ಏಷ್ಯಾದ 50 ಟಾಪ್ ಸೆಲೆಬ್ರಿಟಿಗಳು: ಟಾಪ್ 2 ನಲ್ಲಿ ಇಬ್ಬರು ಭಾರತೀಯರು: ಯಾರ್ಯಾರು..!
ವಿಶ್ವದ ಜನಪ್ರಿಯ ಬ್ರಿಟನ್ ಮೂಲದ ‘ಈಸ್ಟರ್ನ್ ಐ’ ನಿಯತಕಾಲಿಕೆ 2020ರ ಸಾಲಿನ ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತೀಯ ಸೆಲೆಬ್ರಿಟಗಳು ಇದ್ದಾರೆ. ಆದ್ರೆ ಟಾಪ್ 2 ಸ್ಥಾನಗಳು ಬಾರತೀಯ ತಾರೆಯರ ಪಾಲಾಗಿರೋದು ಹೆಮ್ಮೆಯ ವಿಚಾರವಾಗಿದೆ.
ಅಂದ್ಹಾಗೆ ಮೊದಲನೇ ಸ್ಥಾನದಲ್ಲಿ ಜನರ ಪಾಲಿನ “ರಿಯಲ್ ಹೀರೋ” ಸೋನು ಸೂದ್ ಇದ್ದಾರೆ. ಹಹೌದು ಕೊರೊನಾ ಲಾಕ್ ಡೌನ್ ಸಮಯದಿಂದ ಹಿಡಿದು ಇಲ್ಲಿಯತನಕ ಬಡಬಗ್ಗರಿಗೆ , ಬಡ ವಿದ್ಯಾರ್ಥಿಗಳು, ಕಾರ್ಮಿಕರಿಗೆ ಸಹಾಯ ಮಾಡುತ್ತಾ ಸಮಾಜಮುಖಿ ಕಾರ್ಯಗಳಿಂದ ಕೇವಲ ಬಾರತವಷ್ಟೇ ಇಲ್ಲದೇ ವಿಶ್ವದ ಗಮನ ಸೆಳೆದಿರುವ ಸೋನು ಟಾಪ್ 1 ಸ್ಥಾನದಲ್ಲಿದ್ದಾರೆ. ಈ ಸ್ಥಾನಕ್ಕೆ ಅವರು ಅರ್ಹರೂ ಕೂಡ. ಸಿನಿಮಾಗಳ ಮೂಲಕ ಮಾತ್ರವಲ್ಲದೆ,
ಸಾವಿರಾರು ಜನರ ಜೀವನದ ಮೇಲೆ ಪ್ರಭಾವ ಬೀರುವುದರಿಂದ, ಮಾನವೀಯ ಕಾರ್ಯಗಳಿಂದ ಭಾರಿ ಜನಪ್ರೀತಿ ಗಳಿಸಿರುವ ಸೋನು ಸೂದ್, ಏಷ್ಯಾದ ನಂಬರ್ 1 ಸೆಲೆಬ್ರಿಟಿ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಸ್ಟರ್ನ್ ಐ ನ ಸಂಪಾದಕ ಅಜರ್ ನಜೀರ್, ಏಷ್ಯಾದ ನಂಬರ್ 1 ಸೆಲೆಬ್ರಿಟಿಗಳ ಸ್ಥಾನಕ್ಕೆ ಸೋನು ಸೂದ್ ಅರ್ಹ ವ್ಯಕ್ತಿ. ಸೋನು ಸೂದ್ ಮಾಡಿದಂತೆ ಇನ್ನಾವ ಸೆಲೆಬ್ರಿಟಿ ಸಹ ಕೊರೊನಾ ಸಮಯದಲ್ಲಿ ಸಹಾಯ ಮಾಡಿಲ್ಲ ಎಂದಿದ್ದಾರೆ.
ಇನ್ನೂ ಕಾರ್ಮಿಕರನ್ನು ಊರಿಗೆ ಕಳುಹಿಸುವುದು, ಶಸ್ತ್ರಚಿಕಿತ್ಸೆಗಳಿಗೆ ಹಣಕಾಸು ಸಹಾಯ, ಬಡವರಿಗೆ ಹಣಕಾಸು ನೀಡಿ ನೆರವಾಗುವುದು, ವಿದ್ಯಾರ್ಥಿಗಳಿಗೆ ಸಹಾಯ, ರೈತರಿಗೆ ಸಹಾಯ, ಸೇರಿದಂತೆ ಅನೇಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸೋನು ಸೂದ್ ಗೆ ಬ್ರಿಟನ್‌ನ ‘ಜಿನ್ ಹೆರ್ಶೋಲ್ಟ್ ಹ್ಯುಮೆನಿಟೇರಿಯನ್’ ಪ್ರಶಸ್ತಿ ನೀಡಬೇಕು ಎಂದು ಅಜರ್ ನಜೀರ್ ಹೇಳಿದ್ದಾರೆ.
ಯಾರೂ ಬೇಡ ಎಂದು ಎಲ್ಲರನ್ನೂ ಹೊರಗೆ ಅಟ್ಟಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ !
ಇನ್ನೂ ಮತ್ತೊಂದು ಖುಷಿ ವಿಚಾರ ಅಂದ್ರೆ ಎರಡನೇ ಸ್ಥಾನದಲ್ಲೂ ನಮ್ಮ ಭಾರತೀಯರೇ ಇದ್ದಾರೆ. ಇವರು ಭಾರತದ ಮೂಲದವರು ಆದರೆ ಕೆನೇಡಿಯನ್ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾರೆ. ಇಡೀ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿರುವ ಯೂಟ್ಯೂಬರ್ ಲಿಲ್ಲಿ ಸಿಂಗ್ 2ನೇ ಸ್ಥಾನದಲ್ಲಿದ್ದಾರೆ. ಇವರಿಗೆ ಭಾರತ ಮಾತ್ರವಲಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಅಭಿಮಾನಿಗಳಿದ್ದಾರೆ.
ಛಲ ಬಿಡದ ಲೂಸ್ ಮಾದ : ಯೋಗಿ ಹೊಸ ಪ್ರಯತ್ನಕ್ಕೆ ಅಭಿಮಾನಿಗಳು ಫುಲ್ ಖುಷ್..!
ಇನ್ನೂ ಉಳಿದಂತೆ ಭಾರತೀಯರು ಟಾಪ್ 50 ಯಲ್ಲಿ ಯಾವ ಯಾವ ಸ್ಥಾನದಲ್ಲಿ ಯಾರಿದ್ದಾರೆ ಅಂತ ನೋಡೋದಾದ್ರೆ 5ನೇ ಸ್ಥಾನದಲ್ಲಿ ಖ್ಯಾತ ಗಾಯಕರಾದ ಅರ್ ಮಾನ್ ಮಲ್ಲಿಕ್ ಅವರಿದ್ದಾರೆ. 6 ನೇ ಸ್ಥಾನದಲ್ಲಿ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ, ಪಾನ್ ಇಂಡಿಯಾ ಸ್ಟಾರ್ ಪ್ರಭಾಸ್ 7ನೇ ಸ್ಥಾನದಲ್ಲಿದ್ದಾರೆ. 8ನೇ ಸ್ಥಾನದಲ್ಲಿ ಹಿಂದಿ ಕಿರುತೆರೆ ನಟಿ ಸುರಭಿ ಚಂದನ, 20ನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್, 31ನೇ ಸ್ಥಾನದಲ್ಲಿ ಭಾರತ ಮೂಲದ ಲೇಖಕಿ ಅವನಿ ದೋಷಿ, ಆಯುಷ್ಮಾನ್ ಖುರಾನಾ 11, 14 ರಲ್ಲಿ ಶೆಹನಾಜ್ ಗಿಲ್, 32ರಲ್ಲಿ ಫ್ಯಾಷನ್ ಡಿಸೈನರ್ ಮಸಬಾ ಗುಪ್ತಾ, 36ರಲ್ಲಿ ಮಿಮಿಕ್ರಿ ಕಲಾವಿಧೆ ಸಲೋನಿ ಗೌರ್, 37ರಲ್ಲಿ ಗಾಯಕಿ ಧ್ವನಿ ಭಾನುಶಾಲಿ, 47ನೇ ಸ್ಥಾನದಲ್ಲಿ ಹಿಂದಿ ಕಿರುತೆರೆ ನಟಿ ಹೆಲ್ಲಯ ಶಾ, 50ನೇ ಸ್ಥಾನದಲ್ಲಿ ಬ್ರಿಟೀಶ್ ಇಂಡಿಯನ್ ಅನುಷ್ಕಾ ಶಂಕರ್ ಇದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel