ADVERTISEMENT
Saturday, March 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರೀಡೆ

TPL : ಐಪಿಎಲ್ ಮಾದರಿಯಲ್ಲಿ ಟೇಕ್ವಾಂಡೋ ಪ್ರೀಮಿಯರ್‌ ಲೀಗ್‌;  ಟೇಕ್ವಾಂಡೋದಲ್ಲೂ ಬೆಂಗಳೂರು ತಂಡ…. 

ಟೇಕ್ವಾಂಡೋ ಗ್ರ್ಯಾಂಡ್‌ಮಾಸ್ಟರ್‌ಗಳಾದ ಜುನ್ ಲೀ ಮತ್ತು ವಿಶ್ವ, ಒಲಂಪಿಕ್ ಮತ್ತು ಏಷ್ಯನ್ ಚಾಂಪಿಯನ್ ಮೂನ್ ಡೇ ಸಂಗ್, ಲೀಗ್‌ ಅನಾವರಣ ಕಾರ್ಯಕ್ರಮದಲ್ಲಿದ್ದ ದೊಡ್ಡ ಮಟ್ಟದ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.  ಟಿಪಿಎಲ್‌ ಖಂಡಿತವಾಗಿ ಗಮನಾರ್ಹ ಬದಲಾವಣೆ ತರಲಿದೆ ಎಂದು 400 ಆಟಗಾರರು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಹೇಳುವ ಮೂಲಕ ಲೀಗ್‌ಅನ್ನು ಶ್ಲಾಘಿಸಿದರು.

Naveen Kumar B C by Naveen Kumar B C
March 28, 2023
in ಕ್ರೀಡೆ, Newsbeat, Sports
Taekwondo Premier League
Share on FacebookShare on TwitterShare on WhatsappShare on Telegram

ಐಪಿಎಲ್ ಮಾದರಿಯಲ್ಲಿ ಟೇಕ್ವಾಂಡೋ ಪ್ರೀಮಿಯರ್‌ ಲೀಗ್‌;  ಟೇಕ್ವಾಂಡೋದಲ್ಲೂ ಬೆಂಗಳೂರು ತಂಡ….

ನವದೆಹಲಿ, ಮಾ. 27: ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿ ಭಾರತದಲ್ಲಿ ಅನೇಕ ಲೀಗ್​ಗಳು ಹುಟ್ಟಿಕೊಳ್ಳುತ್ತಿವೆ. ಅದಕ್ಕೆ ಹೊಸದಾಗಿ ಸೇರ್ಪಡೆ ಇಂಡಿಯನ್ ಟೇಕ್ವಾಂಡೋ ಪ್ರೀಮಿಯರ್ ಲೀಗ್ (ಟಿಪಿಎಲ್). ಮಹತ್ವಾಕಾಂಕ್ಷೆಯ ಟಿಪಿಎಲ್ ಅನ್ನು ಇಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅನಾವರಣ ಮಾಡಲಾಯಿತು. ದೇಶದಲ್ಲಿ ಕ್ರೀಡೆಯನ್ನು ಪರಿವರ್ತಿಸುವ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಗಳನ್ನು ರೂಪಿಸುವ ಭರವಸೆಯೊಂದಿಗೆ ಈ ಲೀಗ್‌ಅನ್ನು ಆರಂಭಿಸಲಾಗಿದೆ. 2023ರ ಜೂನ್ ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಫ್ರಾಂಚೈಸಿ-ಮಾದರಿ ಲೀಗ್‌ಗೆ ಹೈದರಾಬಾದ್, ರಾಜಸ್ಥಾನ, ಮಹಾರಾಷ್ಟ್ರ, ಅಸ್ಸಾಂ, ದೆಹಲಿ, ಬೆಂಗಳೂರು, ಡೆಹ್ರಾಡೂನ್, ಪಂಜಾಬ್, ಹರಿಯಾಣ, ಹಿಮಾಚಲ, ಚೆನ್ನೈ ಮತ್ತು ಗುಜರಾತ್‌ ರಾಜ್ಯಗಳಿಂದ ಫ್ರಾಂಚೈಸಿ ಖರೀದಿ ಮಾಡಲಾಗಿದೆ.

ಟೇಕ್ವಾಂಡೋ ಗ್ರ್ಯಾಂಡ್‌ಮಾಸ್ಟರ್‌ಗಳಾದ ಜುನ್ ಲೀ ಮತ್ತು ವಿಶ್ವ, ಒಲಂಪಿಕ್ ಮತ್ತು ಏಷ್ಯನ್ ಚಾಂಪಿಯನ್ ಮೂನ್ ಡೇ ಸಂಗ್, ಲೀಗ್‌ ಅನಾವರಣ ಕಾರ್ಯಕ್ರಮದಲ್ಲಿದ್ದ ದೊಡ್ಡ ಮಟ್ಟದ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.  ಟಿಪಿಎಲ್‌ ಖಂಡಿತವಾಗಿ ಗಮನಾರ್ಹ ಬದಲಾವಣೆ ತರಲಿದೆ ಎಂದು 400 ಆಟಗಾರರು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಹೇಳುವ ಮೂಲಕ ಲೀಗ್‌ಅನ್ನು ಶ್ಲಾಘಿಸಿದರು.

ದೇಶದಲ್ಲಿ 10 ಲಕ್ಷ ನೋಂದಾಯಿತ ಟೇಕ್ವಾಂಡೋ ಆಟಗಾರರಿದ್ದಾರೆ. ಇದು ಭಾರತದಲ್ಲಿ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಅಗ್ರ ಆಟಗಾರರು ತಮ್ಮ ಕೌಶಲ್ಯಗಳನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅವಕಾಶವನ್ನು ಪಡೆಯುತ್ತಾರೆ ಮತ್ತು ಭಾರತವು ಶೀಘ್ರದಲ್ಲೇ ಟೇಕ್ವಾಂಡೋದಲ್ಲಿ ಒಲಿಂಪಿಕ್ ಪದಕ ವಿಜೇತರನ್ನು ನೋಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಮೂನ್ ಡೇ ಸಂಗ್ ವಿಶ್ವಾಸ ವ್ಯಕ್ತಪಡಿಸಿದರು.

Taekwondo Premier League

ದಕ್ಷಿಣ ಕೊರಿಯಾ ಮೂಲದ ಕ್ರೀಡೆಯಾಗಿರುವ ಟೇಕ್ವಾಂಡೋ ಮಾರ್ಷಲ್‌ ಆರ್ಟ್ಸ್‌ನ ಅಥವಾ ಸಮರಕಲೆಯ ಒಂದು ರೂಪವಾಗಿದೆ. ಕಿಕ್ಕಿಂಗ್‌ ಹಾಗೂ ಪಂಚಿಂಗ್‌ ಇದರಲ್ಲಿ ಒಳಗೊಂಡಿರುತ್ತದೆ. ಸುಮಾರು 200 ದೇಶಗಳಲ್ಲಿ 20 ಮಿಲಿಯನ್ ಕ್ರೀಡಾಪಟುಗಳು ಟೇಕ್ವಾಂಡೋ ಅಭ್ಯಾಸ ಮಾಡುತ್ತಾರೆ ಹಾಗೂ ಇದು ಒಲಿಂಪಿಕ್ ಕ್ರೀಡೆಯೂ ಆಗಿದೆ. “ಇದು ಟೇಕ್ವಾಂಡೋದಲ್ಲಿ ಹೊಸ ಅಧ್ಯಾಯದ ಪ್ರಾರಂಭವಾಗಿದೆ, ವಾಸ್ತವವಾಗಿ ಹೊಸ ಯುಗ. ನಾವು ಕಳೆದ ಎರಡು ವರ್ಷಗಳಿಂದ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಕ್ರೀಡೆಯನ್ನು ಬೆಂಬಲಿಸಲು ಆಸಕ್ತಿ ಹೊಂದಿರುವ ಹಲವಾರು ಉದ್ಯಮಿಗಳು ಮತ್ತು ಕಂಪನಿಗಳನ್ನು ನೋಡಲು ಸಂತಸವಾಗುತ್ತದೆ’ ಎಂದು ಲೀಗ್‌ನ ಸಂಸ್ಥಾಪಕ ನಿರ್ದೇಶಕರಾದ ಗಣೇಶ್ ದುವ್ವೂರಿ, ಜಿಕೆ ವೆಂಕಟ್ ಮತ್ತು ನವನೀತಾ ವ್ಯಕ್ತಪಡಿಸಿದ್ದಾರೆ.

ಗ್ರ್ಯಾಂಡ್ ಮಾಸ್ಟರ್ ಜುನ್ ಲೀ, ಟಿಪಿಎಲ್ ಕಮಿಷನರ್, ಮಾಸ್ಟರ್ ಕಿಮ್ ಚಾಂಗ್ ಕ್ವಾನ್, ಮುಖ್ಯ ಟಿಪಿಎಲ್ ಕೋಚ್, ಆಡ್ ಮೂನ್ ಡೇ ಸಂಗ್ ನೇತೃತ್ವದ ಅಂತರರಾಷ್ಟ್ರೀಯ ಸಮಿತಿಯು 12 ನಗರಗಳಲ್ಲಿ ನಡೆಯಲಿರುವ ಸೆಲೆಕ್ಷನ್‌ ಟ್ರಯಲ್ಸ್‌ನಿಂದ ಆಟಗಾರರನ್ನು ಆಯ್ಕೆ ಮಾಡುತ್ತದೆ. ಪ್ರತಿ ತಂಡಕ್ಕೆ ಮಾರ್ಗದರ್ಶಕರು ಮತ್ತು ತರಬೇತುದಾರರನ್ನು ಈಗಾಗಲೇ ಗುರುತಿಸಲಾಗಿದೆ.”ಟಿಪಿಎಲ್ ಅನ್ನು ಮೊದಲ ಬಾರಿಗೆ ತಂಡದ ಸ್ವರೂಪದಲ್ಲಿ ಆಡಲಾಗುತ್ತದೆ, ಪ್ರತಿ ತಂಡವು ಐದು ಅಗ್ರ ಆಟಗಾರರನ್ನು ಹೊಂದಿರುತ್ತದೆ. ಸ್ಪರ್ಧೆಯನ್ನು ವೇಗವಾಗಿ ಮತ್ತು ರೋಮಾಂಚನಕಾರಿಯಾಗಿಡಲು ನಾವು 58.1kg-67.9kg ವಿಭಾಗಕ್ಕೆ ನಿರ್ಬಂಧಿಸಲಾಗಿದೆ’ ಎಂದು ಸಂಸ್ಥಾಪಕ ನಿರ್ದೇಶಕರಾದ ಗಣೇಶ್ ಮಾಹಿತಿ ನೀಡಿದ್ದಾರೆ.

ವಿಶ್ವ ದರ್ಜೆಯ ವೇದಿಕೆಯನ್ನು ಒದಗಿಸುವುದರ ಜೊತೆಗೆ, ಆಯ್ಕೆಯಾದ ಆಟಗಾರರು ಅತ್ಯುತ್ತಮ ಕೋಚಿಂಗ್‌ ಮತ್ತು ತರಬೇತಿಯನ್ನು ಪಡೆಯುತ್ತಾರೆ. ಆಕರ್ಷಕ ಬಹುಮಾನ ಮೊತ್ತವೂ ಇದ್ದು, ವೈಯಕ್ತಿಯ ಪ್ರಶಸ್ತಿಯನ್ನೂ ಕೂಡ ಲೀಗ್‌ನಲ್ಲಿ ನೀಡಲಾಗುತ್ತದೆ’ ಎಂದು ಜಿಕೆ ವೆಂಕಟ್‌ ತಿಳಿಸಿದ್ದಾರೆ.

ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ ಫ್ರಾಂಚೈಸಿ ಮಾಲೀಕರಾದ ಸೃಷ್ಟಿ ರಾಣಾ (ಹರಿಯಾಣ ಹಂಟರ್ಸ್), ಎ ವೆಂಕಟ್ ರೆಡ್ಡಿ ಶ್ರೀ ರಾಜಾ (ಹೈದರಾಬಾದ್ ಗ್ಲೈಡರ್ಸ್), ವಿಜಯ್ ಕುಮಾರ್ ಬನ್ಸಾಲಿ (ಗುಜರಾತ್ ಥಂಡರ್ಸ್), ರುಚಿತಾ ಮಿತ್ತಲ್ (ಮಹಾರಾಷ್ಟ್ರ ಅವೆಂಜರ್ಸ್), ಡಾ ಆರ್ ಕೆ ಗುಪ್ತಾ (ಡೆಲ್ಲಿ ವಾರಿಯರ್ಸ್),   ಟಿಎಲ್ ರಾವ್ ಮತ್ತು ಮೊಹಮ್ಮದ್. ರಯೀಸ್ (ರಾಜಸ್ಥಾನ ರೆಬೆಲ್ಸ್) ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಕ್ಕು ಇಲಾಖೆಯ ಖಾಸಗಿ ಪ್ರಧಾನ ಕಾರ್ಯದರ್ಶಿ ವೈ.ಆನಂದ್‌ ರಾಜ್‌, ಗೌರವ ಅತಿಥಿಗಳಾಗಿ ಅಭಯ್ ಸಿಂಗ್ ರಾಥೋಡ್ (ಗ್ರ್ಯಾಂಡ್ ಮಾಸ್ಟರ್ ಮತ್ತು ಟಿಪಿಎಲ್ ಉಪಾಧ್ಯಕ್ಷರು), ಸಂಜೀವ್ ಸೆಹಗಲ್ (ಸುಪ್ರೀಂ ಕೋರ್ಟ್ ಎಎಜಿ), ಸೈಶಾ ಸೆಹಗಲ್ ( ಬಾಲಿವುಡ್‌ ನಟಿ), ಮಹೇಂದ್ರ ಪಾಲ್ ಅರೋರಾ (ಟಿಪಿಎಲ್ ಉಪಾಧ್ಯಕ್ಷ), ವಿನಯ್ ಕುಮಾರ್ (ಜಾಗತಿಕ ವ್ಯಾಪಾರ ಉದ್ಯಮಿ ಮತ್ತು  ಟಿಪಿಎಲ್ ಸದಸ್ಯ), ಮಾಯಾ ಠಾಕೂರ್ (ಇನ್ಸ್ಟಿಟ್ಯೂಟ್ ಆಫ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾದ ಡಿಜಿ) ಮತ್ತು ಆನಂದ್ ಪಾಂಡೆ (ಭಾರತೀಯ ಒಲಿಂಪಿಕ್ ಅಸೋಸಿಯೇಷನ್) ಹಾಜರಿದ್ದರು.

TPL : Taekwondo Premier League modeled after IPL; Bangalore team in Taekwondo too…

Related posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

March 7, 2026
ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

March 7, 2026
Tags: Taekwondo Premier LeagueTPL
ShareTweetSendShare
Join us on:

Related Posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

by admin
March 7, 2026
0

ಸಂಜು ಸ್ಯಾಮ್ಸನ್.. ಹೌದು.. ದೇವರ ನಾಡಿನ ಹುಡುಗನ ಕ್ರಿಕೆಟ್ ಪಯಣದಲ್ಲಿವೆ ಹಲವು ಸ್ಪೂರ್ತಿದಾಯಕ ಕಥೆಗಳು..! ಅವಮಾನ, ಅಪಮಾನಗಳೇ ಇವರ ಯಶಸ್ಸಿನ ಮೆಟ್ಟಿಲು...! ಮೌನ ಕ್ರಾಂತಿಯಿಂದಲೇ ತನ್ನ ಹೆಸರಿಗೆ...

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

by Shwetha
March 7, 2026
0

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯ ಮೂಲಕ ರಾಜ್ಯದ...

ವಸತಿ ಯೋಜನೆ ಸಬ್ಸಿಡಿ ಹೆಚ್ಚಳ: SC/ST ಫಲಾನುಭವಿಗಳಿಗೆ ₹3 ಲಕ್ಷ ಘೋಷಣೆ

ವಸತಿ ಯೋಜನೆ ಸಬ್ಸಿಡಿ ಹೆಚ್ಚಳ: SC/ST ಫಲಾನುಭವಿಗಳಿಗೆ ₹3 ಲಕ್ಷ ಘೋಷಣೆ

by Shwetha
March 7, 2026
0

ಕರ್ನಾಟಕ ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ಧರಾಮಯ್ಯ ಅವರು ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಈವರೆಗೆ ₹1.20 ಲಕ್ಷ ಇದ್ದ ವಸತಿ ಸಬ್ಸಿಡಿಯನ್ನು ₹2...

ಕರ್ನಾಟಕ ಬಜೆಟ್ 2026: ಸರ್ಕಾರಿ ನೌಕರರಿಗೆ ತೀವ್ರ ನಿರಾಸೆ, ಒಪಿಎಸ್ ಇಲ್ಲ, ಕ್ಯಾಂಟೀನ್ ಇಲ್ಲ ಹುಸಿಯಾದ  ನಿರೀಕ್ಷೆಗಳು

ಕರ್ನಾಟಕ ಬಜೆಟ್ 2026: ಸರ್ಕಾರಿ ನೌಕರರಿಗೆ ತೀವ್ರ ನಿರಾಸೆ, ಒಪಿಎಸ್ ಇಲ್ಲ, ಕ್ಯಾಂಟೀನ್ ಇಲ್ಲ ಹುಸಿಯಾದ ನಿರೀಕ್ಷೆಗಳು

by Shwetha
March 7, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ರಾಜಕೀಯ ಜೀವನದ ದಾಖಲೆಯ 17ನೇ ಹಾಗೂ 4.49 ಲಕ್ಷ ಕೋಟಿ ರೂಪಾಯಿ ಗಾತ್ರದ ಬೃಹತ್ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಸಮಗ್ರ...

ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿದ್ದರಾಮಯ್ಯ ಸರ್ಕಾರದ ಬಂಪರ್ ಕೊಡುಗೆ ; 56,432 ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ

ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿದ್ದರಾಮಯ್ಯ ಸರ್ಕಾರದ ಬಂಪರ್ ಕೊಡುಗೆ ; 56,432 ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ

by Shwetha
March 7, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ತಮ್ಮ ಐತಿಹಾಸಿಕ 17ನೇ ರಾಜ್ಯ ಬಜೆಟ್ ನಲ್ಲಿ ನಾಡಿನ ಲಕ್ಷಾಂತರ ನಿರುದ್ಯೋಗಿ ಯುವಜನತೆಗೆ ಆಶಾದಾಯಕ ಮತ್ತು ಅತ್ಯಂತ ಮಹತ್ವದ ಸಿಹಿಸುದ್ದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram