ಪ್ರಮುಖ ಹೈ ಫೈ ರಾಜಕೀಯ ಸುದ್ದಿಗಳು : ಇತ್ತೀಚೆಗಿನ ಅಪ್ ಡೇಟ್ಸ್..!
ನಾನು ಒಬ್ಬಂಟಿಗ ಅಂತ ಮಾತಾಡ್ತಿದ್ದಾರೆ , ಆದ್ರೆ ನಾನು ಒಂಟಿ ಸಲಗ : ಯತ್ನಾಳ್
ನಾನು ಒಬ್ಬಂಟಿಗ ಅಂತ ಹೇಳೋರು ಹೇಳ್ತಾರೆ. ಯಾರೂ ಇಲ್ಲದಿದ್ರೂ ನಾನು ಒಂಟಿ ಸಲಗನೇ. ಅಟಲ್ ಬಿಹಾರಿ ವಾಜಪೇಯಿಯವ್ರೂ ಇದನ್ನೇ ಹೇಳಿದ್ದಾರೆ. ನಿನ್ನ ಜತೆ ಯಾರೂ ಇಲ್ಲ ಅಂದ್ರೂ ನೀನೊಬ್ಬನೇ ನಡಿ ಅಂತ ವಾಜಪೇಯಿ ಹೇಳಿದ್ದಾರೆ. ನೊಟೀಸ್ ಬಂದ್ರೆ ನಾಳೆ ಮಾತಾಡ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆ ನೀಡಿದ್ದಾರೆ.
ತಮಗೆ ನೋಟೀಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಎಲ್ಲವನ್ನೂ ಎದುರಿಸುವ ಶಕ್ತಿ ನನಗೆ ಇದೆ. ನಾನು ಒಬ್ಬ ಶಾಸಕ. ಶಾಸಕಾಂಗ ಪಕ್ಷದ ಸಭೆಯಲ್ಲೂ ಮಾತಾಡಿದೀನಿ. ಸಂದರ್ಭ ಬಂದ್ರೆ ಪ್ರಧಾನಿಯವ್ರ ಗಮನಕ್ಕೂ ತರ್ತೇನೆ. ನಾನು ಯಾಕೆ ಮಾತಾಡಿದೆ ಅಂತ ಸ್ಪಷ್ಟೀಕರಣ ಕೊಡ್ತೇನೆ. ಯಾವ ಕಾರಣಕ್ಕಾಗಿ ನಾನು ಹೇಳಿಕೆ ಕೊಟ್ಟೆ ಅಂತ ಸ್ಪಷ್ಟೀಕರಣ ಕೊಡ್ತೇನೆ. ನಾಳೆ ನೋಟೀಸ್ ಬಂದ್ರೆ ಓದ್ಕೊಂಡು ನಂತರ ಈ ಸ್ಪಷ್ಟನೆ ಕೊಡ್ತೇನೆ ಎಂದಿದ್ದಾರೆ.
ಆತ್ಮನಿರ್ಭರ ಭಾರತಕ್ಕೆ ಪೂರಕ ಬಜೆಟ್ : ಸಚಿವ ಅರವಿಂದ ಲಿಂಬಾವಳಿ
ಬೆಂಗಳೂರು: ಈ ಬಾರಿಯ ಕೇಂದ್ರದ ಬಜೆಟ್ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಿದೆ ಎಂದು ರಾಜ್ಯದ ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಗಳ ವತಿಯಿಂದ ಮಾರತ್ತಹಳ್ಳಿಯ ಎಸ್‍ಬಿಆರ್ ಕನ್ವೆನ್ಶನ್ ಹಾಲ್‍ನಲ್ಲಿ ಶುಕ್ರವಾರ ನಡೆದ “ಕೇಂದ್ರ ಸರಕಾರದ 2021ನೇ ಸಾಲಿನ ಬಜೆಟ್ ಅವಲೋಕನ ಸಭೆ”ಯಲ್ಲಿ ಅವರು ಮಾತನಾಡಿ, ಜನಪ್ರಿಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಸರಕಾರ ಮಾಡಿದ ಯಾವುದೇ ಕೆಲಸವು ಜನಪರವಾಗಿರುತ್ತದೆ. ಕೇಂದ್ರದ ಕಾರ್ಯಕ್ರಮಗಳ ಮಾದರಿಯಂತೆ ಬಜೆಟ್ ಕೂಡ ಅಭಿವೃದ್ಧಿ ಪರ ಮತ್ತು ಜನಪರವಾಗಿದೆ ಎಂದರು.
ಯತ್ನಾಳ್ ಗೆ ಹೈಕಮಾಂಡ್ ನೋಟೀಸ್ ದೊಡ್ಡವರಿಗೆ ಬಿಟ್ಟ ವಿಚಾರ – ನಾವ್ಯಾಕೆ ಮಾತನಾಡಬೇಕು : ಬಿ ಸಿ ಪಾಟೀಲ್ ..!
ತುಮಕೂರು : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೋರಿ ಹೋರಾಟ ಮಾಡ್ತಿದ್ದಾರೆ. ಮುಖ್ಯಮಂತ್ರಿಗಳು ಯಾವುದು ಸೂಕ್ತವೋ ಆ ಕ್ರಮ ಜರುಗಿಸ್ತಾರೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ತುಮಕೂರಿನಲ್ಲಿ ಹೇಳಿದ್ದಾರೆ. ಇದೇ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಗೆ ಹೈಕಮಾಂಡ್ ನೋಟೀಸ್ ವಿಚಾರವಾಗಿ ಮಾತನಾಡಿದ ಅವರು ಅದು ದೊಡ್ಡವರಿಗೆ ಬಿಟ್ಟಂತ ವಿಚಾರ. ಅದರ ಬಗ್ಗೆ ನಾವ್ಯಾಕೆ ಮಾತನಾಡಬೇಕು. ಅದು ಬೇಡ,ಬೇರೆ ಏನಾದರೂ ಇದ್ದರೇ ಹೇಳಿ ಎನ್ನುವ ಮೂಲಕ ಯತ್ನಾಳ್ ನೋಟೀಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸ್ವಂತ ಪಕ್ಷ ಕಟ್ಟಿ ಐದು ಸ್ಥಾನ ಗೆದ್ದು ತೋರಿಸಲಿ : ಸಿದ್ದರಾಮಯ್ಯಗೆ ಹೆಚ್ ಡಿಕೆ ಸವಾಲು
ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪರ್ಧಿಸಲ್ಲ ಎಂಬ ಹೆಚ್ ಡಿ ದೇವೇಗೌಡರ ಹೇಳಿಕೆಗೆ ಸಿದ್ದರಾಮಯ್ಯ, “ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಅಸ್ತಿತ್ವ ಇಲ್ಲ” ಅದ್ಕೆ ಸ್ಪರ್ಧಿಸಲ್ಲ ಅಂತಾ ಹೇಳಿದ್ದರು. ಸಿದ್ದರಾಮಯ್ಯರ ಈ ಹೇಳಿಕೆ ಇಂದು ಪ್ರತಿಕ್ರಿಯೆ ನೀಡಿರುವ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ, ತಾವೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ ಆಮೇಲೆ ಜೆಡಿಎಸ್ ಬಗ್ಗೆ, ಜೆಡಿಎಸ್ ನಾಯಕತ್ವದ ಬಗ್ಗೆ ಮಾತಾಡಬೇಕು ಎಂದು ಸವಾಲು ಹಾಕುತ್ತಲೇ ಬಂದಿದ್ದೇನೆ. ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ, ಜೆಡಿಎಸ್ ಅನ್ನು ಟೀಕಿಸುವುದರಲ್ಲೇ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿರುವಂತಿದೆ ಎಂದು ಟ್ವೀಟಿಸಿದ್ದಾರೆ.
ಮುಂದುವರಿದು ಸರಣಿ ಟ್ವೀಟ್ ಗಳನ್ನು ಮಾಡಿರುವ ಕುಮಾರಸ್ವಾಮಿ, ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ಆದರೆ, ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತೇವೆ ಎಂದೇನಾದರೂ ಹೇಳಿದ್ದಾರಾ? ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ ಇತಿಹಾಸ ಇರುವುದು ಜೆಡಿಎಸ್ಗಲ್ಲ, ತಮಗೆ 2008ರಲ್ಲಿ ನಡೆದ ಆಪರೇಷನ್ ಕಮಲದ ಉಪಚುನಾವಣೆಗಳಲ್ಲಿ ನೀವು ಮಾಡಿದ ಕುತಂತ್ರಗಳನ್ನು ನೆನಪಿಸಲೇ?
