ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ‘ಮಾಯಾಬಜಾರ್’ ಚಿತ್ರದ ಟ್ರೇಲರ್ ನಾಳೆ ರಿಲೀಸ್ ಆಗಲಿದೆ.
ಈ ಬಗ್ಗೆ ನಿರ್ಮಾಪಕ ಪುನೀತ್ ರಾಜ್ ಕುಮಾರ್ ಮಾಹಿತಿ ನೀಡಿದ್ದು.. ನಾಳೆ ಸಂಜೆ 6 ಗಂಟೆಗೆ ‘ಮಾಯಾಬಜಾರ್’ ಟ್ರೇಲರ್ ಬಿಡುಗಡೆ ಮಾಡೋ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಟ್ರೇಲರ್ ಲಾಂಚ್ ಮಾಡ್ತಿದ್ದಾರೆ. ಇದೇ ತಿಂಗಳ 28ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿದರೆ
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಮಾಯಾಬಜಾರ್ ಚಿತ್ರಕ್ಕೆ ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ.. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ವಶಿಷ್ಠ ಸಿಂಹ, ಪ್ರಕಾಶ್ ರಾಜ್, ಸುಧಾರಾಣಿ, ಮತ್ತು ಚೈತ್ರಾ ರಾವ್ ಅಭಿನಯಿಸಿದ್ದಾರೆ.
#Mayabazar trailer tomorrow at 6PM… pic.twitter.com/O7HWaCJnSI
— Puneeth Rajkumar (@PuneethRajkumar) February 16, 2020








