TOP 10 News : ಹರ್ಷನ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ , ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು
ಹರ್ಷನ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್
ಶಿವಮೊಗ್ಗ : ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ… ಘಟನೆ ನಡೆಯುವ ಮುಂಚೆ ಹರ್ಷನಿಗೆ ಇಬ್ಬರು ಹುಡುಗಿಯರು ಒಂದೇ ಸಮನೇ ಕಾಲ್ ಮಾಡ್ತಿದ್ದ ವಿಚಾರವನ್ನ ಹರ್ಷನ ಸ್ನೇಹಿತ ಬಿಚ್ಚಿಟ್ಟಿದ್ದಾರೆ.. ಇಬ್ಬರು ಹುಡುಗಿಯರು ಕೊಲೆಯಾಗುವುದಕ್ಕೂ ಮೊದಲೂ ಕರೆ ಮಾಡುತ್ತಿದ್ದರು , ಪದೇಪದೇ ವಿಡಿಯೋ ಕಾಲ್ ಮಾಡಿದ್ದರು ಎನ್ನಲಾಗಿದೆ.. ಹೀಗಾಗಿ ಹುಡುಗೀರನ್ನ ಸಂಚಿನಲ್ಲಿ ಶಾಮೀಲು ಮಾಡಿಕೊಳ್ಳಲಾಗಿತ್ತಾ ಅನ್ನೋ ಅನುಮಾನ ಮೂಡಿದೆ..
ಹರ್ಷ ಕೊಲೆ ಖಂಡಿಸಿ ಹಿಂದುಪರ ಸಂಘಟನೆಗಳಿಂದ ಪ್ರತಿಭಟನೆ
ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅರಸಿಕೇರೆ, ಬೆಳಗಾವಿ ,ವಿಜಪುರದಲ್ಲಿ, ಮಡಕೇರಿ, ಗದಗ, ಚಿತ್ರದುರ್ಗ, ಬೆಂಗಳೂರು ಮತ್ತು ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಹಿಂದುಪರ ಸಂಘನೆಗಳು ಪ್ರತಿಭಟನೆ ಮಾಡಿವೆ.
ಬಿಜೆಪಿ-ಕಾಂಗ್ರೆಸ್ ವಿರುದ್ಧ ಹೆಚ್ ಡಿಕೆ ಕಿಡಿ
ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ʼವಿಕೃತ ಕೇಕೆʼ ಹಾಕುತ್ತಿವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ವಿರುದ್ಧದ ಕಿಡಿಕಾರಿದ್ದಾರೆ.
ಸದ್ಯದ ಬೆಳವಣಿಗೆಗಳ ಬಗ್ಗೆ ಟ್ವೀಟ್ ಮಾಡಿರುವ ಹೆಚ್ ಡಿ ಕೆ, ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ ಎಂದಿದ್ದಾರೆ.
ನನ್ನನ್ನ ಬಂಧಿಸಿ ಎಂದ ಡಿಕೆಶಿಗೆ ಬಿಜೆಪಿ ಟಾಂಗ್
ಬೆಂಗಳೂರು : ನನ್ನನ್ನು ಬಂಧಿಸಿ ಎಂದಿದ್ದ ಕೆಪಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಟಾಂಗ್ ನೀಡಿದ್ದು, ಜೈಲು ಹಕ್ಕಿಯ ಅನುಭವ ಇದೆ ಎಂಬ ಕಾರಣಕ್ಕಾಗಿ ಬಂಧಿಸಿ, ಬಂಧಿಸಿ ಎನ್ನುತ್ತಿದ್ದೀರಾ ಎಂದು ಕಾಲೆಳೆದಿದೆ. “ಹರ್ಷ ಕೊಲೆಯಲ್ಲಿ ಕೆಲವರನ್ನು ಬಂಧಿ ಸಿದ್ದಾರೆ. ಘಟನೆಗೆ ನನ್ನ ಪ್ರಚೋದನೆ ಇದೆ ಎಂದು ಹೇಳುತ್ತಿರುವುದರಿಂದ ನನ್ನನ್ನು ಬಂಧಿಸಲಿ, ಸಚಿವರೇ ನಿಷೇಧಾಜ್ಞೆ ಮುರಿದು ಮೆರವಣಿಗೆ ನಡೆಸಿ ಕಲ್ಲು ಹೊಡೆಸಿದ್ದಾರಲ್ಲ ಅವರ ಮೇಲೆ ಪ್ರಕರಣ ಏಕಿಲ್ಲ. ಇದಕ್ಕೆ ಖಾಕಿ ತೊಟ್ಟವರು ಉತ್ತರಿಸಬೇಕು” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದರು.
ಉತ್ತರ ಪ್ರದೇಶ ಚುನಾವಣೆ – 4ನೇ ಹಂತದ ಮತದಾನ
ಉತ್ತರ ಪ್ರದೇಶದ ನಾಲ್ಕನೇ ಹಂತದ 59 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಇಂದು ರಾಜಧಾನಿ ಲಕ್ನೋ ಮತ್ತು ಲಖಿಂಪುರ ಖೇರಿ ಸೇರಿದಂತೆ ಸೋನಿಯಾ ಗಾಂಧಿ ಅವರ ಭದ್ರಕೋಟೆಯಾದ ರಾಯ್ ಬರೇಲಿಯ ಐದು ಕ್ಷೇತ್ರಗಳಲ್ಲಿ ಮತ್ತು ಪಿಲಿಭಿತ್, ಲಖಿಂಪುರ ಖೇರಿ, ಸೀತಾಪುರ್, ಹರ್ದೋಯಿ, ಉನ್ನಾವೋ, ಲಕ್ನೋ, ರಾಯ್ ಬರೇಲಿ, ಬಂದಾ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ಕೂಡ ಚುನಾವಣೆ ನಡೆದಿದೆ.
ಉಕ್ರೇನ್ ನಿಂದ ಭಾರತಕ್ಕೆ ಬಂದ ವಿದ್ಯಾರ್ಥಿಗಳು
ಉಕ್ರೇನ್ನಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳು ಸೇರಿದಂತೆ 241 ಭಾರತೀಯರನ್ನು ಏರ್ ಇಂಡಿಯಾ ವಿಶೇಷ ವಿಮಾನ ಮೂಲಕ ಭಾರತಕ್ಕೆ ಕರೆತರಲಾಯಿತು. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಉದ್ವಿಗ್ನತೆ ಉಂಟಾದ ಕಾರಣ ಭಾರತೀಯ ಪ್ರಜೆಗಳನ್ನು ಕರೆತರಲು ಕೇಂದ್ರ ಸರ್ಕಾರ ಏರ್ ಇಂಡಿಯಾದ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಅದರಲ್ಲಿ ಮೊದಲ ವಿಮಾನ 241 ಭಾರತೀಯರನ್ನು ಹೊತ್ತು ಮಂಗಳವಾರ ರಾತ್ರಿ 11.45 ರ ಸುಮಾರಿಗೆ ದೆಹಲಿಗೆ ಬಂದಿಳಿದಿದೆ.
ಹಾಲಿವುಡ್ ನಲ್ಲೂ ಕೆಜಿಎಫ್ 2
ಕೆಜಿಎಫ್ 2 ಇಂಗ್ಲಿಷ್ ನಲ್ಲೂ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಹೌದು ವಿಶ್ವಾದ್ಯಂತ ಈ ಸಿನಿಮಾದ ಕ್ರೇಜ್ ಇರೋದ್ರಿಂದ , ಸಿನಿಮಾವನ್ನ 5 ಭಾಷೆಗಳ ಜೊತೆಗೆ ಇಂಗ್ಲಿಷ್ ನಲ್ಲೂ ರಿಲೀಸ್ ಮಾಡುವ ಪ್ಲಾನ್ ನಲ್ಲಿದೆ ಸಿನಿಮಾ ತಂಡ ಎನ್ನಲಾಗ್ತಿದೆ..
ಚೇತನ್ ಗೆ 14 ದಿನಗಳ ನ್ಯಾಯಾಂಗ ಬಂಧನ
ನ್ಯಾಯಾಂಗ ನಿಂದನೆ ಆರೋಪದಡಿ ನಟ ಹಾಗೂ ಸಾಮಾಜಿಕ ಹೋರಾಟಗಾರ ನಟ ಆದಿನಗಳು ಚೇತನ್ ಪೊಲೀಸರಿಂದ ಅರೆಸ್ಟ್ ಇದೀಗ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಿಸಿಸಿಐಗೆ ವಿಶೇಷ ಮನವಿ ಮಾಡಿದ ರೈನಾ
ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ ಸೋಲ್ಡ್ ಆದ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಸುರೇಶ್ ರೈನಾ, ಬಿಸಿಸಿಐಗೆ ವಿಶೇಷವಾದ ಮನವಿವೊಂದನ್ನು ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಆಡಲು ಅವಕಾಶ ಸಿಗದ ಭಾರತದ ಆಟಗಾರರಿಗೆ ಇತರೆ ದೇಶಗಳಲ್ಲಿ ನಡೆಯುವ ಲೀಗ್ ನಲ್ಲಿ ಆಡಲು ಅವಕಾಶ ಕೊಡಿ ಎಂದು ರೈನಾ ಮನವಿ ಮಾಡಿಕೊಂಡಿದ್ದಾರೆ.
ಯುವಿ ಗೆ ಕೊಹ್ಲಿ ಯಾವಾಗೂ ಛೀಕೋ….
ನೀನು ಪ್ರಪಂಚಕ್ಕೆ ಕಿಂಗ್ ಕೊಹ್ಲಿ ಆಗಿರಬಹುದು, ಆದ್ರೆ ನನಗೆ ಮಾತ್ರ ನೀನು ಎಂದಿಗೂ ಛೀಕೂ..! ನಿನ್ನಲಿರುವ ಛಲ, ಗೆಲ್ಲಬೇಕೆನ್ನುವ ಹಠ ಎಂದಿಗೂ ಬಿಡಬೇಡ ಎಂದು ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಭಾವುಕ ಪತ್ರ ಬರೆದಿದ್ದಾರೆ. ಅಲ್ಲದೇ ವಿರಾಟ್ ಗಾಗಿ ಗೋಲ್ಡನ್ ಬೂಟ್ ಅನ್ನು ಗಿಫ್ಟ್ ಕಳುಹಿಸಿದ್ದಾರೆ. ಎಂದಿನಂತೆ ಕೊಹ್ಲಿ ದೇಶವನ್ನು ಇನ್ನಷ್ಟು ಹೆಮ್ಮೆ ಪಡುವಂತೆ ಮಾಡಬೇಕು ಎಂದು ಯುವಿ ಆಶಿಸಿದ್ದಾರೆ.