top 5 cinima news of the day
ಬರ್ತ್ ಡೇ ಸಂಭ್ರಮದಲ್ಲಿ ‘ಆರ್ಮುಗಂ’ : ಸೀರಿಯಲ್ ಸೆಟ್ ಚಂದ್ರಪ್ಪನ ಎಂಟ್ರಿ ಹೇಗಿದೆ ಗೊತ್ತಾ..!
ಸಕಲಕಲಾವಲ್ಲಭ ಸ್ಯಾಂಡಲ್ ವುಡ್ ನ ಆರ್ಮುಗಂ ರವಿ ಶಂಕರ್ ಅವರಿಗೆ ಇಂದು ಹುಟ್ಟುಹಹಬ್ಬದ ಸಂಭ್ರಮ. 54ನೇ ವತಂಸಕ್ಕೆ ಕಾಲಿಟ್ಟಿರುವ ನಟ ರವಿಶಂಕರ್ ಗೆ ಅಭಿಮಾನಿಗಳು, ಸಿನಿಮಾರಂಗದವರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.
ವಿಶೇಷ ಅಂದ್ರೆ ಇಂದು ತಮ್ಮ ಹುಟ್ಟುಹಬ್ಬದ ದಿನವೇ ರವಿಶಂಕರ್ ಅವರು ಸೀರಿಯಲ್ ಸೆಟ್ ಚಂದ್ರಪ್ಪನಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ರವಿಶಂಕರ್ ಹೊಸ ಸಿನಿಮಾವಾದ ‘ತಲ್ವಾರ್ ಪೇಟೆಯಲ್ಲಿ’ ಸೀರಿಯಲ್ ಸೆಟ್ ಚಂದ್ರಪ್ಪ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚೇತಕ್ ಸ್ಕೂಟರ್ ಮೇಲೆ ಸೀರಿಯಲ್ ಸೆಟ್, ಮೈಕ್ ಸೆಟ್ ಹೊತ್ತುಕೊಂಡು ಹೋಗುತ್ತಿರುವ ರವಿಶಂಕರ್ ಲುಕ್ ಅವರ ಬರ್ತ್ ಡೇ ಪ್ರಯುಕ್ತ ರಿಲೀಸ್ ಆಗಿದೆ. ರವಿಶಂಕರ್ ಹೊಸ ಗೆಟಪ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬರ್ತ್ ಡೇ ಸಂಭ್ರಮದಲ್ಲಿ ‘ಆರ್ಮುಗಂ’ : ಸೀರಿಯಲ್ ಸೆಟ್ ಚಂದ್ರಪ್ಪನ ಎಂಟ್ರಿ ಹೇಗಿದೆ ಗೊತ್ತಾ..!
ಸುದೀಪ್ ಜೊತೆಗೆ ‘ಪ್ಯಾಂಟಮ್’ ನಲ್ಲಿ ಹೆಜ್ಜೆ ಹಾಕಲಿದ್ದಾರಂತೆ ಕತ್ರಿನಾ ಕೈಫ್..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ‘ಫ್ಯಾಂಟಮ್’ ಸಿನಿಮಾ ಸದಾ ಒಂದೊಂದೇ ವಿಚಾರದಲ್ಲಿ ಸುದ್ದಿಯಲ್ಲಿಯೇ ಇದೆ. ಇದೀಗ ಬಾಲಿವುಡ್ ನ ಖ್ಯಾತ ನಟಿ ಕತ್ರೀನಾ ಕೈಫ್ ಸುದೀಪ್ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಇಇದೀಗ ವೈರಲ್ ಆಗಿದೆ. ಅಂದ್ಹಾಗೆ ಫ್ಯಾಂಟಮ್ ಸಿನಿಮಾದ ವಿಶೇಷ ಹಾಡಿನಲ್ಲಿ ಕತ್ರಿನಾ ಕೈಫ್ ಹೆಜ್ಜೆ ಹಾಕಲಿದ್ದಾರೆ ಎಂಬ ಮಾಹಿತಿ ಕೆಲ ಮೂಲಗಳಿಂದ ಸಿಕ್ಕಿದೆ. ಇನ್ನೂ ಕತ್ರೀನಾ ಬಾರದೇ ಇದ್ದ ಪಕ್ಷದಲ್ಲಿ, ನೋರಾ ಫತೇಹಿ ಎಂಟ್ರಿಯಾಗಲಿದ್ದಾರೆ ಎಂದು ಹೇಳಲಾಗ್ತಿದೆ.
ಸುದೀಪ್ ಜೊತೆಗೆ ‘ಪ್ಯಾಂಟಮ್’ ನಲ್ಲಿ ಹೆಜ್ಜೆ ಹಾಕಲಿದ್ದಾರಂತೆ ಕತ್ರಿನಾ ಕೈಫ್..!
ಪ್ರೇಯಸಿಯ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಕಿರುತೆರೆ ‘ಅರ್ಜುನ’..!
ಕಿರುತೆರೆಯ ಜನಪ್ರಿಯತೆ ಗಳಿಸಿದ ಮಹಾಭಾರತ ಪೌರಾಣಿಕ ಧಾರಾವಾಹಿಯಲ್ಲಿ ಅರ್ಜುನನಾಗಿ ಮಿಂಚಿದ ನಟ ಶಾಹೀರ್ ಶೇಖ್ ಬಹುಕಾಲದ ಗೆಳತಿ ರುಚಿಕಾ ಕಪೂರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ಪ್ರೇಯಸಿಯನ್ನ ಪರಿಚಯಿಸಿದ್ದ ಶಾಹೀರ್ ಇದೀಗ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೌದು ಕೊರೊನಾ ಹಾವಳಿಯಿಂದಾಗಿ ಸಿಂಪಲ್ ಆಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದ್ಹಾಗೆ ಈ ಜೋಡಿ ಜೂನ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. 20201ರ ಜೂನ್ ನಲ್ಲಿ ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಕೊಳ್ಳಲಿದ್ದಾರೆ.
‘ಪವರ್ ಆಫ್ ಯೂತ್’ ಪ್ರೋಮೋಗೆ ಪವರ್ ಸ್ಟಾರ್ ಫ್ಯಾನ್ಸ್ ಫಿದಾ..!
ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಹೈ ವೋಲ್ಟೇಜ್ ಸಿನಿಮಾವಾಗಿರುವ ಯುವರತ್ನ ಸಿನಿಮಾದ ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿ ರಿಲೀಸ್ ಗೆ ರೆಡಿಯಾಗಿದೆ. ಚಿತ್ರ ಯಾವಾಗ ತೆರೆ ಮೇಲೆ ಬರುತ್ತೆ ಅಂತ ಕಾದು ಕುಳಿತಿರೋ ಅಭಿಮಾನಿಗಳಿಗೆ 27 ರ ಸಂಜೆ 4.30 ಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.
ಅಂದ್ಹಾಗೆ ಸಿನಿಮಾದ ಪ್ರೋಮೋ ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತೆಲುಗಿನಲ್ಲೂ ಧೂಳೆಬ್ಬಿಸುತ್ತಿದೆ. ತೆಲುಗಿನ ಅಭಿಮಾನಿಗಳು ವೆಲ್ ಕಮ್ ಟೂ ಟಾಲಿವುಡ್ ಅಪ್ಪ ಸರ್ ಅಂತ ಕಮೆಂಟ್ ಮಾಡಿ ಪುನೀತ್ ಅವರಿಗೆ ಜೈ ಕಾರ ಹಾಕ್ತಿದ್ದಾರೆ.
‘ಅದಿಪುರುಷ’ ನಿಗೆ ನಾಯಕಿ ಫೈನಲ್ : ಸೀತೆಯ ಅವತಾರದಲ್ಲಿ ಬಾಲಿವುಡ್ ನ ಖ್ಯಾತ ನಟಿ..!
ಡಾರ್ಲಿಂಗ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾವಾಗಿರುವ ಆದಿಪುರುಷ್ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಳ್ತಾಯಿದ್ದು, ಬಾಲಿವುಡ್ ಖ್ಯಾತ ನಟ ಸೈಫ್ ಅಲಿಖಾನ್ ರಾವಣನಾಗಿ ಮಿಂಚಲಿದ್ದಾರೆ. ಆದ್ರೆ ಸಿನಿಮಾದಲ್ಲಿ ನಾಯಕಿ ಯಾರಾಗಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿತ್ತು. ಇದೀಗ ಎಲ್ಲಾ ಕುತೂಹಲಗಳಿಗೂ ತೆರೆಬಿದ್ದಿದೆ. ಚಿತ್ರದಲ್ಲಿ ಸೀತೆ ಪಾತ್ರಕ್ಕೆ ನಾಯಕಿ ಫಿಕ್ಸ್ ಆಗಿದ್ದಾರಂತೆ. ಹೌದು.. ಆದಿಪುರುಷ್ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ನ ಖ್ಯಾತ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದಿಪುರುಷ್ ಸಿನಿಮಾದಲ್ಲಿ ನಾಯಕಿಯಾಗಿ ಕೃತಿ ಸನೂನ್ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ.
‘ಅದಿಪುರುಷ’ ನಿಗೆ ನಾಯಕಿ ಫೈನಲ್ : ಸೀತೆಯ ಅವತಾರದಲ್ಲಿ ಬಾಲಿವುಡ್ ನ ಖ್ಯಾತ ನಟಿ..!
top 5 cinima news of the day
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







