ಪ್ರಮುಖ ರಾಷ್ಟ್ರೀಯ – ಅಂತರಾಷ್ಟ್ರೀಯ ಸುದ್ದಿಗಳು..!
ಭಾರತದ ಮೊದಲ ಸೌರಶಕ್ತಿ ಚಾಲಿತ ಚಿಕಣಿ ರೈಲು ಕಾರ್ಯಾರಂಭ
ಕೇರಳ : ಭಾರತದ ಮೊದಲ ಸೌರಶಕ್ತಿ ಚಾಲಿತ ಚಿಕಣಿ ರೈಲು ತಿರುವನಂತಪುರಂನ ವೇಲಿ ಪ್ರವಾಸಿ ಗ್ರಾಮದಲ್ಲಿ ಕಾರ್ಯಾರಂಭಿಸಿದೆ.
ದೇಶದಲ್ಲೇ ಸೌರಶಕ್ತಿ ಚಾಲಿತ ಮೊದಲ ಚಿಕಣಿ ರೈಲು ಇದಾಗಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳೆದ ತಿಂಗಳು ತಿರುವನಂತಪುರದ ವೆಲಿ ಪ್ರವಾಸಿ ಗ್ರಾಮದಲ್ಲಿ ಇದನ್ನು ಉದ್ಘಾಟಿಸಿದ್ದರು.
ಇನ್ನು ಈ ರೈಲು ಪರಿಸರ ಸ್ನೇಹಿಯಾಗಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಸೌಂದರ್ಯ ಆನಂದಿಸಲು ನೆರವಾಗಲಿದೆ. ಜೊತೆಗೆ ಒಂದು ಉತ್ತಮ ಅನುಭವ ನೀಡುತ್ತದೆ. ಪ್ರಯಾಣಿಕರು ರೈಲಿನಲ್ಲಿ ಸಂಚಾರ ಆರಂಭಿಸಿದ್ದಾರೆ.
ಕೊರೊನಾ ಲಸಿಕೆ ವಿತರಣೆ : ಕೇಂದ್ರದಿಂದ ಮಾರ್ಗದರ್ಶಿ ಸೂತ್ರ ರಿಲೀಸ್
ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಲಸಿಕೆ ಹಂಚಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರಂತೆ ಕೊರೊನಾ ಲಸಿಕೆ ವಿತರಿಸುವ ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಕೇಂದ್ರ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.
ಸೂತ್ರದಲ್ಲಿ ಏನಿದೆ..?
ಕೊರೊನಾ ಲಸಿಕೆ ವಿತರಿಸುವ ಕೇಂದ್ರಗಳ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್ ಮತ್ತು 8 ಡಿಗ್ರಿ ಸೆಲ್ಸಿಯನ್ ಮಧ್ಯೆ ಇರಬೇಕು.
ಒಂದು ಸೆಷನ್ ನಲ್ಲಿ 100 ಜನರಿಗೆ ಮಾತ್ರ ಲಸಿಕೆ
ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ಯೋಧರಿಗೆ ನಿರ್ದಿಷ್ಟ ಕೇಂದ್ರದಲ್ಲೇ ಲಸಿಕೆ ವಿತರಣೆ
ಲಸಿಕೆ ವಿತರಣಾ ಕೇಂದ್ರದಲ್ಲಿ ಐದು ಮಂದಿ ಸಿಬ್ಬಂದಿ ಇರೋದು ಕಡ್ಡಾಯ.
ಆರ್ಥಿಕ ಪರಿಸ್ಥಿತಿ ಇಳಿಮುಖವಾಗಿರುವಾಗ ಹೊಸ ಸಂಸತ್ ಯಾಕೆ : ಕಮಲ್ ಹಾಸನ್
ಚೆನ್ನೈ : ನೂತನ ಸಂಸತ್ ಭವನ ನಿರ್ಮಾಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಹರಿಹಾಯ್ದಿದ್ದಾರೆ.
ನರೇಂದ್ರ ಮೋದಿ ಅವರು ಡಿಸೆಂಬರ್ 10ರಂದು ದೆಹಲಿಯಲ್ಲಿ ನೂತನ ಸಂಸತ್ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ರು. ಸುಮಾರು 971 ಕೋಟಿ ವೆಚ್ಚದಲ್ಲಿ ಈ ನೂತನ ಭವನ ನಿರ್ಮಾಣವಾಗಲಿದೆ ಅಂತಾ ಅಂದಾಜು ಮಾಡಲಾಗಿದೆ.
ಈ ಕುರಿತು ಇದೀಗ ಟ್ವೀಟ್ ಮಾಡಿರುವ ಕಮಲ್ ಹಾಸನ್, ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ಅರ್ಧ ಭಾರತ ಹಸಿವಿನಿಂದ ಇದೆ.
ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ 1000 ಕೋಟಿಯ ಹೊಸ ಸಂಸತ್ ಭವನ ಯಾಕೆ ಅಂತ ಪ್ರಶ್ನಿಸಿದ್ದಾರೆ.
ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕೊರೋನವೈರಸ್ ಧೃಡ
ಕೇರಳದ ಎಲ್ಲಾ ಜನರಿಗೂ ಉಚಿತ ಕೊರೊನಾ ಲಸಿಕೆ..!
ಕೇರಳ: ಕೇರಳ ಸರ್ಕಾರ ರಾಜ್ಯದ ಜನರಿಗೆ ಭರ್ಜರಿ ಗುಡ್ ನ್ಯುಸ್ ನೀಡಿದೆ. ರಾಜ್ಯದ ಎಲ್ಲರಿಗೂ ಉಚಿತವಾಗಿ ಕೋವಿಡ್ 19 ಲಸಿಕೆ ನೀಡಲು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಪಿಣರಾಯಿ ವಿಜಯನ್ ಅವರು ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಲಸಿಕೆ ಲಭ್ಯವಿದೆ ಎಂಬುವುದು ಇನ್ನೂ ಸರಿಯಾಗಿ ತಿಳಿದಿಲ್ಲ. ಆದರೆ ಈ ಮಾಹಿತಿಗಳನ್ನು ತಿಳಿದುಕೊಂಡು ನಂತರ ರಾಜ್ಯದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದಿದ್ದಾರೆ.
ಇನ್ನೂ ಮಧ್ಯಪ್ರದೇಶ ಹಾಗೂ ತಮಿಳುನಾಡು ಸರ್ಕಾರ ರಾಜ್ಯದ ಜನರಿಗಾಗಿ ಉಚಿತವಾಗಿ ಲಸಿಕೆ ನೀಡೋದಾಗಿ ಘೋಷಣೆ ಮಾಡಿದ ಬಳಿಕ 3ನೇ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ.
ಬ್ಯಾಂಕ್ ಸಾಲ ಕಟ್ಟಲಾಗದೇ ಪರದಾಡುತ್ತಿರೋರಿಗೆ ಪರಿಹಾರ ನೀಡಿದ RBI..!
ನವದೆಹಲಿ: ಕೊರೊನಾ ಹಾವಳಿಯಿಂದಾಗಿ ಅನೇಕ ಉದ್ಯಮಗಳು ನೆಲಕಚ್ಚಿವೆ. ಲಾಕ್ ಡೌನ್ ನಿಂದಾಗಿ ಅನೇಕ ನೌಕರರು , ಬ್ಯಾಂಕ್ ಗ್ರಾಹಕರು ಸಾಲ ತೀರಿಸುವುದಕ್ಕೆ ಒದ್ದಾಡುವಂತಾಗಿದೆ. ಅಂತಹವರಿಗಾಗಿ RBI ಇದೀಗ ಪರಿಹಾರವೊಂದನ್ನ ನೀಡಿದೆ. ಹೌದು ಸಾಲ ಮರುಪಾವತಿಮಾಡಲು ತೊಂದರೆ ಎದುರಿಸುತ್ತಿರುವವರು ಸಾಲ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು RBI ಸ್ಪಷ್ಟಪಡಿಸಿದೆ. FAQ ವಿವರಣೆಯಲ್ಲಿ, ಸಾಲನೀಡುವ ಸಂಸ್ಥೆಗಳ ಮುಂದೆ ಅರ್ಜಿ ಯೊಂದನ್ನು ಭರ್ತಿ ಮಾಡುವ ಮೂಲಕ ಸಾಲಪಡೆಯುವವರು ಈ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಬಾರೀತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








