ADVERTISEMENT
Saturday, March 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಪ್ರಮುಖ ರಾಷ್ಟ್ರೀಯ – ಅಂತರಾಷ್ಟ್ರೀಯ ಸುದ್ದಿಗಳು: ಇತ್ತೀಚೆಗಿನ ಅಪ್ ಡೇಟ್ಸ್..!

Namratha Rao by Namratha Rao
February 15, 2021
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಪ್ರಮುಖ ರಾಷ್ಟ್ರೀಯ ಅಂತರಾಷ್ಟ್ರೀಯ ಸುದ್ದಿಗಳು: ಇತ್ತೀಚೆಗಿನ ಅಪ್ ಡೇಟ್ಸ್..!

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಕೌಟುಂಬಿಕ ಪಿಂಚಣಿ ಮಿತಿ ಏರಿಕೆ..!

ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಕೌಟುಂಬಿಕ ಪಿಂಚಣಿ ಗರಿಷ್ಠ ಮಿತಿಯನ್ನು ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ. ಇದರಿಂದ ಲಕ್ಷಾಂತರ ಕುಟುಂಬಕ್ಕೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.

ಇಲ್ಲಿ ತನಕ ಕುಟುಂಬ ಪಿಂಚಣಿ ಗರಿಷ್ಠ ಮಿತಿ 45,000 ರು ನಷ್ಟಿತ್ತು. ಈಗ ಈ ಮಿತಿಯನ್ನು 1,25,000 ರು ಪ್ರತಿ ತಿಂಗಳಿಗೆ ಏರಿಕೆ ಮಾಡಲಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.

Related posts

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

March 28, 2026
115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

March 28, 2026

ಆದರೆ, ಮೃತ ಪೋಷಕರ(ಇಬ್ಬರೂ ಸಹ ಸರ್ಕಾರಿ ನೌಕರರಾಗಿದ್ದು) ಪಿಂಚಣಿ(ಎರಡೂ ಕಡೆಯಿಂದ) ಮೊತ್ತ ಮಕ್ಕಳಿಗೆ ಸಿಗುವಾಗ ಎರಡು ಕುಟುಂಬದಿಂದ 1,25,000 ಪ್ರತಿ ತಿಂಗಳಿಗೆ ಎಂದು ನಿಗದಿಪಡಿಸಲಾಗಿದೆ. ಈ ಬಗ್ಗೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ(DoPPW) ಅಧಿಸೂಚನೆಯನ್ನು ಪರಿಶೀಲಿಸಬಹುದು.

 

ಮಹಾರಾಷ್ಟ್ರ : ಹೆತ್ತವರನ್ನು ನಿರ್ಲಕ್ಷ್ಯ ಮಾಡಿದ 7 ಉದ್ಯೋಗಿಗಳ ಸ್ಯಾಲರಿ ಕಟ್..!

ಉತ್ತರಪ್ರದೇಶ: ಮಕ್ಕಳನ್ನ ಕಷ್ಟ ಪಟ್ಟು ಅವರಿಗೆ ಜೀವನಕ್ಕೆ ಬೇಕಾದ ದಾರಿ ಮಾಡಿಕೊಟ್ಟು , ಅವರು ತಮ್ಮ ಕಾಲಿನ ಮೇಲೆ ನಿಲ್ಲುವುದಕ್ಕೆ ನೆರವಾಗುವ ತಂದೆ ತಾಯಿಯನ್ನ ವಯಸ್ಸಾದ ಮೇಲೆ ಮಕ್ಕಳು ನಿರ್ಲಕ್ಷ್ಯ ಮಾಡಿ ಬೀದಿಗೆ ತಳ್ಳಿರುವುದನ್ನ ನಾವು ನೋಡುತ್ತಲೇ ಇರುತ್ತೇವೆ.

ಆದ್ರೆ ಇಂತಹದ್ದೇ ತಪ್ಪು ಮಾಡಿದ ಮಕ್ಕಳಿಗೆ ಮಹಾರಾಷ್ಟ್ರದಲ್ಲಿ ವಿಧಿಸಲಾದ ಶಿಕ್ಷೆ ನೊಡಿದ್ರೆ ಎಲ್ಲೆಡೆ ಈ ರೀತಿ ನಿಯಮ ಜಾರಿ ಮಾಡಿದ್ರೆ ಚೆನ್ನಾಗಿರುತ್ತೆ. ಆಗಲಾದ್ರೂ ತಂದೆ ತಾಯಿಯನ್ನ ಮಕ್ಕಳು ಅಲಕ್ಷ್ಯ ಮಾಡುವುದಿಲ್ಲ ಎನ್ನಿಸುತ್ತೆ.

ಹೌದು ವಯಸ್ಸಾದ ಹೆತ್ತವರನ್ನು ನಿರ್ಲಕ್ಷಿಸಿದವರಿಗೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯೊಂದು ತಕ್ಕ ಶಿಕ್ಷೆಯನ್ನೇ ನೀಡಿದೆ. ಅಪ್ಪ-ಅಮ್ಮನನ್ನು ನೋಡಿಕೊಳ್ಳದ 7 ಮಂದಿ ಉದ್ಯೋಗಿಗಳ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಲಾಗಿದೆ ಎಂದು ಇಲ್ಲಿನ ಲಾತೂರು ಜಿಲ್ಲಾ ಪರಿಷತ್ ಅಧ್ಯಕ್ಷ ರಾಹುಲ್ ಬೋಂದ್ರೆ ತಿಳಿಸಿದ್ದಾರೆ.
ವೇತನದಿಂದ ಕಡಿತವಾದ ಮೊತ್ತವನ್ನು ಆಯಾ ಉದ್ಯೋಗಿಯ ಹೆತ್ತವರ ಖಾತೆಗೆ ಜಮೆ ಮಾಡಲಾಗುತ್ತದೆ. ಕಳೆದ ನವೆಂಬರ್ ನಲ್ಲಿ ಜಿಲ್ಲಾ ಪರಿಷತ್ ಇಂಥದ್ದೊಂದು ತೀರ್ಮಾನ ಕೈಗೊಂಡಿತ್ತು. ಹೆತ್ತವರ ನಿರ್ಲಕ್ಷ್ಯಕ್ಕೆ ಸಂಬಂಧಿಸಿ 12 ದೂರುಗಳು ಬಂದಿದ್ದು, ಈ ಪೈಕಿ 7 ಮಂದಿಯ ವೇತನ ಕಡಿತಗೊಳಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

 

ದೆಹಲಿ ರೈತಹೋರಾಟ : ಟೂಲ್ ಕಿಟ್  ಹಂಚಿಕೆ – ಬೆಂಗಳೂರಿನಲ್ಲಿ ಪರಿಸರ ಕಾರ್ಯರ್ತೆಯ ಬಂಧನ

 

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್ಕಿಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ 21 ವರ್ಷದ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನ ದೆಹಲಿಯ ಸೈಬರ್ ಪೊಲೀಸರು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ.

ಪರಿಸರಪರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಟ್ವೀಟ್ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡುವುದು ಹೇಗೆ ಎಂಬುದನ್ನು ವಿವರಿಸುವ ‘ಟೂಲ್ಕಿಟ್’ ಅನ್ನು ಹಂಚಿಕೊಂಡಿದ್ದಳು. ಇದರ ಸೃಷ್ಟಿಕರ್ತರಿಗೆ ಸಂಬಂಧಿಸಿದ ಇಮೇಲ್ ಐಡಿ, ಯುಆರ್ಎಲ್ ಗಳು ಮತ್ತು ಕೆಲವು ಸಾಮಾಜಿಕ ಮಾಧ್ಯಮಗಳ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ಗೂಗಲ್ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಈ ಹಿಂದೆ ಕೇಳಿದ್ದರು.

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ಹೊಸದಿಲ್ಲಿ, ಫೆಬ್ರವರಿ14: ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ (ಎನ್‌ಐಎಚ್‌ಎಫ್‌ಡಬ್ಲ್ಯು) ಸ್ಟೆನೋ, ಸ್ಟಾಫ್ ನರ್ಸ್, ಲೈಬ್ರರಿಯನ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ಕುರಿತು ಅಧಿಸೂಚನೆಗಳನ್ನು ಹೊರಡಿಸಿದೆ. ಈ ಪೋಸ್ಟ್‌ಗಳಿಗೆ ನೀವು ಅರ್ಜಿ ಸಲ್ಲಿಸಲು 08 ಮಾರ್ಚ್ 2021 ಕೊನೆಯ ದಿನಾಂಕವಾಗಿದೆ.
Saakshatv job NIHFW Recruitment

ಇಲಾಖೆ: ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ.

ಪೋಸ್ಟ್: ಸ್ಟೆನೋ ಗಾರ್ಡ್ III, ಗ್ರಂಥಪಾಲಕ, ಸ್ಟಾಫ್ ನರ್ಸ್, ತಾಂತ್ರಿಕ ಸಹಾಯಕ ಮತ್ತು ತಾಂತ್ರಿಕ ಸಹಾಯಕ.

ಒಟ್ಟು ಪೋಸ್ಟ್‌ಗಳು: 08 ಪೋಸ್ಟ್‌ಗಳು.

ಅರ್ಹತೆ: 10 ನೇ ಪಾಸ್ / 12 ನೇ + ಡಿಪ್ಲೊಮಾ / ಸ್ನಾತಕೋತ್ತರ / ಪಿಜಿ ಪದವಿ.

ವಯಸ್ಸಿನ ಮಿತಿ: ಗರಿಷ್ಠ 30 ವರ್ಷಗಳು.

ಗಡುವು: 08 ಮಾರ್ಚ್ 2021

ಅಧಿಕೃತ ಜಾಲತಾಣ: http://www.nihfw.org/

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಕೃತ ಅಧಿಸೂಚನೆಯನ್ನು ಓದಿ ಅದರ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು.

ಚೀನಾ ಕೊರೊನಾ ಲಸಿಕೆಗೆ ಅನುಮೋದನೆ ನೀಡಿದ ಕಾಂಬೋಡಿಯಾ..!

ಚೀನಾದ ಸಿನೋವಾಕ್ ಕೋವಿಡ್ 19 ಲಸಿಕೆಯ ತುರ್ತು ಬಳಕೆಗೆ ಕಾಂಬೋಡಿಯಾ ರಾಷ್ಟ್ರವು ಅಧಿಕೃತವಾಗಿ ಅನುಮೋದನೆ ನೀಡಿದೆ. ಈ ಮಾಹಿತಿಯನ್ನ ಕಾಂಬೋಡಿಯಾದ ಆರೋಗ್ಯ ಸಚಿವ ಮಾಮ್ ಬುನ್ಹೆಂಗ್ ಮಾಹಿತಿ ನೀಡಿದ್ದಾರೆ.

ಕೊರೊನಾ ರೋಗದ ಭೀಕರತೆಯನ್ನ ಗಮನದಲ್ಲಿ ಇಟ್ಟುಕೊಂಡು ಜನರ ಜೀವ ಹಾಗೂ ಆರೋಗ್ಯವನ್ನ ಕಾಪಾಡುವ ದೃಷ್ಟಿಯಿಂದ ಕಾಂಬೋಡಿಯಾ ಆರೋಗ್ಯ ಸಚಿವಾಲಯವು ಸಿನೋವಾಕ್ ಕೋವಿಡ್ 19 ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ ಎಂದು ಕಾಂಬೋಡಿಯಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮ್ಯಾನ್ಮಾರ್: ಪ್ರತಿಭಟನಕಾರರಿಗೆ ಆಶ್ರಯ ನೀಡದಂತೆ ಮಿಲಿಟರಿ ಆಡಳಿತ ಎಚ್ಚರಿಕೆ

ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ ರಾಜಕೀಯ ಬಿಕ್ಕಟ್ಟು, ತುರ್ತು ಪರಿಸ್ಥಿತಿ ಘೋಷಣೆ ಸೇನಾ ಸರ್ಕಾರದ ಅಧಿಪತ್ಯತೆ, ಜನಾಕ್ರೋಶ , ಸೇನಾ ಸರ್ಕಾರದ ವಿರುದ್ಧ ಪ್ರತಿಭಟನೆಗಳ ಸುದ್ದಿ ಇಡೀ ವಿಶ್ವಾದ್ಯಂತ ಸಂಚಲನ ಸೃಷ್ಟಿ ಮಾಡಿದೆ.

ಇತ್ತ ರಾಜಕೀಯ ಕಾರ್ಯಕರ್ತರು ತಲೆಮರೆಸಿಕೊಂಡಿದ್ದು, ಪ್ರತಿಭಟನಕಾರರಿಗೆ ಆಶ್ರಯ ನೀಡದಂತೆ ಮ್ಯಾನ್ಮಾರ್ ನ ನೂತನ ಮಿಲಿಟರಿ ಆಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಮ್ಯಾನ್ಮಾರ್ ನಲ್ಲಿ ಸೇನಾ ದಂಗೆಯ ವಿರುದ್ಧ ಧ್ವನಿಯೆತ್ತಿರುವ ಮತ್ತು ಪ್ರತಿಭಟನೆಗೆ ಮುಂದಾಗಿರುವ ಪ್ರಜಾಪ್ರಭುತ್ವ ಪ್ರಚಾರಕರ ಬಂಧನಕ್ಕೆ ಮಿಲಿಟರಿ ಆಡಳಿತ ಕ್ರಮ ಕೈಗೊಂಡಿದೆ.

ದೇಶದ ಪ್ರಮುಖ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಸಹಕಾರ ಚಳವಳಿಗೆ ಸೇರ್ಪಡೆಯಾಗುತ್ತಿರುವ ವೈದ್ಯರು ಮತ್ತು ಇತರರ ಬಂಧನಕ್ಕೆ ಭದ್ರತಾ ಪಡೆಗಳು ಮುಂದಾಗಿವೆ. ದೇಶದಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿರುವ ಪ್ರಜಾಪ್ರಭುತ್ವ ಪರ 7 ಮುಖಂಡರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಕೈಗೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಈ ಕಾರ್ಯಕರ್ತರು ಕಂಡ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಒಂದು ವೇಳೆ ಅವರಿಗೆ ಆಶ್ರಯ ನೀಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಮಿಲಿಟರಿ ಆಡಳಿತ ಮಾಧ್ಯಮದಲ್ಲಿ ನೋಟಿಸ್ ಪ್ರಕಟಿಸಿದೆ. ತಲೆಮರೆಸಿಕೊಂಡಿರುವ ನಾಯಕರ ಪಟ್ಟಿಯಲ್ಲಿ ಮಿನ್ ಕೋ ನಾಯಿಂಗ್ ಅವರೂ ಇದ್ದಾರೆ.

ಸಾರ್ವಜನಿಕ ಅಶಾಂತಿಗೆ ಕಾರಣವಾಗುವ ಬರಹಗಳನ್ನು ಪತ್ರಕರ್ತರು ಮತ್ತು ಸುದ್ದಿ ಮಾಧ್ಯಮ ಸಂಸ್ಥೆಗಳು ಬರೆಯಬಾರದು ಎಂದು ಮಾಹಿತಿ ಸಚಿವಾಲಯವು ದೇಶದ ವಿದೇಶಿ ವರದಿಗಾರರ ಕ್ಲಬ್ ಗೆ ಕಳುಹಿಸಿದ ಸೂಚನೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಮಾಜಿ ಅಧ್ಯಕ್ಷೆ ಆಂಗ್ ಸಾನ್ ಸೂಕಿ ಅವರ ರಾಜಕೀಯ ಮಿತ್ರರು ಸೇರಿದಂತೆ ಸುಮಾರು 400 ಜನರನ್ನು ಬಂಧಿಸಲಾಗಿದೆ.

ಮ್ಯಾನ್ಮಾರ್ ನಲ್ಲಿ ಸೇನಾ ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ..!

ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ ರಾಜಕೀಯ ಬಿಕ್ಕಟ್ಟು, ತುರ್ತು ಪರಿಸ್ಥಿತಿ ಘೋಷಣೆ, ಆಂಗ್ ಸಾನ್ ಸೂಕಿ ಬಂಧನದ ಬೆನ್ನಲ್ಲೇ ಜನಾಕ್ರೋಶ ಭುಗಿಲೆದ್ದಿದೆ. ಅವರನ್ನ ಈ ಕೂಡ್ಲೇ ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆ ಒತ್ತಾಯಿಸಿದ ಬೆನ್ನಲ್ಲೇ ಮ್ಯಾನ್ಮಾರ್ ನಲ್ಲಿ ಮಿಲಿಟರಿ ಆಡಳಿತ ವಿರೋಧಿಸಿ ನಡೆದಿರುವ ಪ್ರತಿಭಟನೆ ತೀವ್ರಗೊಂಡಿದೆ. ಹೋರಾಟಗಾರರು ತಮ್ಮ ಬಂಧನವನ್ನು ತಡೆಯಲು ಸ್ವಯಂಪ್ರೇರಿತವಾಗಿ ಕಾವಲು ಗುಂಪುಗಳನ್ನು ರಚಿಸಿಕೊಂಡಿದ್ದಾರೆ.

ಕಳೆದ ವಾರ ಸೇನೆಯು ಚುನಾಯಿತ ಸರ್ಕಾರ ಕಿತ್ತುಹಾಕಿ ಆಡಳಿತವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಇದರಿಂದ ರಾಷ್ಟ್ರದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಸೂಕಿ ಮತ್ತು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಇತರ ನಾಯಕರನ್ನು ಸೇನೆ ಬಂಧಿಸಿದ ನಂತರ ಸರ್ಕಾರಿ ಅಧಿಕಾರಿಗಳು, ವೈದ್ಯರು ಮತ್ತಿತರರು ಪ್ರತಿಭಟನೆಗೆ ಧುಮಿಕಿದ್ದಾರೆ. ಈಗಾಗಲೇ ಮಾಜಿ ಅಧ್ಯಕ್ಷೆ ಆಂಗ್ ಸಾನ್ ಸೂಕಿ ಅವರ ರಾಜಕೀಯ ಮಿತ್ರರು ಸೇರಿದಂತೆ ಸುಮಾರು 400 ಜನರನ್ನು ಬಂಧಿಸಲಾಗಿದೆ. ಈ ಪ್ರತಿಭಟನಕಾರರನ್ನು ಬಂಧಿಸಲು ಸೇನೆ ಮುಂದಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: indiaModiNationalWorld
ShareTweetSendShare
Join us on:

Related Posts

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

by Shwetha
March 28, 2026
0

ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ತುಸು ನೆಮ್ಮದಿ ನೀಡಿದೆ. ಕೇಂದ್ರದ ಈ ನಡೆ...

115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

by Shwetha
March 28, 2026
0

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಈ ಆ್ಯಪ್‌ಗಳು ವಿಧಿಸುವ ಅತಿಯಾದ ಸೇವಾ ಶುಲ್ಕ ಮತ್ತು ಡೆಲಿವರಿ...

ದೇಶದಲ್ಲಿ ಲಾಕ್‌ಡೌನ್ ಇಲ್ಲ.. ಕೇಂದ್ರದ ಸ್ಪಷ್ಟನೆ

ದೇಶದಲ್ಲಿ ಲಾಕ್‌ಡೌನ್ ಇಲ್ಲ.. ಕೇಂದ್ರದ ಸ್ಪಷ್ಟನೆ

by Shwetha
March 28, 2026
0

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ದೇಶದಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆ, ಲಾಕ್‌ಡೌನ್ ಅನಿವಾರ್ಯ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಈ ಸುದ್ದಿಗಳನ್ನು ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿ...

1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ; ಎಲ್ಲ ಶಾಲೆಗಳಿಗೆ ಅನ್ವಯ

1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ; ಎಲ್ಲ ಶಾಲೆಗಳಿಗೆ ಅನ್ವಯ

by Shwetha
March 28, 2026
0

ರಾಜ್ಯ ಸರ್ಕಾರ 2026-27ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿ ಪ್ರವೇಶದ ವಯೋಮಿತಿಯನ್ನು 60 ದಿನಗಳವರೆಗೆ ಸಡಿಲಗೊಳಿಸಿದೆ. ಇದುವರೆಗೆ ಜೂನ್ 1ರೊಳಗೆ ಮಗುವಿಗೆ 6 ವರ್ಷ ವಯಸ್ಸು ಪೂರ್ಣವಾಗಿರಬೇಕು...

ದಾವಣಗೆರೆ ಉಪ ಚುನಾವಣೆ CM ಸಂಧಾನ ಅಸ್ತ್ರ ಯಶಸ್ವಿ : ಬಂಡಾಯ ಶಮನ, ಕೈ ಪಾಳಯದಲ್ಲಿ ಮಂದಹಾಸ; ಕಣದಿಂದ ಹಿಂದೆ ಸರಿದ ಸಾದಿಕ್ ಪೈಲ್ವಾನ್

ದಾವಣಗೆರೆ ಉಪ ಚುನಾವಣೆ CM ಸಂಧಾನ ಅಸ್ತ್ರ ಯಶಸ್ವಿ : ಬಂಡಾಯ ಶಮನ, ಕೈ ಪಾಳಯದಲ್ಲಿ ಮಂದಹಾಸ; ಕಣದಿಂದ ಹಿಂದೆ ಸರಿದ ಸಾದಿಕ್ ಪೈಲ್ವಾನ್

by Shwetha
March 28, 2026
0

ಬೆಂಗಳೂರು: ದಾವಣಗೆರೆ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಾಳಯದಲ್ಲಿ ಎದುರಾಗಿದ್ದ ಬಂಡಾಯದ ಭೀತಿ ಇದೀಗ ಸಂಪೂರ್ಣವಾಗಿ ತಿಳಿಯಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram