ಪ್ರಮುಖ ಹೈ ಫೈ ರಾಜಕೀಯ ಸುದ್ದಿಗಳು..!
ಪೂರ್ಣ ಸುದ್ದಿಗಾಗಿ ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ
ಇದು ಮೋದಿ ಪ್ರಜಾಪ್ರಭುತ್ವನಾ, ಗೂಂಡಾಗಿರಿ ಮಾಡಿದ್ದೇ ಬಿಜೆಪಿ-ಜೆಡಿಎಸ್: ಸಿದ್ದರಾಮಯ್ಯ ಆರೋಪ
ಬೆಂಗಳೂರು: ವಿಧಾನ ಪರಿಷತ್‍ನಲ್ಲಿ ಪ್ರಜಾಪ್ರಭುತ್ವ ಯಾವ ರೀತಿ ಕಗ್ಗೊಲೆ ಆಯ್ತು ಅಂತಾ ನಾನು ನೋಡಿದೆ. ಸಭಾಪತಿ ಬಂದಾಗ ಬಾಗಿಲು ಹಾಕಿ, ಉಪಸಭಾಪತಿಯನ್ನು ಪೀಠದಲ್ಲಿ ಕೂರಿಸಿದ್ದೆ ಮಹಾಪರಾಧ. ಈ ಮೂಲಕ ಗೂಂಡಾಗಿರಿ ಮಾಡಿದ್ದೇ ಬಿಜೆಪಿ ಹಾಗೂ ಜೆಡಿಎಸ್. ಇದು ಪ್ರಜಾಪ್ರಭುತ್ವನಾ, ಅಥವಾ ನರೇಂದ್ರ ಮೋದಿ ಪ್ರಜಾಪ್ರಭುತ್ವನಾ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಇದು ಕಾನೂನು ಸಚಿವ ಮಾಧುಸ್ವಾಮಿ ಫ್ಲಾನ್. ರಾತ್ರಿಯೇ ಇಂತಹ ಫ್ಲಾನ್ ಮಾಡಿದ್ದಾರೆ. ಬೆಲ್ ಮುಗಿಯುವ ಮುನ್ನವೇ ಸಭಾಪತಿ ಸ್ಥಾನಕ್ಕೆ ಉಪಸಭಾಪತಿ ಸ್ಥಾನಕ್ಕೆ ಧರ್ಮೇಗೌಡರನ್ನು ಕೂರಿಸಿದ್ದಾರೆ. ಇದು ಯಾವ ಸಂಸ್ಕøತಿ, ಯಾವ ಸಂವಿಧಾನದ ಪ್ರಕಾರ ನಡೆದಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪರಿಷತ್ ನಲ್ಲಿ ತಳ್ಳಾಟ ನೂಕಾಟ : ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಕಟೀಲ್
ಮಂಗಳೂರು : ವಿಧಾನ ಪರಿಷತ್ ನಲ್ಲಿ ತಳ್ಳಾಟ ನೂಕಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಈ ಹಿಂದೆ ಕಾಂಗ್ರೆಸ್ ವಿಧಾನಸಭೆ, ವಿಧಾನ ಪರಿಷತ್ ನ ಹೊರಗೆ ಗೂಂಡಾಗಿಗಿ ಮಾಡುತ್ತಿತ್ತು. ಈಗ ಒಳಗೂ ಗುಂಡಾಗಿರಿ ಮಾಡುತ್ತಿದೆ. ಆ ಮೂಲಕ ರಾಜ್ಯದ ಜನತೆಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಜನರ ಬಾಳನ್ನು ಅಲ್ಲೋಲ್ಲ ಕಲ್ಲೋಲ ಮಾಡುತ್ತಿದೆ : ಹೆಚ್.ಡಿ.ದೇವೇಗೌಡ
ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳನ್ನು ಅಲ್ಲೋಲ್ಲಕಲ್ಲೋಲ ಮಾಡಲು ಹೊರಟಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ಈ ಮಸೂದೆ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಅವರು, ಗೋಹತ್ಯೆ ಮಸೂದೆಯನ್ನು ಜೆಡಿಎಸ್ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ : ಅಶೋಕ್
ಬೆಂಗಳೂರು : ವಿಧಾನ ಪರಿಷತ್ ನಲ್ಲಿ ತಳ್ಳಾಟ ನೂಕಾಟ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸಭಾಪತಿ ಅವರ ವಿರುದ್ಧ ಅವಿಶ್ವಾಸ ಪ್ರಸ್ತಾಪ ಮಾಡಲಾಗಿದೆ.
ಸೂಚನೆ ನೀಡಿದ ನಂತರ ಅದರ ಮೇಲೆ ಮತದಾನ ನಡೆಯಬೇಕಿರುವುದು ಪ್ರಜಾಪ್ರಭುತ್ವ. ಆದರೆ ಕಲಾಪಕ್ಕೆ ಅವಕಾಶ ನೀಡದೆ ಅಡ್ಡಿ ಪಡಿಸಲಾಗಿದೆ.
ಹಿಂದೆ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದ ಕಾಂಗ್ರೆಸ್ ಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಮತದಾನಕ್ಕೆ ಅವಕಾಶ ನೀಡದೆ ಫಲಾಯವಾದ ಅನುಸರಿಸಿದೆ ಎಂದು ಕಿಡಿಕಾರಿದರು.
ಮರಾಠಿ ಅಭಿವೃದ್ಧಿ ನಿಗಮ ವಿರುದ್ಧ ಜ.9ಕ್ಕೆ ವಾಟಾಳ್ ರೈಲು ಬಂದ್ ಚಳವಳಿ..!
ಚಾಮರಾಜನಗರ: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್ ನಡೆಸಿದ್ದ ವಾಟಾಳ್ ನಾಗರಾಜ್, ಎರಡನೇ ಹಂತದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಜನವರಿ 9 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಘೋಷಣೆ ಮಾಡಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್, ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರದ ಆಕ್ರೋಶ ವ್ಯಕ್ತಪಡಿಸಿದರು. ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಮುಂದಿನ ತಿಂಗಳು ಎರಡನೇ ಹಂತದ ಚಳವಳಿ ಆರಂಭಿಸಲಾಗುತ್ತಿದೆ. ಜನವರಿ 9 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ ನಡೆಸಲಾಗುವುದು, ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಹಾಗು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಹಾದು ಹೋಗಿರುವ ರೈಲು ಹಳಿಗಳ ಮೇಲೆ ಕುಳಿತು ಸತ್ಯಗ್ರಹ ನಡೆಸಿ ರೈಲು ತಡೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪೂರ್ಣ ಸುದ್ದಿಗಾಗಿ ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








