ಜೂನ್ 21ರಿಂದ 50 ವಿಶೇಷ ರೈಲುಗಳ ಸೇವೆ ಪುನಾರಂಭ..!
ಕೊರೊನಾ 2ನೇ ಅಲೆಯಿಂದಾಗಿ ಸ್ಥಗಿತಗೊಂಡಿದ್ದ ರೈಲುಗಳ ಪೈಕಿ 50 ವಿಶೇಷ ರೈಲುಗಳನ್ನ ಸಾರ್ವಜನಿಕ ಸೇವೆಗಾಗಿ ಪುನಾರಂಭಿಸಲು ರೈಲ್ವೆ ಸಚಿವಾಲಯ ಮುಂದಾಗಿದೆ. ಪ್ರಯಾಣಿಕರ ಬೇಡಿಕೆ ಹಾಗೂ ಕೊರೊನಾ ಪರಿಸ್ಥಿತಿಯನ್ನ ನಿಭಾಯಿಸುವ ಸಲುವಾಗಿ ಜೂನ್ 21ರಿಂದಲೇ ಈ ಸೇವೆ ಆರಂಭವಾಗಲಿದೆ. ಉತ್ತರ ಪ್ರದೇಶದ ಗೋರಖ್ಪುರದಿಂದ ಮಹಾರಾಷ್ಟ್ರದ ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಜೂನ್ 25ರಿಂದ ಬೇಸಿಗೆ ವಿಶೇಷ ರೈಲು ಸೇವೆ ಕೂಡ ಆರಂಭವಾಗಲಿದೆ.
ಜೂನ್ ಮೊದಲ ವಾರದಿಂದ ಪ್ರತಿದಿನ ಕಾರ್ಯ ನಿರ್ವಹಿಸುತ್ತಿದ್ದ 800 ಮೇಲ್ / ಎಕ್ಸ್ಪ್ರೆಸ್ ರೈಲುಗಳಿಂದ ಶುಕ್ರವಾರದ ವೇಳೆ 983 ಮೇಲ್ / ಎಕ್ಸ್ಪ್ರೆಸ್ಗೆ ಏರಿಕೆ ಕಂಡಿದೆ. ಪ್ರಯಾಣಿಕರ ಬೇಡಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ರೈಲು ಸೇವೆಗಳ ಸಂಖ್ಯೆಯನ್ನ ಕ್ರಮೇಣವಾಗಿ ಏರಿಕೆ ಮಾಡಲಾಗುತ್ತಿದೆ. ಜೂನ್ 1 ರಿಂದ 18ರ ಒಳಗಾಗಿ 660 ಹೆಚ್ಚುವರಿ ಮೇಲ್ /ಎಕ್ಸ್ಪ್ರೆಸ್ ರೈಲು ಸೇವೆಗಳನ್ನ ವಲಯವಾರು ರೈಲ್ವೆಗಳಲ್ಲಿ ಆರಂಭಿಸಲಾಗಿದೆ.
ದೆಹಲಿ ಜಂಕ್ಷನ್ – ಕೋಟ್ವಾರಾ ಶತಾಬ್ದಿ ಎಕ್ಸ್ಪ್ರೆಸ್, ಚಂಡೀಗಢ – ದೆಹಲಿ ಶತಾಬ್ದಿ ಎಕ್ಸ್ಪ್ರೆಸ್, ದೆಹಲಿ – ಡೆಹ್ರಾಡೂನ್ ಶತಾಬ್ದಿ ಎಕ್ಸ್ಪ್ರೆಸ್, ದೆಹಲಿ – ಕಲ್ಕಾ ಶತಾಬ್ದಿ ಎಕ್ಸ್ಪ್ರೆಸ್, ದೆಹಲಿ -ಅಮೃತ್ ಸರ್ ಶತಾಬ್ದಿ ಎಕ್ಸ್ಪ್ರೆಸ್, ಕಲ್ಕಾ – ಶಿಮ್ಲಾ ಎಕ್ಸ್ಪ್ರೆಸ್, ಬಿಲಾಸ್ಪುರ ಜಂಕ್ಷನ್ – ದೆಹಲಿ ಎಕ್ಸ್ಪ್ರೆಸ್, ಲಕ್ನೋ – ಪ್ರಯಾಗ್ರಾಜ್ ಸಂಗಮ್ ಎಕ್ಸ್ಪ್ರೆಸ್, ಛಪ್ರಾ – ಲಕ್ನೋ ಜಂಕ್ಷನ್ ಎಕ್ಸ್ಪ್ರೆಸ್ ಹಾಗೂ ಫಾರೂಕಾಬಾದ್ – ಛಪ್ರಾ ಎಕ್ಸ್ಪ್ರೆಸ್ಗಳು ಜೂನ್ 21ರಿಂದ ಸೇವೆಯನ್ನ ಪುನಾರಂಭಿಸಲಿವೆ.








