Traffic rules
ಸರ್ಕಾರ ಟ್ರಾಫಿಕ್ ರೂಲ್ಸ್ ಫಾಲೋ ಮಾಡೋದಕ್ಕೆ ಅದೆಷ್ಟೋ ಕಟ್ಟು ನಿಟ್ಟಿನ ಕ್ರಮಗಳನ್ನ ಜಾರಿಗೆ ತರುತ್ತಿದೆ. ಇಷ್ಟಾದ್ರೂ ಜನರು ಇದ್ಯಾವುದಕ್ಕೂ ಕ್ಯಾರೇ ಅನ್ನದೇ ತಮ್ಮ ಪಾಡಿಗೆ ತಾವು ತಮಗಿಷ್ಟ ಬಂದಹಾಗೆಯೇ ಮಾಡ್ತಾರೆ. ಕೆಲವರು ಹೆಲ್ಮೆಟ್ ಧರಿಸೋದಿಲ್ಲ, ಕೆಲವರು ಟ್ರೈವಿಂಗ್ ಲೈಸೆನ್ಸ್ ಹೊಂದಿರಲ್ಲ. ಕೆಲವರು ಪರರವಾನಗಿ ಇದ್ರೂ ಮನೆಯಲ್ಲೇ ಇಟ್ಟು ಅಡ್ಡಾದಿಡ್ಡ ರಸ್ತೆಯಲ್ಲಿ ಓಡಾಡಿದ್ರೆ ಇನ್ನೂ ಕೆಲವರು ಟ್ರಾಫಿಕ್ ರೂಲ್ಸ್ ಗೂ ನಮಗೂ ಸಂಬಂಧವೇ ಇಲ್ಲ. ಹೆಲ್ಮೆಟ್ ಬೇಡ, ಮಾಸ್ಕ್ ಬೇಡ ಅಂತ ಬೇಜವಾಬ್ದಾರಿ ಪ್ರದರ್ಶನ ಮಾಡ್ತಾರೆ. ಇನ್ನೂ ಕೆಲವರಂತೂ 18 ವರ್ಷಕ್ಕಿಂತ ಚಿಕ್ಕವರು ಗಾಡಿಯಲ್ಲಿ ಹೈ ಸ್ಪೀಡ್ ನಲ್ಲಿ ರೈಡ್ ಮಾಡ್ತಾರೆ.
ಸಿದ್ದರಾಮಯ್ಯಗೆ ವಿಪಕ್ಷ ನಾಯಕನಾಗಿರಲು ಯೋಗತ್ಯ ಇಲ್ಲ : ಈಶ್ವರಪ್ಪ
ಸವಾರರ ಸೇಫ್ಟಿ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡ್ರೂ ಜನರಿಗೆ ಅದರ ಕಿಂಚಿತ್ತೂ ಪರಿವೇ ಇರಲ್ಲ. ಇದು ಬಿಡಿ ಎಷ್ಟೋ ಜನರು ಒಂದು ಕೈಯಲ್ಲಿ ಮೊಬೈಲ್ ಹಿಡಿದು ಮತ್ತೊಂದು ಕೈಲಿ ಡ್ರೈವ್ ಮಾಡೋದು, ಕೆಲವೆಡೆ ಪುಡಾರಿಗಳು ವೀಲ್ಹೀಂಗ್ ಹೈ ಸ್ಪೀಡ್ ಕ್ರೇಜ್ ಅಂತ ಅನೇಕ ಬಾರಿ ತಮ್ಮ ಜೀವಕ್ಕೂ ಕುತ್ತು ತಂದ್ಕೋತಾರೆ ಇನ್ನೂ ಹಲವು ಬಾರಿ ಏನೂ ತಪ್ಪಿಲ್ಲದೇ ಇದ್ರು ಇತರರು ಪ್ರಾಣ ಕಳೆದುಕೊಳ್ಳಬೇಕಾಗುತ್ತೆ. ಇಂತಹ ಅನಾಹುತಗಳಿಗೆ ಕಡಿವಾಣ ಹಾಕೋದಕ್ಕೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಲಕ್ಷಾಂತರ ರೂಪಾಯಿವರೆಗೂ ಡಂಡ ವಿಧಿಸಿದೆ. ಈಗಾಗಲೇ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 129ರ ಪ್ರಕಾರ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸುವುದು ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 230 ಉಪನಿಯಮ(1)ರ ಅನ್ವಯ ರಾಜ್ಯದಲ್ಲಿ ದ್ವಿಚಕ್ರವಾಹನ ಸವಾರ ಹಾಗೂ 4 ವರ್ಷ ಮೇಲ್ಪಟ್ಟ ಹಿಂಬದಿ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನ ಕಡ್ಡಾಯಗೊಳಿಸಲಾಗಿದೆ.
ಯೂಟ್ಯೂಬ್ ನಲ್ಲಿ ಹೊಸ ಸಾಧನೆ ಮಾಡಿದ PRK ಆಡಿಯೋ ಸಂಸ್ಥೆ : ಅಪ್ಪು ಹೇಳಿದ್ದೇನು
ಆದ್ರೂ ಸಹ ಪ್ರಯೋಜನವಾಗ್ತಿಲ್ಲ. ಹೀಗಾಗಿ ಇಂತಹವರಿಗೆ ಬುದ್ದಿ ಕಲಿಸೋದಕ್ಕೆ ರಾಜ್ಯದಲ್ಲಿ ಸಂಚಾರ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿ ತರಲಾಗ್ತಿದ್ದು, ವಾಹನ ಸವಾರರಿಗೆ ರಾಜ್ಯ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಹೌದು ಇನ್ಮುಂದೆ ಸಂಚಾರ ನಿಮಯ ಉಲ್ಲಂಘಿಸಿದ್ದೇ ಆದ್ರೆ , 3 ತಿಂಗಳುಗಳ ಕಾಲ ನಿಮ್ಮ ಚಾಲನಾ ಪರವಾನಗಿ ಅಮಾನತುಗೊಳ್ಳಲಿದೆ. ಅತೀ ಹೆಚ್ಚು ಪ್ರಕರಣಗಳು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವ ಬಗ್ಗೆ ಹೆಚ್ಚು ದಾಖಲಾಗ್ತಿದ್ದು, ಇದನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸಾರಿಗೆ ಇಲಾಖೆ, ಇನ್ಮುಂದೆ ಮುಂದೆ ಹೆಲ್ಮೆಟ್ ಹಾಕದೆ ಬೈಕ್ ಓಡಿಸುವವರ ಡ್ರೈವಿಂಗ್ ಲೈಸೆನ್ಸ್ ಮೂರು ತಿಂಗಳು ರದ್ದು ಮಾಡಲು ಸೂಚನೆ ನೀಡಿದೆ. ಇನ್ನು ಹೊಸ ಆದೇಶದ ಪ್ರಕಾರ ಇನ್ಮುಂದೆ ಚಾಲಕ ಹೆಲ್ಮೆಟ್ ಧರಿಸದಿದ್ದರೆ ಚಾಲನಾ ಪರವಾನಗಿ ಅಮಾನತುಗೊಳಿಸಲಾಗುತ್ತೆ. ಆದ್ರೆ, ಹಿಂಬದಿ ಸವಾರ ಮತ್ತು ಮಕ್ಕಳು ಹೆಲ್ಮೆಟ್ ಧರಿಸದಿದ್ರೆ ದಂಡ ಮಾತ್ರ ವಿಧಿಸಲಾಗುತ್ತೆ. ಇನ್ನು ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಈ ಬಾರಿ ನನಗೆ ಮಂತ್ರಿಸ್ಥಾನ ಖಚಿತ : ಆರ್.ಶಂಕರ್
ಸಾರಿಗೆ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಈ ಆದೇಶವನ್ನ ಜಾರಿಗೊಳಿಸುವಂತೆ ಸೂಚಿಸಿದ್ದು, ಇನ್ಮುಂದೆ ರಾಜ್ಯದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ನಿಗದಿತ ದಂಡ ವಿಧಿಸುವುದರ ಜೊತೆಗೆ ಚಾಲನಾ ಪರವಾನಗಿಯನ್ನ ಕನಿಷ್ಠ ಮೂರು ತಿಂಗಳ ಕಾಲ ಅಮಾನತುಗೊಳಿಸುವ ಪ್ರಕ್ರಿಯೆಯನ್ನ ಜಾರಿಗೊಂಡಿದೆ. ಇನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ದಾಖಲಾದ ಪ್ರಕರಣಗಳ ಸಂಖ್ಯೆ, ಪೊಲೀಸ್ ಠಾಣೆಗಳಿಂದ ಬಂದ ಪ್ರಕರಣಗಳ ಸಂಖ್ಯೆ ಹಾಗೂ ಅಮಾನತು ಮಾಡಿದ ಚಾಲನಾ ಪರವಾನಗಿಗಳ ಸಂಖ್ಯೆಯನ್ನ ಜಂಟಿ ಸಾರಿಗೆ ಆಯುಕ್ತರು ಹಾಗೂ ಅಪರ ಸಾರಿಗೆ ಆಯುಕ್ತರಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಈ ನಿಯಮ ಕೇವಲ ದ್ವಿಚಕ್ರ ಸವಾರರಿಗಷ್ಟೇ ಅಲ್ಲದೇ ಹೆಚ್ಚೆಚ್ಚು ಸೌಂಡ್ ಮಾಡುವ ವಾಹನಗಳು, ಮ್ಯಾಕ್ಸಿ ಕ್ಯಾಬ್ ಹಾಗೂ ಪರವಾನಗಿ ಇಲ್ಲದೆ ಮತ್ತು ಹೆಚ್ಚು ಸರಕುಗಳನ್ನ ಸಾಗಿಸುವ ವಾಹನಗಳು, ಗ್ರಾಹಕರಿಗೆ ಅಧಿಕ ಶುಲ್ಕ ವಿಧಿಸುವ ಆಟೋ ರಿಕ್ಷಾ ಚಾಲಕರಿಗೂ ಈ ನಿಯಮ ಅನ್ವಯವಾಗಲಿದೆ. ಇನ್ಮುಂದೆಯಾದ್ರು ಜನರು ಟ್ರಾಫಿಕ್ ರೂಲ್ಸ್ ಅನ್ನು ಗಂಭೀರವಾಗಿ ತೆಗೆದುಕೊಂಡು ತಮ್ಮದೇ ಸುರಕ್ಷತೆ ಬಗ್ಗೆ ಯೋಚನೆ ಮಾಡಬೇಕಾಗಿದೆ. ತಮ್ಮ ಸುರಕ್ಷತೆ ಬಗ್ಗೆ ಕಾಳಜಿ ಇಲ್ಲದಿದ್ದರೂ ಸರ್ಕಾರದ ಕಟ್ಟು ನಿಟ್ಟಿನ ನಿಯಮದಿಂದಾರೂ ಎಚ್ಚೆತ್ತು ಸಂಚಾರಿ ನಿಯಮಗಳ ಪಾಲನೆ ಮಾಡಿದ್ರೆ ಉತ್ತಮ.
Traffic rules
ಶೂನ್ಯ ಕಲಿಕಾ ರಹಿತ ವರ್ಷ ಮಾಡಲು ಶಾಸಗಿ ಶಾಲೆಗಳ ವಿರೋಧ…!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










