ಪೊಲೀಸರು ದಂಡ ವಿಧಿಸಿದ್ದಕ್ಕೆ ಕುಡಿದ ಮತ್ತಲ್ಲಿ 15 ಕಾರು ಧ್ವಂಸ…
ಟ್ರಾಫಿಕ್ ಪೊಲೀಸರು 10,000 ರೂಪಾಯಿ ದಂಡ ವಿಧಿಸಿದ್ದಕ್ಕೆ ಕೋಪಗೊಂಡ ಇಬ್ಬರು ಮದ್ಯವಸನಿಗಳು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಗಳನ್ನ ಧ್ವಂಸ ಮಾಡಿರುವ ಘಟನೆ ಚೆನೈ ನಲ್ಲಿ ನಡೆದಿದೆ.
ಟಿ.ನಗರ ಪಾಂಡಿಬಜಾರ್ ಪ್ರದೇಶದಲ್ಲಿ ತೇನಂಪೇಟೆ ಸಂಚಾರ ವಿಭಾಗದ ಪೊಲೀಸರು ಶುಕ್ರವಾರ ರಾತ್ರಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆ ಸಮಯದಲ್ಲಿ ತಿರುಚೆಂದೂರಿನ ರಾಹುಲ್ ವಳವನ್ ಮತ್ತು ಆತನ ಸ್ನೇಹಿತ ಧರ್ಮನ್ರಾಜ್ ಕಂಠ ಪೂರ್ತಿ ಕುಡಿದು ಬೈಕ್ ಚಲಾಯಿಸುತ್ತಿದ್ದಾಗ ಸಿಕ್ಕಿಬಿದ್ದ ಕಾರಣ 10 ದಂಡ ವಿಧಿಸಲಾಗಿದೆ.
ಬೈಕ್ ವಶಪಡಿಸಿಕೊಂಡ ಪೊಲೀಸರು ಶನಿವಾರ ಬೆಳಿಗ್ಗೆ ಪೊಲೀಸ್ ಠಾಣೆಗೆ ಬಂದು ಬೈಕ್ ತೆಗೆದುಕೊಳ್ಳುವಂತೆ ಕೇಳಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಸಂಚಾರ ಪೊಲೀಸರು ಬೇರೆ ಕಡೆ ತೆರಳಿದ್ದಾಗ ಅಲ್ಲಿಯವರೆಗೂ ಸುಮ್ಮನಿದ್ದ ಕುಡುಕರು ಸಿಟ್ಟಿಗೆದ್ದು,
ಇಬ್ಬರೂ ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಜಿ.ಎನ್.ಚೆಟ್ಟಿ ರಸ್ತೆ ಬದಿ ನಿಲ್ಲಿಸಿದ್ದ ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಶನಿವಾರ ಬೆಳಗ್ಗೆ 15 ಕಾರಿನ ಗಾಜುಗಳು ಮತ್ತು 5 ಬೈಕ್ ಗಳು ಧ್ವಂಸಗೊಂಡಿರುವುದನ್ನ ಕಂಡು ಮಾಲಿಕರು ಕಂಗಾಲಾಗಿದ್ದಾರೆ. ವಾಹನ ಮಾಲೀಕರು ನೀಡಿದ ದೂರಿನನ್ವಯ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Traffic police: 15 cars wrecked in a drunken road due to fine imposed by the police…