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ಗೆ ಇರುವ ಶಕ್ತಿ ಮತ್ತು ಸಾಮಥ್ರ್ಯ ಪ್ರದರ್ಶನಕ್ಕೆ ಇನ್ನೂ ಸಮಯವಿದೆ. ವೇದಿಕೆಯೂ ಸಿಗಲಿದೆ. ಆಗ ಸಿದ್ದರಾಮಯ್ಯನವರು ನಮ್ಮ ಜೊತೆ ಚರ್ಚೆಗೆ, ಸೆಣಸಾಟಕ್ಕೆ ಬರಲಿ. ಒಂದುವೇಳೆ ಅವರೇ ಒಂದು ಪಕ್ಷವನ್ನೇನಾದರೂ ಕಟ್ಟಿದರೆ ಅದಕ್ಕೂ ಜೆಡಿಎಸ್ ನ ಸಾಮಥ್ರ್ಯ ತೋರಿಸುವ ಕೆಲಸ ಮಾಡೋಣವಂತೆ. ಅಲ್ಲಿಯವರೆಗೆ ಅವರು ತಾಳಲಿ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಜೆಡಿಎಸ್ನಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿ, ಹೊರಬಿದ್ದ ಮೇಲೆ ಸಿದ್ದರಾಮಯ್ಯನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಜೆಡಿಎಸ್ಗೆ ಶಕ್ತಿ ಎಲ್ಲಿದೆ ಎಂಬ ಅವರ ಹೇಳಿಕೆಗಳು, ಜೆಡಿಎಸ್ಗೆ ಅವರು ಬಗೆದ ದ್ರೋಹದ ಪ್ರತೀಕ. ನಮ್ಮ ಬಗ್ಗೆ ಮಾತಾಡುವ ಅಧಿಕಾರ ಅವರಿಗಿಲ್ಲ ಎಂದು ಟೀಕಿಸಿದ್ದಾರೆ.
ರಾಜ್ಯಸಭೆ ವಿಪಕ್ಷನಾಯಕರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ
ರಾಜ್ಯಸಭೆ ವಿಪಕ್ಷನಾಯಕರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ
ನವದೆಹಲಿ : ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಹತ್ತರ ಜವಾಬ್ದಾರಿಯನ್ನ ನೀಡಿದೆ.
ಕಳೆದ ವರ್ಷ ರಾಜ್ಯಸಭೆಗೆ ಆಯ್ಕೆ ಆಗಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಕಾಂಗ್ರೆಸ್ ಆಯ್ಕೆ ಮಾಡಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವಧಿ ಫೆಬ್ರವರಿ 15ರಂದು ಮುಕ್ತಾಯವಾಗಿದೆ.
ಈ ಸ್ಥಾನ ತುಂಬಲು ಖರ್ಗೆ ಹೆಸರನ್ನು ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಶಿಫಾರಸು ಮಾಡಲಾಗಿದೆ.
ಸಿದ್ದರಾಮಯ್ಯ ಟ್ರಂಪ್ ಇದ್ದಂತೆ : ಹೆಚ್.ವಿಶ್ವನಾಥ್
ಸಿದ್ದರಾಮಯ್ಯ ಟ್ರಂಪ್ ಇದ್ದಂತೆ : ಹೆಚ್.ವಿಶ್ವನಾಥ್
ಮೈಸೂರು : ಸಿದ್ದರಾಮಯ್ಯ ಟ್ರಂಪ್ ಇದ್ದಂತೆ, ಟ್ರಂಪಾಯಣದಂತೆ ಸಿದ್ದರಾಮಾಯಣ ನಡೆಯುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎಂದಿನಂತೆ ಸಿದ್ದರಾಮಯ್ಯ ಅವರ ವಿಚಾರ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.
ಹಿಂದ ಹೋರಾಟ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಸೇರಿ ಸ್ವಾರ್ಥಕ್ಕಾಗಿ ಮಾಡುತ್ತಿರುವ ಹೋರಾಟ. ಅವರ ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಹಿಂದ ಅಹಿಂದ ಎಂದು ಚಡಪಡಿಸುತ್ತಿದ್ದಾರೆ.
ಅವರಿಗೆ ಅಸ್ತಿತ್ವ ಅಭದ್ರತೆ ಕಾಡುತ್ತಿದೆ. ಕುರುಬ ಸಮಾಜದ ಎಸ್ ಟಿ ಹೋರಾಟ ಅವರಿಲ್ಲದೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಯಶಸ್ಸು ಕಂಡಿದೆ.
ಸಿದ್ದರಾಮಯ್ಯ ನಾನು ಇಲ್ಲದಿದ್ದರೆ ಹೋರಾಟ ಯಶಸ್ವಿ ಆಗಲ್ಲ ಎಂದು ಕೊಂಡಿದ್ದರು. ಅವರಲ್ಲಿ ನಾನು ಅನ್ನೋ ಸ್ವಾರ್ಥ ಇತ್ತು. ಸಮುದಾಯ ನನ್ನ ಜೊತೆ ಇಲ್ಲ ಅನ್ನೋದು ಈಗ ಅವರಿಗೆ ಕಾಣುತ್ತಿದೆ ಎಂದು ಕಿಡಿಕಾರಿದರು.
ನಮ್ಮ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರ ಅಲ್ಲಾ – ರಾಮುಲು..!
ಗದಗ : ನಮ್ಮ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರ ಅಲ್ಲಾ. ಇವತ್ತು ಇರುವಂತ ಪರಿಸ್ಥಿತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಸಚಿವ ಶ್ರೀರಾಮುಲು ಅವರು ಗದಗದಲ್ಲಿ ಹೇಳಿದ್ದಾರೆ. ಬಿ ಎಸ್ ವೈ ನೇತೃತ್ವದ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಟಾಂಗ್ ಕೊಟ್ಟಿರುವ ಅವರು ನಮ್ಮ ಸರ್ಕಾರ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದೆ. ಬಿ ಎಸ್ ಯಡಿಯೂರಪ್ಪನವರು ಮಿಷನ್ 2022 ಮೂಲಕ ಬೆಂಗಳೂರು ಅಭಿವೃದ್ಧಿ ಮಾಡಲಿದ್ದಾರೆ. ಕೊರೋನಾ ಇರುವುದಿಂದ ಮಂತ್ರಿಗಳು ಹಾಗೂ ಅಧಿಕಾರಿಗಳು ಹೊರಗಡೆ ಬರಲು ಆಗಲಿಲ್ಲಾ. ಹಾಗೇ ಕರ್ನಾಟಕದ ಅಭಿವೃದ್ಧಿ ಮಾಡುವ ಉದ್ದೇಶ ಮಿಷನ್ 2030 ಅಭಿವೃದ್ಧಿ ಮಾಡಲಾಗುತ್ತಿದೆ ಸರ್ಕಾರದಲ್ಲಿ ಹಣಕಾಸಿನ ಕೊರತೆಯಿಂದ ಅಂತಾ ಹೇಳ್ತಾಯಿದ್ದಾರೆ. ನಮ್ಮ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಅನುದಾನ ಕೊಡುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಇದೇ ವೇಳೆ ವಿಶೇಷವಾಗಿ ಸಿದ್ದರಾಮಯ್ಯನವರಿಗೆ ಒಂದು ಮಾತು ಹೇಳುತ್ತೇನೆ ಎಂದಿರುವ ರಾಮುಲು ಸಿಎಂ ಇದ್ದಾಗ ಅತಿವೃಷ್ಟಿ ಹಾಗೂ ಅನಾವೃಷ್ಟಿ ಹಾಗೂ ಕೋವಿಡ್ ಹೀಗಾಗಿ ಹಣಕಾಸಿನ ತೊಂದರೆ ಆಗಿದೆ. ಕೊರೋನಾದಲ್ಲಿ ಎಷ್ಟು ಖರ್ಚು ಮಾಡಿದ್ದೇವೆ ಎಂದು ಸದನದಲ್ಲಿ ಹೇಳಿದ್ದೇವೆ. ಬಾದಾಮಿಯಲ್ಲಿ ಇವತ್ತು ಸಿದ್ದರಾಮಯ್ಯನವರೊಂದಿಗೆ ಶಂಕು ಸ್ಥಾಪನೆ ಮಾಡುತ್ತೇನೆ ಅಂದ್ರೆ ಅದು ಸರ್ಕಾರದ ಪರವಾಗಿ ಅಭಿವೃದ್ಧಿಯಾದ ಕೆಲಸ ಅಲ್ವೆ. ಮಸ್ಕಿಯಲ್ಲಿ 25 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಅಹಿಂದ ಪರ ಪ್ರತ್ಯೇಕ ಹೋರಾಟ ಬೇಕಿಲ್ಲ : ಸತೀಶ್ ಜಾರಕಿಹೊಳಿ
ಅಹಿಂದ ಪರ ಪ್ರತ್ಯೇಕ ಹೋರಾಟ ಬೇಕಿಲ್ಲ : ಸತೀಶ್ ಜಾರಕಿಹೊಳಿ
ಬೆಳಗಾವಿ : ಕಾಂಗ್ರೆಸ್ ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ಪಕ್ಷವಾಗಿದೆ. ಕಾಂಗ್ರೆಸ್ ತಳಹದಿಯೇ ಅಹಿಂದ. ಹೀಗಾಗಿ ಪ್ರತ್ಯೇಕವಾಗಿ ಅಹಿಂದ ಹೋರಾಟದ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಸಮುದಾಯದವರನ್ನೂ ಒಳಗೊಂಡಿರುವ ಪಕ್ಷವಾಗಿದೆ.
ಹೀಗಾಗಿ ಸಮಾವೇಶ ನಡೆಸಿ ಮತ್ತೆ ಸಂಘಟಿಸುವ ಅವಶ್ಯವಿಲ್ಲ ಎಂದರು. ಇದೇ ವೇಳೆ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿ, ಮೀಸಲಾತಿ ಆಗ್ರಹದ ಹೋರಾಟದಲ್ಲಿ ರಾಜಕೀಯವೂ ನಡೆಯುತ್ತಿದೆ ಹಾಗೂ ಷಡ್ಯಂತ್ರವೂ ಇದೆ. ಅರ್ಹವಾಗಿ ಮೀಸಲಾತಿ ಸಿಗಬೇಕಾದ ಸಮುದಾಯಗಳಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel