TOP 10 News – ಪ್ರಮುಖ ರಾಷ್ಟ್ರೀಯ ಸುದ್ದಿಗಳು…..
ಯುಪಿಯಲ್ಲಿ ಅಖಿಲೇಶ್ ಗೆ ದೀದಿ ಸಾಥ್….!!!
ತೃಣಮೂಲ ಕಾಂಗ್ರೆಸ್ ಕೂಡ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಧುಮುಕಲಿದೆ. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಆದರೆ, ಅಖಿಲೇಶ್ ಯಾದವ್ ಅವರನ್ನು ಬೆಂಬಲಿಸುವುದಾಗಿ ಭರವಸೆ ನೀದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಖಚಿತ ಎಂದು ಮಮತಾ ಹೇಳಿದ್ದಾರೆ.
ಹೆಚ್ಚು ಮಾಹಿತಿ : UP Election – ಅಖಿಲೇಶ್ ಯಾದವ್ ಬೆಂಬಲಿಸಲು ಯುಪಿಗೆ ತೆರಳಲಿದ್ದಾರೆ ಮಮತಾ
370 ವಿಧಿ ರದ್ದತಿ ನಂತರ 439 ಭಯೋತ್ಪಾದಕರ ಸಾವು – 109 ಸೈನಿಕರು ಹುತಾತ್ಮ…
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ 541 ಭಯೋತ್ಪಾದಕ ಘಟನೆಗಳಲ್ಲಿ 109 ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಸರ್ಕಾರ ಈಗ ಸಂಸತ್ತಿನಲ್ಲಿ ತಿಳಿಸಿದೆ. ಆದರೆ, ಪ್ರತಿ ಯೋಧ ಹುತಾತ್ಮರಾದ ಮೇಲೆ ನಾಲ್ವರು ಭಯೋತ್ಪಾದಕರೂ ಹತರಾಗಿದ್ದಾರೆ. ಆಗಸ್ಟ್ 5, 2019 ರಿಂದ (ವಿಶೇಷ ಸ್ಥಾನಮಾನವನ್ನು ಕಿತ್ತುಕೊಂಡ ದಿನಾಂಕ) ಜಮ್ಮು ಮತ್ತು ಕಾಶ್ಮೀರದಲ್ಲಿ 439 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಆದರೆ, ಈ ನಡುವೆ ಭಯೋತ್ಪಾದಕರ ದಾಳಿಯಲ್ಲಿ 98 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೇ ಸುಮಾರು 5.3 ಕೋಟಿ ಮೌಲ್ಯದ ಆಸ್ತಿ ಹಾನಿಯಾಗಿದೆ.
ಹೆಚ್ಚು ಮಾಹಿತಿ : 370 ವಿಧಿ ರದ್ದತಿ ನಂತರ 439 ಭಯೋತ್ಪಾದಕರ ಸಾವು – 109 ಸೈನಿಕರು ಹುತಾತ್ಮ…
ಸಂವಿಧಾನವನ್ನ ಪುನಃ ರಚಿಸುವ ಅವಶ್ಯಕತೆ ಇದೆ… ಕೆ ಸಿ ಆರ್
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮಂಗಳವಾರ ಭಾರತದಲ್ಲಿ ಸಂವಿಧಾನವನ್ನು ಪುನಃ ಬರೆಯುವ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ ಮತ್ತು ಇದಕ್ಕಾಗಿ ದೇಶದ ಹಲವು ನಾಯಕರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥರು ಇತರ ನಾಯಕರೊಂದಿಗೆ ಮಾತನಾಡಲು ಪ್ರಾರಂಭಿಸಿದ್ದಾರೆ ಮತ್ತು ಶೀಘ್ರದಲ್ಲೇ ದೇಶಕ್ಕಾಗಿ ಹೋರಾಡುವುದಾಗಿ ಘೋಷಿಸಲಿದ್ದಾರೆ ಎಂದು ಹೇಳಿದರು.
ಹೆಚ್ಚು ಮಾಹಿತಿ : National – ಸಂವಿಧಾನವನ್ನ ಪುನಃ ರಚಿಸುವ ಅವಶ್ಯಕತೆ ಇದೆ… ಕೆ ಸಿ ಆರ್
ಏರ್ ಇಂಡಿಯಾದ ಪ್ರಯಾಣಿಕರನ್ನು ರತನ್ ಟಾಟಾ ಸ್ವಾಗತಿಸಿದ್ದು ಹೀಗೆ…
69 ವರ್ಷಗಳ ನಂತರ ಏರ್ ಇಂಡಿಯಾದ ಕಮಾಂಡ್ ಮತ್ತೆ ಟಾಟಾ ಕೈಗೆ ಬಂದಿದೆ. ಇದೇ ಖುಷಿಯಲ್ಲಿ ರತನ್ ಟಾಟಾ ಪ್ರಯಾಣಿಕರನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಅವರ ಈ ಆಡಿಯೋ ಸಂದೇಶವನ್ನು ಏರ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ರತನ್ ಟಾಟಾ ಅವರು ಏರ್ ಇಂಡಿಯಾ ವಿಮಾನದಲ್ಲಿ ಹಾರುವ ಪ್ರಯಾಣಿಕರನ್ನು ಸ್ವಾಗತಿಸಿದ್ದಾರೆ.
ಹೆಚ್ಚು ಮಾಹಿತಿ : National – ಏರ್ ಇಂಡಿಯಾದ ಪ್ರಯಾಣಿಕರನ್ನು ರತನ್ ಟಾಟಾ ಸ್ವಾಗತಿಸಿದ್ದು ಹೀಗೆ…
ವಿದ್ಯುತ್ ಶಾಕ್ ನೀಡಿ ಕಿರುಕುಳ ಕೊಟ್ಟರು – ಚೀನಾ ಸೈನಿಕರ ಕೃತ್ಯ ಬಿಚ್ಚಿಟ್ಟ ನಾಪತ್ತೆಯಾಗಿದ್ದ ಯುವಕ
ಭಾರತ ಮತ್ತು ಚೀನಾ ಗಡಿಯಲ್ಲಿ ಕಾಣೆಯಾಗಿದ್ದ ಅರುಣಾಚಲ ಪ್ರದೇಶದ 17 ವರ್ಷದ ಭಾರತೀಯ ಪ್ರಜೆ ಮಿರಾಮ್ ಟ್ಯಾರೋನ್ ಎಂಬ ಬಾಲಕನಿಗೆ ನೆರೆಯ ದೇಶದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯಿಂದ ವಿದ್ಯುತ್ ಶಾಕ್ ನೀಡಿ ಕಿರುಕುಳ ಕೊಟ್ಟಿದೆ ಎಂದು ಈಶಾನ್ಯ ರಾಜ್ಯದ ಸಂಸದ ತಪಿರ್ ಗಾವೊ ಹೇಳಿದ್ದಾರೆ.
ಹೆಚ್ಚು ಮಾಹಿತಿ : ವಿದ್ಯುತ್ ಶಾಕ್ ನೀಡಿ ಕಿರುಕುಳ ಕೊಟ್ಟರು – ಚೀನಾ ಸೈನಿಕರ ಕೃತ್ಯ ಬಿಚ್ಚಿಟ್ಟ ನಾಪತ್ತೆಯಾಗಿದ್ದ ಯುವಕ
ಟಿಎಂಸಿ ಅಧ್ಯಕ್ಷರಾಗಿ ಮಮತಾ ಬ್ಯಾನರ್ಜಿ ಅವಿರೋಧ ಆಯ್ಕೆ…
ಟಿಎಂಸಿ ಅಧ್ಯಕ್ಷರಾಗಿ ಮಮತಾ ಬ್ಯಾನರ್ಜಿ ಅವಿರೋಧ ಆಯ್ಕೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಮಮತಾ ಬ್ಯಾನರ್ಜಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಬುಧವಾರ ತಿಳಿಸಿದ್ದಾರೆ.
