ಮೈಸೂರು : ದುಬಾರಿ ಕಾರುಗಳ ಕ್ರೇಜ್ ಇರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಇದೀಗ ಟ್ರ್ಯಾಕ್ಟರ್ ಏರಿ ಸವಾರಿ ಮಾಡಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ಶೂಟಿಂಗ್ ಇಲ್ಲದೇ ಮೈಸೂರು ಫಾರ್ಮ್ ಹೌಸ್ ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಾಣಿಗಳ ಜೊತೆ ಕಾಲ ಕಳೆಯುತ್ತಾ ಕೃಷಿ ಚಟುವಟಿಕೆಗಳಲ್ಲಿ ಗಮನ ಹರಿಸಿದ್ದಾರೆ. ಇದರ ಮಧ್ಯೆ ದರ್ಶನ್ ಅವರು ಹೊಸ ಟ್ರ್ಯಾಕ್ಟರ್ ಒಂದನ್ನು ಖರೀದಿ ಮಾಡಿದ್ದು, ಸ್ವತಃ ಅವರೇ ಶೋ ರೂಂಗೆ ಹೋಗಿ ಟ್ರ್ಯಾಕ್ಟರ್ ಡೆಲವರಿ ಪಡೆದಿದ್ದಾರೆ.
ಅಲ್ಲದೇ ಮೈಸೂರು ಬಳಿಯ ಕೆಂಪಯ್ಯನ ಹುಂಡಿಯಿಂದ ತಮ್ಮ ಫಾರ್ಮ್ ಹೌಸ್ ಗೆ ಟ್ರ್ಯಾಕ್ಟರ್ ಡ್ರೈವಿಂಗ್ ಮಾಡಿಕೊಂಡು ಹೋಗಿದ್ದಾರೆ. ದರ್ಶನ್ ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋವನ್ನು ಅಭಿಮಾನಿಯೊಬ್ಬರು ರೆಕಾರ್ಡ್ ಮಾಡಿಕೊಂಡು ತನ್ನ ಫೇಸ್ ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಟ್ರ್ಯಾಕ್ಟರ್ ಓಡಿಸುತ್ತಿರುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.