ಅಂದು ಆತ್ಮಹತ್ಯೆಗೆ ನಿರ್ಧರಿಸಿದ್ದ ಪವನ್ ಕಲ್ಯಾಣ್ pawan kalyan
ಅದು ನನ್ನ ವೃತ್ತಿ ಬದುಕಿನ ಆರಂಭದ ದಿನಗಳು.. ಸಿನಿಮಾದಲ್ಲಿ ನಾನು ಸೋಲುತ್ತಿದ್ದೇನೇನೊ ಎಂಬ ಹತಾಶ ಭಾವನೆ ನನ್ನನ್ನ ಬಹಳವಾಗಿ ಆವರಿಸಿತ್ತು.. ನನಗೆ ನೆನಪಿದೆ ಅದು ನನ್ನ ಎರಡನೆ ಚಿತ್ರದ ಶೂಟಿಂಗ್ ನ ಸಮಯ.. ಆಗ ನಮ್ಮ ಚಿತ್ರತಂಡ ವಿಶಾಖಾಪಟ್ಟಣಂನಲ್ಲಿ ಬೀಡು ಬಿಟ್ಟಿತ್ತು.. ನೂರಾರು ಜನರ ಎದುರು ನಾನು ಗುಂಪಿನಲ್ಲಿ ನೃತ್ಯ ಮಾಡಬೇಕಿತ್ತು..
ಮೊದಲೆ ಸಂಕೋಚ ಸ್ವಭಾವದವನಾದ ನನಗೆ ಅಷ್ಟು ಜನರ ಮುಂದೆ ಡ್ಯಾನ್ಸ್ ಮಾಡಲು ಅದೇಕೊ ಸಾಧ್ಯವೇ ಆಗಲಿಲ್ಲ.. ಆದರೆ ಆ ಸಿನಿಮಾಗೆ ಆ ಸೀನ್ ಅತ್ಯಂತ ಅವಶ್ಯವಾಗಿತ್ತು.. ಕಾರಣ ನಾನೇ ಆ ಚಿತ್ರದ ನಾಯಕ ನಟ..
ಇದು ನನ್ನಿಂದ ಯಾವಾಗ ಸಾಧ್ಯವೆ ಇಲ್ಲ ಎಂದು ನನಗೆ ಅರಿವಾಯ್ತೊ ಆ ಕ್ಷಣವೇ ನಾನು ಅಸಹಾಯಕನಾದೆ.. ನನ್ನ ಸಂಬಂಧಿಯೊಬ್ಬರಿಗೆ ಕರೆ ಮಾಡಿ ನನ್ನ ಅಳಲನ್ನ ತೋಡಿಕೊಂಡೆ.. ಈ ವೈಫಲ್ಯಕ್ಕೆ ಸೋತು ನಾನು ಆತ್ಮಹತ್ಯೆಗೆ ಶರಣಾಗುವೆ ಎಂದು ನಾನವರಿಗೆ ತಿಳಿಸಿದೆ !’
ಹೀಗೆ ಹೇಳಿದವರು ಟಾಲಿವುಡ್ ನ ಕಲ್ಟ್ ಹೀರೊ, ಸೂಪರ್ ಸ್ಟಾರ್, ಪವರ್ ಸ್ಟಾರ್ ಎಂಬಿತ್ಯಾದಿಯಾಗಿ ಬಿರುದಾಂಕಿತರಾದ ಪವನ್ ಕಲ್ಯಾಣ್ ! ಇದು 1998 ರಲ್ಲಿ ಅವರ ಎರಡನೇ ಚಿತ್ರವಾದ ‘ಸುಸ್ವಾಗತಂ’ ಸಿನಿಮಾದ ಸೆಟ್ ನಲ್ಲಿ ಅವರು ತಾಳಿದ್ದ ನಿರ್ಧಾರವಾಗಿತ್ತು !
ಅಂದು ಯಾವ ನಟ ತಾನು ಸಿನಿಮಾಗೆ ಅನ್ ಫಿಟ್ ಎಂಬ ಯೋಚನೆಯಡಿ ಆತ್ಮಹತ್ಯೆಯವರೆಗು ಹೋಗಿದ್ದರೊ ಇವತ್ತು ಆ ನಟನನ್ನ ತೆಲುಗಿನ ಜನ ತಮ್ಮ ರೋಲ್ ಮಾಡೆಲ್ ಎಂದು ಆರಾಧಿಸುತ್ತಿದ್ದಾರೆ..
ಸಕ್ಸಸ್ ಅನ್ನೋದು ಎಲ್ಲರಲ್ಲು ಇರುತ್ತದೆ.. ಅದಕ್ಕಾಗಿ ಕಾಯ ಬೇಕು, ಪ್ರಯತ್ನ ನಿಲ್ಲಿಸಬಾರದೆ ಹೊರತು ಜೀವನ ಕೊನೆಗಾಣಿಸಿಕೊಳ್ಳುವ ನಿರ್ಧಾರ ಮಾಡಬಾರದು ಎಂಬುದಕ್ಕೆ ಈ ನಟನ ಪ್ರಗತಿಯೆ ಸಾಕ್ಷಿ
-ಇಂದೂದರ್ ಒಡೆಯರ್ ಚಿತ್ರದುರ್ಗ










