ನವೆಂಬರ್ 29ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ
ಗಾಜಿಯಾಬಾದ್ : ಇದೇ ತಿಂಗಳ 29 ರಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ.
ಕನಿಷ್ಠ ಬೆಂಬಲ ಬೆಲೆಯನ್ನು ಶಾಶ್ವತಗೊಳಿಸಲು ಶಾಸನೀಯ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ನವೆಂಬರ್ 26ಕ್ಕೆ ರೈತರು ಟ್ರ್ಯಾಕ್ಟರ್ ಮೆರವಣಿಗೆ ಮಾಡಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ರಸ್ತೆಗಳಲ್ಲಿ ನಾವು ಪ್ರತಿಭಟನೆ ನಡೆಸೋದಿಲ್ಲ ಎಂದಿರುವ ರಾಕೇಶ್ ಟಿಕಾಯತ್, ಸರ್ಕಾರ ಸದ್ಯ ತೆರವುಗೊಳಿಸಿರುವ ರಸ್ತೆಗಳ ಮುಖಾಂತರವೇ ನಾವು ದೆಹಲಿಯ ಪಾರ್ಲಿಮೆಂಟ್ ಕಡೆಗೆ ತೆರಳಲಿದ್ದೇವೆ.
ಈ ಹಿಂದೆ 200 ರೈತರು ಪಾರ್ಲಿಮೆಂಟ್ ನತ್ತ ಹೋಗಿದ್ವಿ. ಈ ಬಾರಿ ಸಾವಿರಾರು ರೈತರು ಈ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಕೇಶ್ ಟಿಕಾಯತ್ ಮಾಹಿತಿ ನೀಡಿದ್ದಾರೆ.
ಅಂದಹಾಗೆ ಇದೇ ನವೆಂಬರ್ 29 ರಿಂದ ದೆಹಲಿಯಲ್ಲಿ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅಂದೇ ಈ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಗುತ್ತಿದೆ.