾಗಲೇ “ಎವುಡು” ಸಿನಿಮಾದಲ್ಲಿ ಈ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದರು ಆದರೆ ಇದರಲ್ಲಿ ಅಲ್ಲು ಅರ್ಜುನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.. ಕಳೆದ 10 ವರ್ಷಗಳಿಂದ ಇಂತಾದೊಂದು ಆಸೆ ಇದೆ. ನಮ್ಮದೇ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಂದ್ಹಾಗೆ ಈ ಸಿನಿಮಾಗೆ ಚರಣ್ ಅರ್ಜುನ್ ಎನ್ನುವ ಟೈಟಲ್ ಫಿಕ್ಸ್ ಮಾಡಲಾಗಿದೆ ಎನ್ನಲಾಗ್ತಿದೆ. 10 ವರ್ಷಗಳ ಹಿಂದೆಯೇ ಫಿಲ್ಮ್ ಚೇಂಬರ್‌ನಲ್ಲಿ ಈ ಟೈಟಲ್ ರಿಜಿಸ್ಟರ್ ಮಾಡಿಸಿದ್ದೀನಿ. ಪ್ರತಿ ವರ್ಷ ಅದನ್ನು ರಿನೀವಲ್ ಮಾಡಿಸುತ್ತಿದ್ದೀನಿ, ಒಂದಲ್ಲ ಒಂದು ದಿನ ಈ ಪ್ರಾಜೆಕ್ಟ್ ಶುರುವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
Tollywood: Charan, Arjun in one film – Allu Arvind gave a hint