ನವದೆಹಲಿ: ದೇಶದಲ್ಲಿ ಲಾಕ್ ಡೌನ್ ಮುಂದುವರಿಯುತ್ತಾ..? ಮುಂದುವರಿದರೇ ಹೇಗೆ..? ಇನ್ನೂ ಎಷ್ಟು ದಿನ ಲಾಕ್ ಡೌನ್ ಮುಂದುವರಿಸಬಹುದು..? ಸದ್ಯ ದೇಶದ ಜನರಲ್ಲಿ ಕಾಡುತ್ತಿರುವ ಪ್ರಶ್ನೆಗಳಿವು. ಕೊರೋನಾ ಲಾಕ್ ಡೌನ್ ಮುಂದಿನ ಮಂಗಳವಾರ ಕೊನೆಯಾಗುತ್ತದೆಯೇ ಇಲ್ಲ ಮುಂದುವರಿಯುತ್ತದೆಯೇ ಎಂದು ತಿಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಮತ್ತೊಮ್ಮೆ ದೇಶವಾಸಿಗಳನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ..
ಅದಕ್ಕೂ ಮುನ್ನ ಅವರು ನಾಳೆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ತೀರ್ಮಾನಕ್ಕೆ ಬರಲಿದ್ದಾರೆ.
ಮೂಲಗಳ ಪ್ರಕಾರ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆಯಿದ್ದು ಆದರೆ ಈ ಬಾರಿ ಹಲವು ಬದಲಾವಣೆಗಳಾಗುವ ನಿರೀಕ್ಷೆಯಿದೆ. ಅಂತರರಾಜ್ಯ ಚಲನವಲನಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ಅಗತ್ಯ ವಸ್ತುಗಳು ಜನರಿಗೆ ಎಂದಿನಂತೆ ಸಿಗಲಿದೆ. ಶಾಲಾ, ಕಾಲೇಜು, ಧಾರ್ಮಿಕ ಸಂಸ್ಥೆಗಳು ಮುಚ್ಚುವ ಸಾಧ್ಯತೆಯಿದೆ.








