ರಾಷ್ಟ್ರೀಯ – ಅಂತರಾಷ್ಟ್ರೀಯ ಪ್ರಮುಖ ಸುದ್ದಿಗಳು..!
‘ಮೋದಿ ಅವರದ್ದು ನಿರಂಕುಶ ಶೈಲಿ | ಸೋನಿಯಾ ಗಾಂಧಿ ಅಸಮರ್ಥರು’
ನವದೆಹಲಿ : ದಿವಂಗತ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ದಿ ಪ್ರೆಸಿಡೆನ್ಷಿಯಲ್ ಇಯರ್ಸ್ ಆತ್ಮಚರಿತ್ರೆ ಸದ್ಯ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲಿ ಪ್ರಣವ್ ಅವರು 2014ರ ಲೋಕಸಭಾ ಚುನಾವಣೆ ಬಗ್ಗೆ ಉಲ್ಲೇಖಿಸಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಬಗ್ಗೆ ಸಂಚಲನ ವ್ಯಾಖ್ಯಾನಗಳನ್ನು ಮಾಡಿದ್ದಾರೆ.
2014ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ರಾಜಕೀಯ ಗುರಿಯನ್ನ ಕಳೆದುಕೊಂಡಿತ್ತು. ಕಾಂಗ್ರೆಸ್ ನ ವ್ಯವಹಾರಗಳನ್ನು ನಿಭಾಯಿಸಿಲು ಸೋನಿಯಾ ಗಾಂಧಿ ಅಸಮರ್ಥರಾಗಿದ್ದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ‘ನಿರಂಕುಶ ಶೈಲಿ’ಯ ಕಾರ್ಯವೈಖರಿ’ಯನ್ನು ಪ್ರಯೋಗಿಸಿದರೆ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಯುಪಿಎಯನ್ನು ಉಳಿಸುವುದರಲ್ಲೇ ತಲ್ಲೀನರಾಗಿದ್ದರು. ಅದು ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಎಂದು ಆ ಸಂದರ್ಭದಲ್ಲಿ ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಬರೆದಿದ್ದಾರೆ.
‘ಏರ್ ಶೋ’ ವೀಕ್ಷಣೆಗಾಗಿ ಕಾಯುತ್ತಿದ್ದ ಸಾರ್ವಜನಿಕರಿಗೆ ಭಾರೀ ನಿರಾಸೆ..!
‘ಏರ್ ಶೋ’ ವೀಕ್ಷಣೆಗಾಗಿ ಕಾಯುತ್ತಿದ್ದ ಸಾರ್ವಜನಿಕರಿಗೆ ಭಾರೀ ನಿರಾಸೆ..!
ಬೆಂಗಳೂರು : 13ನೇ ಅಂತರಾಷ್ಟ್ರೀಯ ಏರೋ ಇಂಡಿಯಾ 2021ರ ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಆದ್ರೆ ಲೋಹಹದ ಹಕ್ಕಿಗಳ ಹಾರಾಟವನ್ನ ಕಣ್ತುಂಬಿಕೊಳ್ಳಬೇಕೆಂದಿದ್ದ ಸಾರ್ವಜನಿಕರಿಗೆ ಮಾತ್ರ ಬಿಗ್ ಶಾಕ್ ನಿಡಿದೆ. ಏರ್ ಶೋ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ.
ಹೌದು ಕೊರೊನಾ ಹಾವಳಿಯಿಂದಾಗಿ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವೇರ್ ಶೋಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 2021ರ ಫೆಬ್ರವರಿ 3ರಿಂದ 7ರವರೆಗೆ ಏರ್ ಶೋ ಕಾರ್ಯಕ್ರಮ ನಿಗದಿಯಾಗಿತ್ತು.
ಡಿ.17ರಂದು ಸಿಎಂಎಸ್ 01 ಸಂವಹನ ಉಪಗ್ರಹ ಉಡಾವಣೆ
ಬೆಂಗಳೂರು : ಇದೇ ತಿಂಗಳ 17 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‍ಎಲ್‍ವಿ – ಸಿ50 ಉಡಾವಣಾ ವಾಹಕವು ಸಂವಹನ ಉಪಗ್ರಹವನ್ನು (ಸಿಎಂಎಸ್-01) ಉಡಾವಣೆ ಮಾಡಲಿದೆ.
ಡಿಸೆಂಬರ್ 17 ರಂದು ಮಧ್ಯಾಹ್ನ 3:41 ಸಮಯಕ್ಕೆ ಸರಿಯಾಗಿ ಎಸ್‍ಡಿಎಸ್‍ಸಿಯ ಶಾರ್‍ನ 2ನೇ ಲಾಂಚ್ ಪ್ಯಾಡ್‍ನಿಂದ (ಎಸ್‍ಎಲ್‍ಪಿ) ಈ ಉಪಗ್ರಹ ಉಡಾವಣೆ ಆಗಲಿದೆ.
ಪ್ರತಿಭಟನೆಗೆ ಪ್ರಚೋದನೆ : ಪತ್ರಕರ್ತನನ್ನು ಗಲ್ಲಿಗೇರಿಸಿದ ಇರಾನ್ ಸರ್ಕಾರ
ಇರಾನ್ : ಆರ್ಥಿಕತೆ ವಿಚಾರವಾಗಿ ದೇಶದ ವಿರುದ್ಧ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಕ್ಕೆ ಇರಾನ್ ಸರ್ಕಾರ ಪತ್ರಕರ್ತನನ್ನ ಗಲ್ಲಿಗೇರಿಸಿದೆ. ಹೌದು ಈ ಹಿಂದೊಮ್ಮೆ ಆನ್ ಲೈನ್ ನಲ್ಲಿ ಪ್ರತಿಭಟನೆಗೆ ಪ್ರಚೋದನೆ ನೀಡಿದಕ್ಕೆ ಆತನನ್ನ ಗಡಿಪಾರು ಮಾಡಿತ್ತು.
ದೇಶದ ಆರ್ಥಿಕತೆ ವಿಚಾರಕ್ಕೆ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಜನರನ್ನು ಪ್ರಚೋದಿಸುವಂತಹ ಪೋಸ್ಟ್ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಪತ್ರಕಕರ್ತ ರುಹೋಲ್ಲಾಹ್ ಝಾಮ್ . ಈ ಪ್ರಕರಣದ ವಿಚಾರಣೆ ನಡೆಸಿರುವ ಇರಾನ್ ನ್ಯಾಯಾಲಯವು ಆತನನ್ನ ಗಲ್ಲಿಗೇರಿಸಿದೆ.
ಸಿಬಿಐ ವಶದಲ್ಲಿದ್ದ 103 ಕೆ.ಜಿ. ಚಿನ್ನ ನಾಪತ್ತೆ : ಹಾಗಾದ್ರೆ ಕದ್ದವರು ಯಾರು..!
ಟ್ರಂಪ್ ಗೆ ಸೋಲಿನ ಮೇಲೆ ಸೋಲು.. ಕಡೆಯ ಪ್ರಯತ್ನವೂ ಫೇಲು..!
ಅಮೆರಿಕ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಹೀನಾಯವಾಗಿ ಸೋಲುಂಡರೂ ಡೊನಾಲ್ಡ್ ಟ್ರಂಪ್ ಮಾತ್ರ ಸೋಲೊಪ್ಪಿಕೊಳ್ಲಲು ಸುತಾರಾಂ ಸಿದ್ಧರಿಲ್ಲ.
ಅಯ್ಯೋ ಮದುವೆಯಾಗಿ ತಪ್ಪು ಮಾಡಿದೆ… ನಾನು ದಿವಾಳೆಯಾದೆ : ರಾಖಿ ಸಾವಂತ್
ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರ ಗೆಲುವನ್ನು ಅಮಾನ್ಯ ಗೊಳಿಸಲು ನಿರ್ಮಿತ ಅಧ್ಯಕ್ಷರಾದ ಟ್ರಂಪ್ ಹೂಡಿದ್ದ ಮೊಕದ್ದಮೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದಕ್ಕೂ ಮುನ್ನ ಟ್ರಂಪ್ ಹೂಡಿದ್ದ ಮೊಕದ್ದಮೆಗಳನ್ನು ಸ್ಥಳೀಯ ಹಾಗೂ ಫೆಡರಲ್ ನ್ಯಾಯಾಧೀಶರುಗಳು ತಿರಸ್ಕರಿಸಿದ್ದರು. ಕಕೊನೆಗೆ ಸುಪ್ರೀಂ ಕೋರ್ಟ್ ನಲ್ಲೂ ಟ್ರಂಪ್ ಗೆ ಸೋಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel