ADVERTISEMENT
Monday, March 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಟಾಪ್ ಸಿನಿಮಾ ಸುದ್ದಿಗಳು : Latest Updates

Namratha Rao by Namratha Rao
February 15, 2021
in Cinema, Newsbeat, ಮನರಂಜನೆ
cinema
Share on FacebookShare on TwitterShare on WhatsappShare on Telegram

ಟಾಪ್ ಸಿನಿಮಾ ಸುದ್ದಿಗಳು : Latest Updates

ಕನ್ನಡ ನಿರ್ದೇಶಕನ ಜೊತೆ ಪ್ಯಾನ್ ಇಂಡಿಯಾ ಸಿನಿಮಾಗೆ OK ಎಂದ ‘ರಾಖಿ ಭಾಯ್’..!

ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಹೈಓಲ್ಟೇಜ್ ಪ್ಯಾನ್ ಇಂಡಿಯಾ ಸಿನಿಮಾವಾದ ಕೆಜಿಎಫ್ ನ ಬಳಿಕ ರಾಖಿ ಭಾಯ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಅವರ ಖದರ್ ಬದಲಾಗಿಹೋಗಿದೆ. ಇಂಡಿಯಾದ ಬಿಗ್ ಸ್ಟಾರ್ ಆಗಿ ರಾಖಿ ಭಾಯ್ ಗುರುತಿಸಿಕೊಂಡಿದ್ದು, ಪರಭಾಷಾ ಅಭಿಮಾನಿಗಳ ಬಳಗವನ್ನೂ ಹೊಂದಿದ್ದಾರೆ. ಹೀಗಿರೋವಾಗ KGF ನ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಸಹಜವಾಗಿಯೇ ಅಭಿಮಾನಿಗಳಲ್ಲಿ ಇರುತ್ತೆ.

Related posts

ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ

ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ

March 23, 2026
ಧುರಂಧರ್ 2 ಪ್ರೊಪಗಾಂಡ ಸಿನಿಮಾ ಎಂದವರಿಗೆ ಚಳಿ ಬಿಡಿಸಿದ ಅನುಪಮ್ ಖೇರ್ ರಣವೀರ್ ಸಿಂಗ್ ನಟನೆಗೆ ಸಲಾಂ ಎಂದ ಬಾಲಿವುಡ್ ಹಿರಿಯ ನಟ

ಧುರಂಧರ್ 2 ಪ್ರೊಪಗಾಂಡ ಸಿನಿಮಾ ಎಂದವರಿಗೆ ಚಳಿ ಬಿಡಿಸಿದ ಅನುಪಮ್ ಖೇರ್ ರಣವೀರ್ ಸಿಂಗ್ ನಟನೆಗೆ ಸಲಾಂ ಎಂದ ಬಾಲಿವುಡ್ ಹಿರಿಯ ನಟ

March 23, 2026

ಇದೀಗ ಹೊಸ ಸುದ್ದಿಯ ಪ್ರಕಾರ ಯಶ್ ಅವರು ತಮಿಳಿನ ಸೂಪರ್ ಹಿಟ್ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಸಿನಿಮಾಕ್ಕೂ ಮುನ್ನಾ ಕನ್ನಡದ ನಿರ್ದೇಶಕನ ಸಿನಿಮಾಕ್ಕೆ ಎಸ್ ಎಂದಿದ್ದಾರೆ ಎನ್ನಲಾಗುತ್ತಿದೆ.ಹೌದು ಮಫ್ತಿ ಸೇರಿ ಹಲವಾರು ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿರುವ ನರ್ತನ್, ಯಶ್ ಅವರ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದು, ಈಗಾಗಲೇ ರಾಖಿ ಭಾಯ್ ಗೆ ಕಥೆ ಹೇಳಿದ್ದಾರೆ ಎನ್ನಲಾಗ್ತಿದೆ. ಅಲ್ದೇ ನರ್ತನ್ ಸಿನಿಮಾಕ್ಕೆ ಯಶ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗ್ತಿದೆ. ಈ ಸಿನಿಮಾದ ಚಿತ್ರೀಕರಣವು ಶಂಕರ್ ಸಿನಿಮಾಕ್ಕೂ ಮುನ್ನವೇ ಪ್ರಾರಂಭವಾಗಲಿದೆಯಂತೆ. ಅದು ಅಲ್ದೇ ಈ ಸಿನಿಮಾವೂ ಸಹ ಪ್ಯಾನ್ ಇಂಡಿಯಾ ಸಿನಿಮಾಗಿರಲಿದೆ ಎನ್ನಲಾಗ್ತಿದ್ದು, ಯಶ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

‘ಆತ್ಮಹತ್ಯೆಗೆ ಶರಣಾಗ್ತೀನಿ’…! ಟ್ವಿಟ್ಟರ್ ನಲ್ಲಿ ಗಳಗಳನೆ ಅತ್ತ ತಮಿಳು ನಟಿ ಮೀರಾ ಮಿಥುನ್..! – video

ತಮಿಳು ನಟಿ, ಮಾಡಲ್ ಮೀರಾ ಮಿಥುನ್  ಸಾಮಾಜಿಕ ಜಾಲತಾಣದಲ್ಲಿ 20 ನಿಮಿಷಗಳ ವಿಡಿಯೋವೊಂದನ್ನ ಪೊಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಹೌದು ವಿಡಿಯೋ ಹರಿಬಿಟ್ಟಿರುವ ನಟಿ ನನಗೆ ಖಿನ್ನತೆ ಕಾಡ್ತಿದೆ, ಸಾಮಾಜಿಕ ಜಾಲತಾಣದಲ್ಲಿ ನನಗೆ ಕಿರುಕುಳ ನೀಡಲಾಗಿದೆ, ಮಾನಸಿಕವಾಗಿ ನಾನು ಬಹಳ ನೊಂದಿದ್ದೇನೆ ಎಂದು ಕಣ್ಣೀರಾಕಿದ್ದಾರೆ.

ಟ್ವಿಟ್ಟರ್‌ನಲ್ಲಿ ಅಳಲು ತೋಡಿಕೊಂಡಿರುವ ನಟಿ , ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕಾಮೆಂಟ್‌ ಗಳು ನನ್ನನ್ನು ಸಾಯುವಂತೆ ಮಾಡುತ್ತಿದೆ. ಕೆಲವರನ್ನು ನನ್ನ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಸತ್ತು ಹೋಗು ಎಂದು ಹೀಯಾಳಿಸುತ್ತಿದ್ದಾರೆ. ನನಗೆ ಬದುಕಬೇಕು ಎಂದು ಅನಿಸುತ್ತಿಲ್ಲ ಎಂದು ನೊಂದುಕೊಂಡು ಮಾತನಾಡಿದ್ದಾರೆ.

ಪ್ರೇಮಿಗಳ ದಿನದಂದೇ ಹಸೆಮಣೆ ಏರಿದ ‘ಲವ್ ಮಾಕ್ಟೇಲ್’ ಜೋಡಿ ..!

ಬೆಂಗಳೂರು: ಇಂದು ಅಂದ್ರ ಪ್ರೇಮಿಗಳ ದಿನದಂದು ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹಸೆಮಣೆ ಏರಿದ್ದಾರೆ. ಬಹುದಿನಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಲವ್ ಮಾಕ್ಟೇಲ್ ಸಿನಿಮಾದ ಸಕ್ಸಸ್ ಬಳಿಕ ಇಬ್ಬರ ಪ್ರೇಮದ ವಿಚಾರವನ್ನ ಬಹಿರಂಗಪಡಿಸಿದ್ದರು ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್ಫುಲ್ ಮಂಟಪದಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆದಿದೆ.

ಬೆಳಗ್ಗೆ 9:30 ರಿಂದ 10:30ರ ನಡುವಿನ ಮುಹೂರ್ತದಲ್ಲಿ ವಿವಾಹ ಕಾರ್ಯ ಸಂಪನ್ನಗೊಂಡಿದೆ. ಮದುವೆಗೆ ಚಿತ್ರರಂಗದ ಗಣ್ಯರು ಹಾಗೂ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಇನ್ನೂ ಮೆಹಂದಿ ಹಾಗೂ ಅರಿಶಿಣ ಶಾಸ್ತ್ರಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೋಡಿ ಇದೀಗ ಮದುವೆ ಕಾರ್ಯಕ್ರಮದ ಫೋಟೋವನ್ನೂ ಶೇರ್ ಮಾಡಿದ್ದಾರೆ. ಇನ್ನೂ ಈ ಕ್ಯೂಟ್ ಕಪಲ್ ಫೋಟೋಸ್ ಗೆ ನೆಟ್ಟಿಗರು ಫಿದಾ ಆಗಿದ್ದು, ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನನಗೆ ನೀಡುತ್ತಿರುವ ಕಿರುಕುಳ ನಿಲ್ಲುವುದಿಲ್ಲ. ಈ ಬಗ್ಗೆ ನಾನು ಎಲ್ಲವೂ ದಾಖಲಿಸುತ್ತಿದ್ದೇನೆ, ಮಾನಸಿಕವಾಗಿ ನನ್ನ ಆರೋಗ್ಯ ಹದಗೆಡುತ್ತಿದೆ, ನನ್ನ ಸಾವಿಗೆ ಕಾರಣರಾದ ಪ್ರತಿಯೊಬ್ಬರನ್ನು ಗಲ್ಲಿಗೇರಿಸಬೇಕು ಎಂದು ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ದಾರೆ. ಕಳೆದ ಮೂರು ವರ್ಷದಿಂದ ನಿರಂತರವಾಗಿ ನಾನು ಖಿನ್ನತೆಗೆ ಒಳಗಾಗಿದ್ದೇನೆ. ಸಮಾಜದಲ್ಲಿ ನನಗೆ ಯಾವುದೇ ರೀತಿ ಗೌರವ ಕೊಡ್ತಿಲ್ಲ. ಪ್ರತಿಕ್ಷಣವೂ ನನಗೆ ಅನ್ಯಾಯವಾಗ್ತಿದೆ. ನನ್ನ ಈ ನೋವನ್ನು ಕೊನೆಯಾಗಿಸಲು ನಾನು ನಿರ್ಧರಿಸಿದ್ದೇನೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ.

ಜಿಮ್ ರವಿ ನಟನೆಯ ‘ಪುರುಷೋತ್ತಮ’ ಚಿತ್ರದ ಅದ್ಧೂರಿ ಮುಹೂರ್ತ..!

ಬೆಂಗಳೂರು : ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಜಿಮ್ ರವಿ ಅವರು ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸುತ್ತಿರುವ ಅವರದ್ದೇ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಪುರುಷೋತ್ತಮ್ ಅದ್ಧೂರಿಯಾಗಿ ಸೆಟ್ಟೇರಿದೆ. ಇಂದು ಚಿತ್ರತಂಡದಿಂದ ಅದ್ಧೂರಿ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಕಲಾ ಸಾಮ್ರಾಟ ಎಸ್ . ನಾರಾಯಣ್ ಅವರು ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ರು.ಜಿಮ್ ರವಿ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಜಿಮ್ ರವಿ ಈಗ ನಾಯಕನಟನಾಗಿ ಪರಿಚಯ ಆಗ್ತಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಗಳಲ್ಲಿ ಜಿಮ್ ರವಿ ಪೋಷಕ ಪಾತ್ರ ನಿರ್ವಹಿಸಿದ್ದಾರೆ. ಬಹಳ ವರ್ಷದ ಬಳಿಕ ಸ್ಯಾಂಡಲ್ವುಡ್ನಲ್ಲಿ ಜಿಮ್ ರವಿ ಹೀರೋ ಆಗಿ ಪ್ರಮೋಟ್ ಆಗಿದ್ದಾರೆ. ಸ್ವತಃ ಜಿಮ್ ರವಿ ಅವರೇ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸಿನಿಮಾಗೆ ಪುರುಷೋತ್ತಮ ಎಂದು ಹೆಸರಿಡಲಾಗಿದೆ.Gym Ravi

ಪ್ರೇಮಿಗಳ ದಿನದಂದೇ ರಿಲೀಸ್ ಆದ ‘ರಾಧೆ ಶ್ಯಾಮ್’ ಟೀಸರ್ ಗೆ ವಾವ್ಹಾ ಎನ್ನುತ್ತಿದ್ದಾರೆ ನೆಟ್ಟಿಗರು..!  

ವಾಲೆಂಟೈನ್ಸ್ ಡೇ ವಿಶೇಷವಾಗಿ ಪ್ರಭಾಸ್ – ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷೆಯ ರಾಧೆ ಶ್ಯಾಮ್ ಟೀಸರ್ ರಿಲೀಸ್ ಆಗಿದೆ. ಪ್ರೇಮಿಗಳ ದಿನದಂದು ರಿಲೀಸ್ ಮಾಡಲಾಗಿರುವ ಪ್ರೇಮಭರಿತವಾದ ಸಿನಿಮಾದ ಟೀಸರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲವೇ ಸೆಂಕೆಂಡುಗಳ ದೃಶ್ಯಗಳನ್ನು ಒಳಗೊಂಡ ಟೀಸರ್ ಇದಾಗಿದೆಯಾದ್ದು, ಸ್ಯಾನಿಷ್ ನಲ್ಲಿ ಪ್ರಭಾಸ್ ಹೇಳೋ ಡೈಲಾಗ್ ಅರ್ಥ ಆಗ್ದೇ ಇದ್ರು ಸಿನಿಮಾ ಮೇಲಿನ  ಪ್ರೇಕ್ಷಕರ ನಿರೀಕ್ಷೆಯನ್ನ ಮಾತ್ರ ಮತ್ತಷ್ಟು ಹೆಚ್ಚಿಸಿದೆ. ಸಿನಿಮಾಚದಲ್ಲಿ ಲವರ್ ಬಾಯ್ ಪ್ರಭಾಸ್ ಗೆಟಪ್, ಬ್ಯೂಟಿಫುಲ್ ಪೂಜಾ ಹೆಗ್ಡೆಯ ಕ್ಯೂಟ್ ಲುಕ್ , ಪ್ಯಾರಿಸ್‌ನ ಹಳೆಯ ರೈಲ್ವೆ ಸ್ಟೇಷನ್‌ ನೆಟ್ಟಗರ ಕಣ್ಮನ ಸೆಳೆಯುತ್ತಿದೆ.

UV Creations Youtube Channel‌ನಲ್ಲಿ ಇಂದು ಟೀಸರ್ ರಿಲೀಸ್ ಆಗಿದ್ದು, ಲಕ್ಷಾನುಗಟ್ಟಲೇ ವೀವ್ಸ್ ಹಾಗೂ ಲೈಕ್ಸ್ ಪಡೆದುಕೊಂಡಿದೆ. ಸಾವಿರಾರು ಮಂದಿ ಕಮೆಂಟ್ ಗಳ ಮೂಲಕ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಗೆ ಚಿತ್ರಕ್ಕೆ ಶುಭಹಾರೈಸ್ತಿದ್ದಾರೆ. ಅಷ್ಟೇ ಅಲ್ಲ ಮತ್ತೊಂದು ವಿಶೇಷ ಅಂದ್ರೆ ಕನ್ನಡದಲ್ಲೂ ಟೀಸರ್ ರಿಲೀಸ್ ಆಗಿರೋದು ಹೌದು ಈ ಟೀಸರ್ ಕನ್ನಡಲ್ಲಿಯೂ ರಿಲೀಸ್ ಆಗಿದ್ದು ಪ್ರಭಾಸ್ ಅವರ ಕನ್ನಡದ ಅಭಿಮಾನಿಗಳ ಮನಗೆದ್ದಿದೆ.

ರೋಮ್‌ ನ ಅತ್ಯಂತ ರಮಣೀಯ ಪ್ರದೇಶವೊಂದರ ದೃಶ್ಯಗಳೊಂದಿಗೆ ಆರಂಭವಾಗುವ ಟೀಸರ್‌ ನಲ್ಲಿ ರೊಮೇನಿಯನ್ ರೈಲ್ವೆ ನಿಲ್ದಾಣದಲ್ಲಿ ಜನಸಮೂಹದ ನಡುವೆ ಪ್ರಭಾಸ್‌ – ಪೂಜಾ ಹೆಗ್ಡೆಯನ್ನ ಹುಡುಕುತ್ತಾ ಇಟಾಲಿಯನ್‌ ಭಾಷೆಯಲ್ಲಿ  ‘Sei Un Angelo? Devo Morire per incontrarti? ಎಂದು ಕರೆಯುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತದೆ.  ಆ ನಂತರ ಇಬ್ಬರ ನಡುವಿನ ಪ್ರೀತಿಯ ಸಂಭಾಷಣೆ ಹೈಲೈಟ್‌.

 

ನಮ್ಮ `ಸಿಂಬಾ’ ಎಂದು ಮಗುವಿನ ವಿಡಿಯೋ ಹಂಚಿಕೊಂಡ ಮೇಘನಾ ರಾಜ್

ಬೆಂಗಳೂರು : ಪ್ರೇಮಿಗಳ ದಿನದಂದೇ ಜೂನಿಯರ್ ಚಿರುವಿನ ಫೋಟೋ/ ವಿಡಿಯೋ ರಿವೀಲ್ ಆಗಿದೆ. ವ್ಯಾಲೆಂಟೈನ್ಸ್ ಡೇ ದಿನದಂದು ಜೂನಿಯರ್ರರ ಚಿರುವಿನ ದರ್ಶನ ಮಾಡಿಸುತ್ತೇನೆ ಎಂದು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಮೇಘನಾ ರಾಜ್ ಪೋಸ್ಟ್ ಹಾಕಿದ್ದರು.

ಅದರಂತೆ  ಸಾಮಾಜಿಕ ಜಾಲತಾಣಗಳಲ್ಲಿ ಜೂನಿಯರ್ ಚಿರುವಿನ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರೇಮಿಗಳ ದಿನದ ಅಂಗವಾಗಿ ಮೊದಲ ಬಾರಿಗೆ ಪುಟ್ಟ ಕಂದಮ್ಮನ ವಿಡಿಯೋವನ್ನು ಫೋಟೋ ಮಾಡಿದ್ದಾರೆ.

ವಿಡಿಯೋವನ್ನ ನೋಡಿದ ಅಭಿಮಾನಿಗಳು ಜೂನಿಯರ್ ಚಿರುವಿಗೆ ಶುಭ ಹಾರೈಸುತ್ತಿದ್ದಾರೆ. ಲೈಕ್ಸ್ ಶೇರ್ ಮಾಡುತ್ತಾ ಖುಷಿ ಪಡುತ್ತಿದ್ದಾರೆ.

ಅಂದಹಾಗೆ ಕಳೆದ ಅಕ್ಟೋಬರ್ 22 ರಂದು ಮೇಘನಾ ರಾಜ್ ಗಂಡು ಮಗುವಿನ ಜನ್ಮ ನೀಡಿದ್ದರು. ವಿಶೇಷ ಅಂದ್ರೆ ಅಂದೇ ಚಿರು ಮತ್ತು ಮೇಘನಾ ಎಂಗೇಹ್ ಮೆಂಟ್ ಆಗಿದ್ದರು.

ಮಗು ಹುಟ್ಟಿದಾಗ ಫೋಟೋ ರಿವೀಲ್ ಮಾಡಿದ್ದ ಚಿರಂಜೀವಿ ಕುಟುಂಬ ಮತ್ತೇ ಯಾವತ್ತೂ ಮಗುವಿನ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ.

ವ್ಯಾಲೆಂಟೈನ್ಸ್ ಡೇ ದಿನ ಮಗುವನ್ನ ಜಗತ್ತಿಗೆ ಪರಿಚಯಿಸೋದಾಗಿ ಮೇಘನಾ ರಾಜ್ ಹೇಳಿಕೊಂಡಿದ್ದರು. ಅದರಂತೆ ಇಂದು ತಮ್ಮ ಪುಟ್ಟ ಕಂದಮ್ಮನ ವಿಡಿಯೋ ಹಂಚಿಕೊಂಡಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BollywoodCinemafilmHOllywoodKollywoodmollywoodSandalwoodTollywood
ShareTweetSendShare
Join us on:

Related Posts

ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ

ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ

by Shwetha
March 23, 2026
0

ಬಹು ದಿನಗಳ ತೀವ್ರ ಕುತೂಹಲ ಹಾಗೂ ಒಳಮನೆ ಜಟಾಪಟಿಗೆ ಕೊನೆಗೂ ತೆರೆಬಿದ್ದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಹಿರಿಯ ನಾಯಕ,...

ಧುರಂಧರ್ 2 ಪ್ರೊಪಗಾಂಡ ಸಿನಿಮಾ ಎಂದವರಿಗೆ ಚಳಿ ಬಿಡಿಸಿದ ಅನುಪಮ್ ಖೇರ್ ರಣವೀರ್ ಸಿಂಗ್ ನಟನೆಗೆ ಸಲಾಂ ಎಂದ ಬಾಲಿವುಡ್ ಹಿರಿಯ ನಟ

ಧುರಂಧರ್ 2 ಪ್ರೊಪಗಾಂಡ ಸಿನಿಮಾ ಎಂದವರಿಗೆ ಚಳಿ ಬಿಡಿಸಿದ ಅನುಪಮ್ ಖೇರ್ ರಣವೀರ್ ಸಿಂಗ್ ನಟನೆಗೆ ಸಲಾಂ ಎಂದ ಬಾಲಿವುಡ್ ಹಿರಿಯ ನಟ

by Shwetha
March 23, 2026
0

ಬಾಲಿವುಡ್ ಅಂಗಳದಲ್ಲಿ ಪ್ರಸ್ತುತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ಧುರಂಧರ್ 2 ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಒಂದು...

ಬೆಂಗಳೂರಿಗರೇ ಎಚ್ಚರ  – ಕುಡಿಯುವ ನೀರು ಪೋಲು ಮಾಡಿದರೆ ಭಾರೀ ದಂಡ : ಜಲಮಂಡಳಿಯಿಂದ ಹೊಸ ರೂಲ್ಸ್ ಜಾರಿ

ಬೆಂಗಳೂರಿಗರೇ ಎಚ್ಚರ – ಕುಡಿಯುವ ನೀರು ಪೋಲು ಮಾಡಿದರೆ ಭಾರೀ ದಂಡ : ಜಲಮಂಡಳಿಯಿಂದ ಹೊಸ ರೂಲ್ಸ್ ಜಾರಿ

by Shwetha
March 23, 2026
0

ಬೇಸಿಗೆ ಆರಂಭಕ್ಕೂ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ನಗರದಲ್ಲಿ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕಾವೇರಿ ನೀರಿನ ಲಭ್ಯತೆಯಲ್ಲೂ ಕೊರತೆ ಎದುರಾಗಿದೆ....

ಚುನಾವಣೆಗೂ ಮುನ್ನವೇ ಬಾಗಲಕೋಟೆಯಲ್ಲಿ ಬಿಜೆಪಿ ಆಪರೇಷನ್ ಶುರು: ಕಾಂಗ್ರೆಸ್ ಶಿಬಿರದಲ್ಲಿ ಆತಂಕದ ಕಾರ್ಮೋಡ

ಚುನಾವಣೆಗೂ ಮುನ್ನವೇ ಬಾಗಲಕೋಟೆಯಲ್ಲಿ ಬಿಜೆಪಿ ಆಪರೇಷನ್ ಶುರು: ಕಾಂಗ್ರೆಸ್ ಶಿಬಿರದಲ್ಲಿ ಆತಂಕದ ಕಾರ್ಮೋಡ

by Shwetha
March 23, 2026
0

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಎಚ್ ವೈ ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆ ರಾಜ್ಯ ರಾಜಕಾರಣದಲ್ಲಿ ಭಾರಿ...

ಅಮಿತ್ ಶಾ ಬಳಿ ರಾಜ್ಯ ಕಮಲ ಪಡೆಯ ಜಾತಕ ಬಿಚ್ಚಿಟ್ಟ ಎಚ್ ಡಿ ಕೆ ಮೈತ್ರಿ ಧರ್ಮ ಪಾಲಿಸದ ನಾಯಕರ ಬಗ್ಗೆ ದೂರು!

ಅಮಿತ್ ಶಾ ಬಳಿ ರಾಜ್ಯ ಕಮಲ ಪಡೆಯ ಜಾತಕ ಬಿಚ್ಚಿಟ್ಟ ಎಚ್ ಡಿ ಕೆ ಮೈತ್ರಿ ಧರ್ಮ ಪಾಲಿಸದ ನಾಯಕರ ಬಗ್ಗೆ ದೂರು!

by Shwetha
March 23, 2026
0

ನವದೆಹಲಿ: ಯುಗಾದಿ ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram