ದೇಶದಲ್ಲಿ 2,68,833 ಕೇಸ್ , ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್, ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತ , TOP 10 NEWS
0.1 ದೇಶದಲ್ಲಿ 2,68,833 ಕೇಸ್
ದೇಶದಲ್ಲಿ ಕೊರೊನಾ ಮೂರನೇ ಅಲೆಯ ಅಬ್ಬರ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,68,833 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 402 ಮಂದಿ ಸೋಂಕಿತರ ಪ್ರಾಣ ಕಳೆದುಕೊಂಡಿದ್ದಾರೆ. 1,22,684 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
0.2 ಮಳವಳ್ಳಿಯಲ್ಲಿ ಕೊರೊನಾ ಸ್ಫೋಟ
ಮಳವಳ್ಳಿ ತಾಲೂಕಿನ ಶಿವನಸಮುದ್ರಂ ಸರ್ಕಾರಿ ಶಾಲೆಯಲ್ಲಿ ಕೊರೊನಾ ಸ್ಫೋಟಗೊಂಡಿದೆ. ಈ ಶಾಲೆಯಲ್ಲಿ 20 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡ ಕಾರಣ ಶಾಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಮಕ್ಕಳಿಗೆ ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.
0.3 ಯುಪಿ ಚುನಾವಣೆ – ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್
ಉತ್ತರ ಪ್ರದೇಶ ಚುನಾವನಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ ಪಟ್ಟಿಯಲ್ಲಿ ಮೊದಲ ಹೆಸರು ಯೋಗಿ ಆದಿತ್ಯನಾಥ್ ಅವರದ್ದಾಗಿದ್ದು, ಗೋರಖ್ ಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕೆಲದಿನಗಳಿಂದ ಯೋಗಿ ಅಯೋಧ್ಯೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.
0.4 ಹೆಚ್ಚಾಗಲಿದೆ ಹಾಲಿನ ದರ…
ಬೆಂಗಳೂರು: ರಾಜ್ಯ ಸರಕಾರ ಹಾಲಿನ ದರವನ್ನು ಏರಿಕೆ ಮಾಡಲು ಮುಂದಾಗಿದೆ. ಹಾಲಿನ ದರವನ್ನು ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡೋದಕ್ಕೆ ಮುಂದಾಗಿದೆ. ಇದು ರಾಜ್ಯದ ಜನರಿಗೆ ಬಿಗ್ ಶಾಕ್ ನೀಡಿದೆ
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈಗ ಹಾಲಿನ ದರ ಏರಿಕೆಯಾದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಹಾಲಿನ ದರವನ್ನು ಏರಿಸಲು ಮುಂದಾಗಿರುವ ಕೆಎಂಎಫ್. ನಂದಿನಿ ಹಾಲಿನ ದರ ಸದ್ಯ ಪ್ರತಿ ಲೀಟರ್ ಗೆ 37 ರೂ ಇದ್ದು ಈಗ 3 ರೂ ಹೆಚ್ಚಿಸಿದರೆ ಹಾಲಿನ ದರವು ಲೀಟರ್ ಗೆ 40 ರೂ ಆಗಲಿದೆ.
0.5 ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತಕ್ಕೆ ಹವಾಮಾನ ವೈಪರಿತ್ಯ ಕಾರಣ
ನವದೆಹಲಿ: ಕಳೆದ ತಿಂಗಳು ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮರಣಹೊಂದಿದ್ದರು. ಈ ಅಪಘಾತಕ್ಕೆ ಹವಾಮಾನ ವೈಪರಿತ್ಯ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. ಕಳೆದ ವರ್ಷ ಡಿಸೆಂಬರ್ 8ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲ್ಲಿಂಗ್ಟನ್ ಗೆ ಪ್ರಯಾಣಿಸುತ್ತಿದ್ದ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಮತ್ತು 13 ಸೇನಾ ಸಿಬ್ಬಂದಿ ಕೂನೂರು ಕಣಿವೆಯಲ್ಲಿ ಹೆಲಿಕಾಪ್ಟ್ ರ್ ಅಪಘಾತ ದುರಂತದಿಂದ ಮರಣ ಹೊಂದಿದರು.
0.6 ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ
ನವದೆಹಲಿ: ಸರಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ 2788 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಅರ್ಜಿದಾರರು ಗಡಿ ಭದ್ರತಾ ಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್ನಿಂದ ಕಡ್ಡಾಯವಾಗಿ 10ನೇ ತರಗತಿ, ಐಟಿಐ, ಡಿಪ್ಲೋಮಾ ಪಾಸಾಗಿರಬೇಕು. ಮತ್ತು ಅಭ್ಯರ್ಥಿಗಳು ಆಯಾ ಟ್ರೇಡ್‌ಗಳಲ್ಲಿ ಎರಡು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು. ಹಾಗೂ ವೃತ್ತಿ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಹೊಂದಿರಬೇಕು. ಜೊತೆಗೆ ಟ್ರೇಡ್ನಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.
0.8 ಮೇಕೆದಾಟು ಯೋಜನೆಗೆ ಚೇತನ್ ಕಿಡಿ
ಮೇಕೆದಾಟು ಯೋಜನೆ ಕುರಿತು ನಟ ಚೇತನ ಅಸಮಾಧಾನ ಹೊರಹಾಕಿದ್ದಾರೆ. ಈ ಯೋಜನೆಯಿಂದ ಪರಿಸರ ನಾಶವಾಗುತ್ತಿದೆ, ಮೂರು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಕಾರಣಿಗಳು ಕಾಂಟ್ರ್ಯಾಕ್ಟರ್ ಸ್ವಾರ್ಥಕ್ಕೋಸ್ಕರ ಇದೆಲ್ಲ ಮಾಡುತ್ತಿದ್ದಾರೆ. ಈ ಯೋಜನೆಯು 9,000 ಕೋಟಿ ರೂಪಾಯಿಂದ ಕೂಡಿದೆ. ಯೋಜನೆಯು ಜಾರಿಯಾದರೆ ಸುತ್ತಮುತ್ತಲಿನ 12-18 ಸಾವಿರ ಎಕರೆ ಕಾಡು ನಾಶವಾಗುತ್ತದೆ. ಹಾಗೇ ಅಲ್ಲಿ ವಾಸಿಸುತ್ತಿರುವ ಶ್ರಮಜೀವಿಗಳನ್ನು ಒಕ್ಕಲೆಬ್ಬಿಸೋಕೆ ಪ್ರಯತ್ನಿಸುತ್ತಿದ್ದಾರೆ. ಅನೇಕ ರಾಜಕೀಯ ಶಕ್ತಿಗಳು ಅವರನ್ನು ಹೆದರಿಸುತ್ತಿದ್ದಾರೆ. ಈಗ ರಾಜಕಾರಣಿಗಳೇ ಕಾಂಟ್ರ್ಯಾಕ್ಟರ್, ಕಾಂಟ್ರ್ಯಾಕ್ಟರ್ಗಳೇ ರಾಜಕಾರಣಿಗಳಾಗಿದ್ದಾರೆ ಎಂದು ಚೇತನ್ ಕಿಡಿಕಾರಿದರು.
0.7 1.5 ಕೋಟಿ ಫಾಲೋವರ್ಸ್ ಗಳಿಸಿದ ಅಲ್ಲು..!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಗೆ ಪುಷ್ಪ ಸಿನಿಮಾದ ನಂತರ ಭಾರತದಾದ್ಯಂತ ಕ್ರೇಜ್ ಹೆಚ್ಚಾಗಿದ್ದು, ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.. ಈ ನಡುವೆ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 15 ಮಿಲಿಯನ್ ಫಾಲೋವರ್ಸ್ ಗಳಾಗಿದ್ದು, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ ಸಂಕ್ರಾಂತಿಗೆ ವಿಶ್ ಮಾಡಿದ್ದಾರೆ ಅಲ್ಲು
0.9 ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 5ನೇ ಸ್ಥಾನಕ್ಕೆ ಕುಸಿದ ಭಾರತ
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲಿನ ಬಳಿಕ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಟೀಂ ಇಂಡಿಯಾ ಐದನೇ ಸ್ಥಾನಕ್ಕೆ ಕುಸಿದು ಬಿದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳೀಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಪಡೆ ಐದನೇ ಸ್ಥಾನಕ್ಕೆ ಕುಸಿದಿದೆ.
- ಜೈಪುರ್ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ
ದೀಪಕ್ ಹೂಡಾ ಹಾಗೂ ಅರ್ಜುನ್ ದೇಶ್ವಾಲ್ ಸೊಗಸಾದ ಆಟದ ನೆರವಿನಿಂದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ 53ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ 38-28 ರಿಂದ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು ಸೋಲಿಸಿತು. ಈ ಗೆಲುವಿನ ಮೂಲಕ ಜೈಪುರ್ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.