ಲಾಕ್ ಡೌನ್‍ನಿಂದ ಸುಮಾರು ಎರಡು ತಿಂಗಳುಗಳಿಂದ ಮನೆಯಲ್ಲೇ ಕುಳಿತಿದ್ದ ಭಾರತೀಯ ಅಥ್ಲೀಟ್‍ಗಳು ಮತ್ತೆ ಅಭ್ಯಾಸ ಶುರು ಮಾಡ್ಕೊಂಡಿದ್ದಾರೆ. ಕೊರೋನಾ ವೈರಸ್‍ನಿಂದ ಸರ್ಕಾರದ ಆದೇಶಗಳನ್ನು ಅಥ್ಲೀಟ್‍ಗಳು ಕಟ್ಟು ನಿಟ್ಟಾಗಿ ಪಾಲಿಸಿದ್ದರು. ಇದೀಗ ಸರ್ಕಾರದ ಮಾರ್ಗಸೂಚಿಗಳಂತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಎನ್‍ಐಎಸ್ ಪಟಿಯಾಲ, ಸಾಯ್ ಸೆಂಟರ್ ಬೆಂಗಳೂರು ಮತ್ತು ಊಟಿ ಕ್ರೀಡಾ ಶಿಬಿರದಲ್ಲಿ ಟ್ರ್ಯಾಕ್ ಆಂಡ್ ಫೀಲ್ಡ್‍ನ ಕ್ರೀಡಾಪಟುಗಳು ಅಭ್ಯಾಸಕ್ಕೆ ಮರಳಿದ್ದಾರೆ. ಎರಡು ತಿಂಗಳುಗಳ ಕಾಲ ಅಭ್ಯಾಸ ಮಾಡದ ಕಾರಣ ಮೊದಲು ಫಿಟ್‍ನೆಸ್ ಕಡೆಗೆ ಗಮನ ಹರಿಸಲಿದ್ದಾರೆ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಶನ್ ಅಧ್ಯಕ್ಷ ಆದಿಲೆ ಸುಮಾರಿವಾಲ್ಲಾ ಸ್ಪಷ್ಟಪಡಿಸಿದ್ದಾರೆ.
ಎಂಟು ವಾರಗಳ ಕಾಲ ಅಥ್ಲೀಟಿಗಳು ತರಬೇತಿ ಶಿಬಿರದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಮೊದಲು ಫಿಟ್‍ನೆಸ್‍ನತ್ತ ಗಮನ ಹರಿಸ್ತಾರೆ. ಆದಾನಂತರ ಅವರು ತಮ್ಮ ತಮ್ಮ ಅಭ್ಯಾಸದಲ್ಲಿ ನಿರತರಾಗಲಿದ್ದಾರೆ ಎಂದು ಅವರು ತಿಳಿಸಿದ್ರು. ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ವೇಗದ ಓಟಗಾರ್ತಿ ಹಿಮಾ ದಾಸ್ ಅವರು ಎನ್‍ಐಎಸ್ ಪಟಿಯಾಲದಲ್ಲಿ ಅಭ್ಯಾಸ ಶುರು ಮಾಡಿದ್ರೆ, ನಡಿಗೆ ಸ್ಪರ್ಧಿಗಳು ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಹಾಗೂ ದೂರದ ಓಟಗಾರರು ಊಟಿಯಲ್ಲಿ ತರಬೇತಿ ಶುರು ಮಾಡ್ಕೊಂಡಿದ್ದಾರೆ. ಇನ್ನು ವೇಗದ ಓಟಗಾರ್ತಿ ದುತಿ ಚಾಂದ್ ಅವರು ಈಗಾಗಲೇ ಭುಬನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ತರಬೇತಿ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪರಿಪಾಲಿಸಿಕೊಂಡು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಭ್ಯಾಸದಲ್ಲಿ ಇಂದಿನಿಂದ ಅಥ್ಲೀಟ್‍ಗಳು ನಿರತರಾಗಿದ್ದಾರೆ.








