Top 10 News : ಹೈಕೋರ್ಟ್ ನಲ್ಲಿ ‘ಹಿಜಾಬ್’ ವಿಚಾರಣೆ ಅಪ್ ಡೇಟ್ಸ್ , ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು
ಹೈಕೋರ್ಟ್ ನಲ್ಲಿ ‘ಹಿಜಾಬ್’ ವಿಚಾರಣೆ ಮುಂದೂಡಿಕೆ
ರಾಜ್ಯದಲ್ಲಿ ಹಿಜಾಬ್ – ಕೇಸರಿ ಸಂಘರ್ಷ ಭುಗಿಲೆದ್ದಿದ್ದು , ಹೈಕೋರ್ಟ್ ನಲ್ಲಿ ಹಿಜಬ್ ಧಾರಣೆಗೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನ ನಡೆಸಿದ ತ್ರಿಸದಸ್ಯ ಪೀಠವು ಮತ್ತೊಮ್ಮೆ ಅರ್ಜಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2 30 ಕ್ಕೆ ಮುಂದೂಡಿದೆ.
ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಅಹೋರಾತ್ರಿ ಧರಣಿ
ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲೇ ಕಾಂಗ್ರೆಸ್ ಶಾಸಕರು ತಮ್ಮ ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಸರಿ ಧ್ವಜವನ್ನು ಮುಂದೊಂದು ದಿನ ಕೆಂಪುಕೋಟೆ ಮೇಲೆ ಹಾರಿಸಲಾಗುವುದು ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು. ಇದನ್ನ ಖಂಡಿಸಿ ಕಾಂಗ್ರೆಸ್ ಪ್ರತಿಭಟಿಸುತ್ತಿದೆ.
ಗದಗದಲ್ಲಿ ಹಿಜಾಬ್ ಹೈಡ್ರಾಮಾ
ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಹಿಜಾಬ್ ಹಗ್ಗಹಗ್ಗಾಟ ಮುಂದುವರೆದಿದೆ. ಹಳೆ ಕೋರ್ಟ್ ಆವರಣದಲ್ಲಿ ಇರೋ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಳಿ ಹಿಜಾಬ್ ಹೈ ಡ್ರಾಮಾ ನಡೆದಿದೆ. ವಿದ್ಯಾರ್ಥಿನಿಯರು ಇಂದೂ ಸಹ ಹಿಜಾಬ್ ಹಾಕಿಕೊಂಡು ಬಂದಿದ್ದರು.. ಹಿಜಾಬ್ ಹಾಕಿಕೊಂಡು ಕ್ಲಾಸ್ ನಲ್ಲಿ ಕೂರುತ್ತೇವೆಂದು ವಿದ್ಯಾರ್ಥಿನಿಯರ ಪಟ್ಟು ಹಿಡಿದಿದ್ದಾರೆ.. ಆದ್ರೆ ಹೈ ಕೋರ್ಟ್ ಆದೇಶ ಸರ್ಕಾರದ ಸೂಚನೆ ಹಿನ್ನೆಲೆ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಕಾಲೇಜು ಆಡಳಿತ ಮಂಡಳಿ ಅವಕಾಶ ನೀಡಿಲ್ಲ.
ಯಾದಗಿರಿಯಲ್ಲಿ ಹಿಜಾಬ್ ಹೈಡ್ರಾಮಾ
ಯಾದಗಿರಿ : ನ್ಯೂ ಕನ್ನಡ ಕಾಲೇಜ್ ಮುಂಭಾಗದಲ್ಲಿ ಹಿಜಾಬ್ ಗಾಗಿ ವಿದ್ಯಾರ್ಥಿನಿಯರು ಹೈಡ್ರಾಮಾ ನಡೆಸಿದ್ದಾರೆ… ಯಾದಗಿರಿಯ ನಗರದ ಕನಕ ವೃತ್ತದ ಸಮೀಪದಲ್ಲಿರುವ ನ್ಯೂ ಕನ್ನಡ ಕಾಲೇಜ್ ಮುಂಭಾಗದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಗೆ ಪಟ್ಟು ಹಿಡಿದು ಆಕ್ರೋಶ ಹೊರ ಹಾಕಿದ್ಧಾರೆ… ಹಿಜಾಬ್ ಧರಿಸಿ ಕಾಲೇಜ್ ಒಳಗಡೆ ಬಿಡದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳಿಗೆ ಪೋಷಕರು ಕೂಡ ಸಾಥ್ ನೀಡಿದ್ದು ಕಂಡುಬಂದಿದೆ.
‘ಹಿಜಬ್ ನಿಷೇಧ ಮಾಡಿದವರ ಮನೆ ಹಾಳಾಗಿ ಹೋಗಲಿ’…
ಹಿಜಬ್ ನಿಷೇಧ ಮಾಡಿದವರ ಮನೆಯನ ಹಾಳಾಗಿ ಹೋಗಲಿ ಎಂದು ತುಂಬಾ ಕೆಟ್ಟ ಪದಗಳನ್ನ ಬಳಸಿ ಬೈದು ವಿದ್ಯಾರ್ಥಿನಿಯರು , ಪೋಷಕರು ಆಕ್ರೋಶ ಹೊರಹಾಕಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ..
ಚಿಕ್ಕಮಗಳೂರಿನ ಬಸವನಹಳ್ಳಿ ಪ್ರೌಢ ಶಾಲೆಯಲ್ಲಿ ಹಿಜಬ್ ಸಂಘರ್ಷ ತಾರಕಕ್ಕೇರಿತ್ತು.. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲೆಗೆ ಅವಕಾಶ ನೀಡಿಲ್ಲ.. ನಂತರ ಫೋಷಕರ ಜೊತೆ ಮಕ್ಕಳು ಸೇರಿ ರಸ್ತೆ ಮಧ್ಯೆಯೇ ಪ್ರತಿಭಟನೆ ನಡೆಸಿದ್ದಾರೆ…
ದೇಶದಲ್ಲಿ ಕೋವಿಡ್ ಅಪ್ ಡೇಟ್ಸ್
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 30,757 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 67,538 ಜನರು ಗುಣಮುಖರಾಗಿದ್ದು , ಸಕ್ರೀಯ ಪ್ರಕರಣಗಳು 3,32,918 ಲಕ್ಷ ಇದೆ.. ಕಳೆದ 24 ಗಂಟೆಯಲ್ಲಿ 541 ಜನರು ಸೋಂಕಿಗೆ ಮರಣ ಹೊಂದಿದ್ದಾರೆ.
ರಾಮ್ ಚರಣ್ – ಶಂಕರ್ ಸಿನಿಮಾ ಒಟಿಟಿಗೆ 350 ಕೋಟಿಗೆ ಸೇಲ್
ಶಂಕರ್ ಹಾಗೂ ರಾಮ್ ಚರಣ್ ಕಾಂಬಿನೇಷನ್ ನ ಸಿನಿಮಾ ಬಿಡುಗಡೆಗೂ ಮುನ್ನವೇ ಒಟಿಟಿಗೆ 350 ಕೋಟಿಗೂ ಅಧಿಕ ಬೆಲೆಗೆ ಸೇಲ್ ಆಗಲು ಡೀಲ್ ಮಾಡಿಕೊಂಡಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ… ಜೀ ಸ್ಟುಡಿಯೋ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗ್ತಿದೆ.
ಬಾಲಿವುಡ್ ನಲ್ಲೂ ‘ಆಚಾರ್ಯ’ನ ಅಬ್ಬರ
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಸಿನಿಮಾ ಏಪ್ರಿಲ್ 29 ರಂದು ತೆರೆಗೆ ಬರಲು ಸಜ್ಜಾಗಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅಂದಹಾಗೆ ಇದೀಗ ಬಂರಿರುವ ಸುದ್ದಿ ಏನಪ್ಪಾ ಅಂದರೇ ಬಾಲಿವುಡ್ ನಲ್ಲೂ ಆಚಾರ್ಯ ಅಬ್ಬರಿಸಲಿದ್ದಾನಂತೆ. ಅಂದರೇ ಆಚಾರ್ಯ ಸಿನಿಮಾ ಹಿಂದಿಯಲ್ಲೂ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆಯಂತೆ. ಇದೇ ಮಾತನ್ನು ಹಿಂದಿಯಲ್ಲಿ ಸಿನಿಮಾವನ್ನು ವಿತರಿಸಲಿರುವ ‘ಪೆನ್ ಸ್ಟುಡಿಯೋಸ್’ ಹೇಳಿದೆ.
‘ಕೇನ್ ವಿಲಿಯಮನ್ಸ್ ಹೈದರಾಬಾದಿ ಬಕ್ರಾ’
ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮನ್ಸ್ ತಂಡದಲ್ಲಿ ಹೈದರಾಬಾದಿ ಬಕ್ರಾ ಆಗುವ ಸಾಧ್ಯತೆಗಳಿವೆ ಎಂದು ಮಾಜಿ ಕ್ರಿಕೆಟರ್ ವಾಸೀಂ ಜಾಫರ್ ಸಂಚಲನ ಹೇಳಿಕೆಗಳನ್ನು ನೀಡಿದ್ದಾರೆ. ಮೆಗಾ ಹರಾಜಿನಲ್ಲಿ ಹೈದರಾಬಾದ್ ಫ್ರಾಂಚೈಸಿ ಮಿಡಲ್ ಆರ್ಡರ್ ಬ್ಯಾಟರ್ ಗಳನ್ನ ಖರೀದಿಸಿದೆ. ಹೀಗಾಗಿ ಕೇನ್ ಬಗ್ಗೆ ವಾಸೀಂ ಆಸಕ್ತಿಕರ ಹೇಳಿಕೆಗಳನ್ನು ನೀಡಿದ್ದಾರೆ.
ಶಕತ ಸಿಡಿಸಿ ಧೂಳೆಬ್ಬಿಸಿದ ಯಶ್ ಧೂಳ್
ಇಂದಿನಿಂದ ದೇಶಿ ವಿಶ್ವಕಪ್ ರಣಜಿ ಟ್ರೋಫಿ ಟೂರ್ನಿ ಶುರುವಾಗಿದೆ. ಟೂರ್ನಿಯ ಮೊದಲ ದಿನವೇ ಭಾರತದ ಉದಯೋನ್ಮುಖ ಆಟಗಾರ ಅಂಡರ್ 19 ವಿಶ್ವಕಪ್ ಗೆದ್ದ ನಾಯಕ ಯಶ್ ಧೂಳ್ ಶತಕದ ಸಂಭ್ರಮ ಆಚರಿಸಿದ್ದಾರೆ.
ಗೊವಾಹಟಿ ನಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ದಧ ಪಂದ್ಯದಲ್ಲಿ ಯಶ್ ಧೂಳ್, ಆರಂಭಿಕರಾಗಿ ಕಣಕ್ಕಿಳಿದು ಸೆಂಚೂರಿ ಸಿಡಿಸಿದ್ದಾರೆ.












