ಕೃಷಿ ಕಾನೂನು ವಿರೋಧಿಸಿ ನಾಳೆ ಟ್ರ್ಯಾಕ್ಟರ್ ಮೆರವಣಿಗೆ
ನವದೆಹಲಿ : ಕೃಷಿ ಕಾನೂನುಗಳನ್ನು ವಿರೋಧಿಸಿ ( ಸ್ವಾತಂತ್ರ್ಯ ದಿನ ) ನಾಳೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ರೈತರು ಟ್ರ್ಯಾಕ್ಟರ್ ಮೆರೆವಣಿಗೆ ನಡೆಸಲಿದ್ದಾರೆ.
ಇದಕ್ಕಾಗಿ ಜಿಂದ್ ನ ಉಚ್ಚಾನ ಕಲಾನ್ ನಲ್ಲಿ ರೈತರು ಪೂರ್ವ ತಯಾರಿ ನಡೆಸಿದ್ದಾರೆ. ಇದರಲ್ಲಿ ಮಹಿಳಾ ರೈತರು ಕೂಡ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಾಳೆ ಮೆರವಣಿಗೆಯಲ್ಲಿ ಸುಮಾರು 5000 ವಾಹನಗಳು ಮತ್ತು 20000 ರೈತರಯ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ರೈತರು 75 ನೇ ಸ್ವಾತಂತ್ರ್ಯ ದಿನವನ್ನು ‘ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ ದಿವಸ್’ ಎಂದು ಆಚರಿಸುತ್ತಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ನಂತರ, ದೇಶಾದ್ಯಂತ ರೈತರು ಈ ದಿನವನ್ನು ಬ್ಲಾಕ್ ಮತ್ತು ತಹಸಿಲ್ ಮಟ್ಟದಲ್ಲಿ ತಿರಂಗಾ ರ್ಯಾಲಿಗಳೊಂದಿಗೆ ಆಚರಿಸಲಿದ್ದಾರೆ ಎನ್ನಲಾಗಿದೆ.
ನಾಳೆ ರೈತರು ಮತ್ತು ಕಾರ್ಮಿಕರು ಟ್ರ್ಯಾಕ್ಟರ್‍ಗಳು, ಮೋಟಾರ್ ಸೈಕಲ್‍ಗಳು, ಸೈಕಲ್‍ಗಳು ಮತ್ತು ಎತ್ತಿನಗಾಡಿಗಳ ಮುಖಾಂತರ ಪ್ರತಿಭಟನೆ ನಡೆಸಲಿದ್ದಾರೆ.









