ಬಿಲಿಯನ್ ಡಾಲರ್ ಗಳ ವ್ಯವಹಾರಕ್ಕಾಗಿ ಎರಡು ದಿನಗಳ ಕಾಲ ಭಾರತ ಪ್ರವಾಸ ಮುಗಿಸಿ ನೆನ್ನೆಯಷ್ಟೇ ಅಮೇರಿಕಕ್ಕೆ ತೆರಳಿದ್ದ ಅಧ್ಯಕ್ಷ ಟ್ರಂಪ್, ತವರು ಸೇರಿದ ಕೂಡಲೇ ಭಾರತದ ಪ್ರವಾಸದ ಬಗ್ಗೆ ಅದ್ಭುತ ಎಂದು ಬಣ್ಣಿಸಿದ್ದಾರೆ. ಅಮೇರಿಕಾ ತಲುಪಿದ ಕೂಡಲೇ ಟ್ವೀಟ್ ಮಾಡಿರುವ ಟ್ರಂಪ್ ಭಾರತಕ್ಕೆ ಕೈಗೊಂಡಿದ್ದ ಪ್ರವಾಸ ಯಶಸ್ವಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.









