ವಾಹನ ಸವಾರರೇ ಗಮನಿಸಿ – ಇಂಡಿಕೇಟರ್ ಇಲ್ಲ ಅಂದ್ರೆ 500 ರೂ. ದಂಡ ಕಟ್ಟಲು ರೆಡಿಯಾಗಿ..!
ಬೆಂಗಳೂರು : ಬೆಂಗಳೂರಿನ ಜನತೆಗೆ ಅದ್ರಲ್ಲೂ ವಾಹನಸವಾರರಿಗೆ ಶಾಕಿಂಗ್ ನ್ಯೂಸ್ ಒಂದು ಸಿಕ್ಕಿದೆ. ಅದೇನೆಂದ್ರೆ ಇನ್ಮುಂದೆ ಬೆಂಗಳೂರು ನಗರದಲ್ಲಿ ಅಪಘಾತ, ಪ್ರಾಣಹಾನಿ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಶನಿವಾರದಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಎರಡೂ ಕಡೆ ಸೈಡ್ ಮಿರರ್ ಮತ್ತು ಸೈಡ್ ಇಂಡಿಕೇಟರ್ ಇಲ್ಲದಿದ್ದರೆ ಅಂಥ ಬೈಕ್ ಸವಾರರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು. ಮಿರರ್ ಇಲ್ಲದ ಬೈಕ್ ಚಾಲಕರಿಗೆ 500 ರೂಪಾಯಿ ದಂಡ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ಬಿ ಆರ್ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.









