ಕಠಿಣಾತಿ ಕಠಿಣ ನಿಯಮ ಜಾರಿ : ಸರ್ಕಾರದ ಮಾರ್ಗಸೂಚಿಯಲ್ಲೇನಿದೆ..?
ಬೆಂಗಳೂರು : ಕೊರೊನಾ ಎರಡನೇ ಅಲೆ ಕಂಟ್ರೋಲ್ ಗೆ ರಾಜ್ಯ ಸರ್ಕಾರ 14 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ, ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಘೋಷಣೆಯಾಗಿದ್ದಂತ ಕೊರೋನಾ ಕಪ್ರ್ಯೂನಿಂದ ಕೊರೋನಾ ನಿಯಂತ್ರಣಗೊಂಡಿಲ್ಲ.
ಹೀಗಾಗಿ ರಾಜ್ಯಾದ್ಯಂತ ಮೇ.10ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದರ ಬೆನ್ನಲ್ಲೇ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕಠಿಣಾತಿಕಠಿಣ ನಿಯಮಗಳನ್ನು ಜಾರಿ ಮಾಡಿದೆ.
ಒಂದಿಷ್ಟು ಬದಲಾವಣೆಗಳನ್ನು ಹೊರೆತುಪಡಿಸಿ ಉಳಿದಂತೆ ಕಳೆದ ವರ್ಷದ ಲಾಕ್ ಡೌನ್ ನಲ್ಲಿದ್ದ ನಿಯಮಗಳೇ ಹೊಸ ಮಾರ್ಗಸೂಚಿಯಲ್ಲಿವೆ.
ಏನಿರುತ್ತೆ?
ಆಹಾರ, ಹಾಲು, ಹಣ್ಣು ಮಾಂಸದ ಅಂಗಡಿ ಮಾರಾಟಕ್ಕೆ ಅವಕಾಶ (ಬೆಳಗ್ಗೆ 6 ರಿಂದ 10 ಗಂಟೆ)
ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ.
ಎಲ್ಲಾ ಬಗ್ಗೆ ವೈದ್ಯಕೀಯ ಸೇವೆ, ತುರ್ತು ಚಿಕಿತ್ಸೆಗೆ ತೆರಳಲು ಅವಕಾಶ.
ಶೇ 50ರಷ್ಟು ಹಾಜರಾತಿಯೊಂದಿಗೆ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿವೆ
ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ ಯಾವುದೇ ರೀತಿಯ ಅಡ್ಡಿಯಿಲ್ಲ.
ವಿವಾಹ/ಶುಭ ಕಾರ್ಯಕ್ರಮದಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ
ಏನಿರಲ್ಲ?
ಅಂಗಡಿ ಮುಗ್ಗಟ್ಟು ಹೊಟೆಲ್, ಕೈಗಾರಿಕಾ ಚಟುವಟಿಕೆ ಬಂದ್
ಕೆಎಸ್ಸಾರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಇರೋದಿಲ್ಲ.
ಅಂತಾರಾಜ್ಯ ಬಸ್ ಸಂಚಾರವೂ ಸ್ಥಗಿತ
ಖಾಸಗಿ ವಾಹನಗಳಲ್ಲಿ ಸಂಚಾರಕ್ಕೂ ನಿಬರ್ಂಧ
ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಬಂದ್
ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿರಲಿದ್ದು, ಟೇಕ್ ಅವೇ, ಪಾರ್ಸೆಲ್ ಗೆ ಅವಕಾಶ
ಮದ್ಯದ ಅಂಗಡಿ, ರೆಸ್ಟೋರೆಂಟ್ ಬಂದ್ (ನಿಬರ್ಂಧಿತ ಅವಧಿಯಲ್ಲಿ ಟೇಕ್ ಅವೇಗೆ ಅನುಮತಿ)









