ಬೆಂಗಳೂರು: ಕೇಂದ್ರ ಹಾಗೂ ರಾಜ್ಯದ ಕೃಷಿ ಕಾಯ್ದೆ ವಿರೋಧಿಸಿ ರಾಜಧಾನಿ ಬೆಂಗಳೂರಿನಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ಜಾಥಾಗೆ ಕ್ಷಣಗಣನೆ ಆರಂಭವಾಗಿದೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಟ್ರ್ಯಾಕ್ಟರ್ ಜಾಥಾಗೆ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಅನುಮತಿ ನೀಡಿಲ್ಲ. ಪೊಲೀಸರು ಅನುಮತಿ ನೀಡದಿದ್ದರೂ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರು ನಗರ ಪ್ರವೇಶಿಸುವ ದಶದಿಕ್ಕುಗಳಲ್ಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಒಂದೇ ಒಂದು ಟ್ರ್ಯಾಕ್ಟರ್ ನಗರದೊಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹಠಕ್ಕೆ ಬಿದ್ದಿದೆ.

ಹೀಗಾಗಿ ಬೆಂಗಳೂರು ನಗರದಲ್ಲಿ ರೈತ ಕಹಳೆ ಇಂದು ಸದ್ದು ಮಾಡಲಿದ್ದು, ರಾಜಧಾನಿ ಬೆಂಗಳೂರು ಲಾಕ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಟ್ರ್ಯಾಕ್ಟರ್ ಎಂಟ್ರಿಗೆ ಪೊಲೀಸರು ಅಡ್ಡಿಪಡಿಸಿದರೆ ಅಲ್ಲೇ ರಸ್ತೆ ತಡೆ ನಡೆಸುವುದಾಗಿ ರೈತ ಮುಖಂಡರು ಹೇಳುತ್ತಿರುವುದು ಸಂಘರ್ಷ ಕಾವೇರುವಂತೆ ಮಾಡಿದೆ.
ಹೀಗಾಗಿ ಬೆಂಗಳೂರು ನಗರ ಪ್ರವೇಶಿಸುವ ಮೈಸೂರು ರಸ್ತೆ, ತುಮಕೂರು ರಸ್ತೆ, ಏರ್‍ಪೋರ್ಟ್ ರಸ್ತೆ, ಕನಕಪುರ ರಸ್ತೆ, ಕೆ.ಆರ್ ಪುರಂ, ಹೊಸೂರು ರಸ್ತೆ, ನೈಸ್ ರಸ್ತೆ ಸೇರಿದಂತೆ ಎಲ್ಲಾ ದಿಕ್ಕುಗಳಲ್ಲಿಯೂ ಟ್ರ್ಯಾಕ್ಟರ್ ಜಾಥಾ ತಡೆಯಲು ಪೊಲೀಸರು ಸರ್ವ ಸನ್ನದ್ಧರಾಗಿದ್ದಾರೆ.
ರಾಜಧಾನಿಗೆ ಟ್ರ್ಯಾಕ್ಟರ್ ತಂದೇ ತರುತ್ತೇವೆ..!
ರಾಜ್ಯಾದ್ಯಂತ ಕಳೆದ ರಾತ್ರಿಯಿಂದ ಬೆಂಗಳೂರು ಕಡೆ ಹೊರಟ ರೈತರ ಟ್ರ್ಯಾಕ್ಟರ್ ಗಳನ್ನು ಆಯಾ ಜಿಲ್ಲಾ ಗಡಿಗಳಲ್ಲಿಯೇ ಪೊಲೀಸರು ತಡೆದು ವಶಕ್ಕೆ ಪಡೆಯುತ್ತಿದ್ದಾರೆ. ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತ ಸಂಘಟನೆಗಳು, ಟ್ರಾಕ್ಟರ್ ಮೆರವಣಿಗೆ ನಡೆಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದು ಬೇರೆ ಬೇರೆ ಮಾರ್ಗೋಪಾಯಗಳನ್ನ ಹುಡುಕಿವೆ. ಬೆಂಗಳೂರು ನಗರಕ್ಕೆ ಬೇರೆ ಬೇರೆ ಮಾರ್ಗಗಳಿಂದ ಟ್ರ್ಯಾಕ್ಟರ್‍ಗಳನ್ನು ನುಗ್ಗಿಸಲು ರೈತ ಸಂಘಟನೆಗಳು ಪ್ಲಾನ್ ಮಾಡಿಕೊಂಡಿವೆ. ರೈತ ಸಂಘಟನೆಗಳು ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳಿ ಟ್ರಾಕ್ಟರ್ ಗಳನ್ನ ತಡೆಯುತ್ತಿರುವುದು ಕಂಡುಬಂದಿದೆ.

ನೈಸ್ ರಸ್ತೆಯಿಂದ ಪರೇಡ್
ರಾಜ್ಯ ರೈತ ಮತ್ತು ಹಸಿರು ಸೇನೆ ಕೋಡಿಹಳ್ಳಿ ಮುಖಂಡ ಚಂದ್ರಶೇಖರ್ ನೇತೃತ್ವದಲ್ಲಿ ಮಧ್ಯಾಹ್ನ 12ಕ್ಕೆ ತುಮಕೂರು ರಸ್ತೆಯ ನೈಸ್ ರೋಡ್ ಜಂಕ್ಷನ್‍ನಿಂದ ರೈತರ ಪರೇಡ್ ಆರಂಭವಾಗಲಿದೆ.
ಟ್ರಾಕ್ಟರ್, ಲಾರಿ, ಟೆಂಪೋ, ಗೂಡ್ಸ್ ವಾಹನ ಸೇರಿದಂತೆ ವಿವಿಧ ವಾಹನಗಳ ಪರೇಡ್ ನಡೆಯಲಿದೆ. ನೈಸ್ ರಸ್ತೆ ಜಂಕ್ಷನ್‍ನಿಂದ ಪ್ರಾರಂಭಗೊಂಡು ಗೊರಗುಂಟೆ ಪಾಳ್ಯ, ಯಶವಂತಪುರ, ಮಲ್ಲೇಶ್ವರಂ ಸರ್ಕಲ್‍ನ ಮಾರಮ್ಮ ದೇವಸ್ಥಾನ, ಆನಂದ್ ರಾವ್ ಸರ್ಕಲ್ ಮತ್ತು ಫ್ರೀಡಂ ಪಾರ್ಕ್‍ವರೆಗೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಮೆರವಣಿಗೆ ಸಾಗಲಿದೆ.
ನಗರದ ಆರು ಕಡೆಗಳಿಂದ ಟ್ರಾಕ್ಟರ್ ಹಾಗೂ ಇತರ ವಾಹನಗಳೊಂದಿಗೆ ರೈತರು ಪರೇಡ್ ಮಾಡಲಿದ್ದಾರೆ. ಬಿಡದಿ ಜಂಕ್ಷನ್, ದೇವನಹಳ್ಳಿ ನಂದಿ ಕ್ರಾಸ್, ಹೊಸಕೋಟೆ ಟೋಲ್ ಜಂಕ್ಷನ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಸುಮನಹಳ್ಳಿ ಸರ್ಕಲ್‍ನಿಂದ ಜಾಥಾಗಳು ಹೊರಟು ಫ್ರೀಡಂ ಪಾರ್ಕ್ ತಲುಪಲಿವೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ರೈತರು ಹಾಗೂ ಸರ್ಕಾರದ ನಡುವಿ ಜಟಾಪಟಿ ತಾರಕಕ್ಕೇರಿದ್ದು, ಟ್ರ್ಯಾಕ್ಟರ್ ಮೆರವಣಿಗೆಯಿಂದ ರಾಜಧಾನಿ ಬೆಂಗಳೂರು ನಗರ ಲಾಕ್ ಆಗುತ್ತಾ, ರೈತರ ಟ್ರ್ಯಾಕ್ಟರ್ ಕಹಳೆಗೆ ಪೊಲೀಸರು ವಿಫಲಗೊಳಿಸುತ್ತಾರಾ ಎಂಬುದು ಕುಹೂಹಲ ಕೆರಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