ಹೆಚ್ಚು ಮಾಹಿತಿ : West Bengal – ಟಿಎಂಸಿ ಅಧ್ಯಕ್ಷರಾಗಿ ಮಮತಾ ಬ್ಯಾನರ್ಜಿ ಅವಿರೋಧ ಆಯ್ಕೆ…
ಬ್ರಹ್ಮೋಸ್ ಮತ್ತು Anti ಟ್ಯಾಂಕ್ ಯುರಾನ್ ಕ್ಷಿಪಣಿ ಯಶಸ್ವಿ ಪರೀಕ್ಷೆ…
ಭಾರತೀಯ ನೌಕಾಪಡೆಯ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಬುಧವಾರ ಬ್ರಹ್ಮೋಸ್ ಮತ್ತು ಟ್ಯಾಂಕ್ ವಿರೋಧಿ ಯುರಾನ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಎರಡೂ ಕ್ಷಿಪಣಿಗಳು ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಬ್ರಹ್ಮೋಸ್ ಮತ್ತು ಯುರಾನ್ ಕ್ಷಿಪಣಿಗಳು ಈಗ ಸೇನೆಯ ಬಳಕೆಗೆ ಸಿದ್ಧವಾಗಿವೆ.
#WATCH | Andaman & Nicobar Command tweets, "Successful launch of Brahmos & Uran anti-ship missiles by ANC Naval component further validates capabilities for defence of our islands." pic.twitter.com/MeJ1cyE6ZY
— ANI (@ANI) February 2, 2022
ಹೆಚ್ಚು ಮಾಹಿತಿ : ಬ್ರಹ್ಮೋಸ್ ಮತ್ತು Anti ಟ್ಯಾಂಕ್ ಯುರಾನ್ ಕ್ಷಿಪಣಿ ಯಶಸ್ವಿ ಪರೀಕ್ಷೆ…
ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆ
ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 1,61,386 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟ್ವೀಟ್ ಮಾಡಿದೆ.
ದೇಶದಲ್ಲಿ ಕರೊನಾ ಸಕ್ರೀಯ ಪ್ರಕರಣಗಳು 16,21,603 ಲಕ್ಷ. ಇದರ ಪ್ರತಿಶತವು ಶೇ 3.90 ರಷ್ಟಿದೆ. ದಿನದ ಏರಿಕೆಯು ಶೇ 9.26 ಪ್ರತಿಶತದಷ್ಟಿದ್ದು, ವಾರದ ಏರಿಕೆ ಪ್ರಮಾಣವು 14.15 ರಷ್ಟಿದೆ. ಕಳೆದ 24 ಗಂಟೆಯಲ್ಲಿ ಚೇತರಸಿಕೊಂಡವರು 2,81,109 ಲಕ್ಷ ಜನರು. ಇದರ ಪ್ರತಿಶತವು ಶೇ 94.91 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಹೆಚ್ಚು ಮಾಹಿತಿ : Covid: ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆ
ಎಎಸ್ ಐ ಮೇಲೆ ಗುಂಡಿನ ದಾಳಿ
ಜಮ್ಮು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಮಿಶಿಜಿಪೋರಾ ಪ್ರದೇಶದಲ್ಲಿ ಭಯೋತ್ಪಾದಕರು ಪೊಲೀಸ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಎಎಸ್ಐ ಶಬೀರ್ ಅಹ್ಮದ್ ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆದಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಎಎಸ್ ಐ ಶಬಿರ್ ಗಾಯಗೊಂಡಿದ್ದು, ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಲಿಸಿದ್ದಾರೆ. ಇವರು ಶೋಪಿಯಾನ್‌ನ ಅಮಿಶಿಜಿಪೋರಾ ಪ್ರದೇಶದಲ್ಲಿ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹಿಂತಿರುಗುತ್ತಿದ್ದಾಗ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಸಿದ್ದಾರೆ.