ಎದೆ ಝಲ್ ಎನಿಸುವ ದೃಶ್ಯ – ಹಳಿ ಮೇಲೆ ಬಿದ್ದ ಮಗುವಿನ ಜೀವ ರಕ್ಷಣೆಗೆ ಪ್ರಾಣ ಪಣಕ್ಕಿಟ್ಟ ಸಿಬ್ಬಂದಿ..!
ಮುಂಬೈ : ರೈಲಿನ ಹಳಿ ಮೇಲೆ ಆಯ ತಪ್ಪಿ ಬಿದ್ದ ಮಗುವಿನ ಜೀವವನ್ನ ರೈಲ್ವೇ ಭದ್ರತಾ ಪಡೆ ಸಿಬ್ಬಂದಿ ತನ್ನ ಜೀವವನ್ನೇ ಪಣಕ್ಕಿಟ್ಟು ರಕ್ಷಣೆ ಮಾಡಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ಪವೈರಲ್ ಆಗ್ತಿದ್ದು, ನೆಟ್ಟಿಗರ ಎದೆ ಝಲ್ ಎನಿಸಿದೆ. ಈ ದೃಶ್ಯ ಯಾವುದೇ ಸಿನಿಮಾದ ದೃಶ್ಯಕ್ಕಿಂತ ಕಡಿಮೆಯಿಲ್ಲ. ವ್ಯತ್ಯಾಸ ಅಂದ್ರೆ ಇದು ರಿಯಲ್ ಲೈಫ್ , ರಿಯಲ್ ಘಟನೆ ಒರಿಯಲ್ ಹೀರೋ ರೈಲ್ವೇ ಭದ್ರತಾ ಸಿಬ್ಬಂದಿಗೆ ಸಲಾಂ ಅನ್ನಬೇಕಾದ ವಿಚಾರ..
ಎದುರಿನಲ್ಲಿ ಶರವೇಗದಲ್ಲಿ ಬರುತ್ತಿದ್ದ ರೈಲಿನಿಂದ ಮಗುವಿನ ಪ್ರಾಣ ಉಳಿಸುವ ರೈಲ್ವೆ ನೌಕರನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಮುಂಬೈನ ವಂಗನಿ ರೈಲು ನಿಲ್ದಾಣದ ಎರಡನೇ ಪ್ಲಾಟ್ಫಾಲರ್ಮ್ನಲಲ್ಲಿ ಮಹಿಳೆ ಮತ್ತು ಮಗು ನಡೆದುಕೊಂಡು ಹೋಗುತ್ತಿದ್ದಾಗ ಮಗು ಆಯ ತಪ್ಪಿ ಹಳಿ ಮೇಲೆ ಬಿದ್ದಿದೆ. ಎದುರಿನಿಂದ ರೈಲು ಅತ್ಯಂತ ವೇಗವಾಗಿ ಮಗು ಬಿದ್ದ ಹಳಿ ಮೇಲೆಯೇ ಬರುತ್ತಿತ್ತು. ಮಗುವಿನ ಜೊತೆಗೆ ಇದ್ದ ಮಹಿಳೆ ಭಯಗೊಂಡು ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಭಯದಿಂದ ಮಗುವನ್ನು ಕಾಪಾಡಲು ನೋಡುತ್ತಿದ್ದರು.
Excellent work done by Central Railway Mumbai Division Mr Mayur Shelkhe (Pointsman) saved the life of a child who lost his balance while walking at plateform no. 2 at Vangani station. pic.twitter.com/91G0ClQtWG
— DRM Mumbai CR (@drmmumbaicr) April 19, 2021
ಮಗು ಹಳಿ ಮೇಲೆ ಬಿದ್ದಿರುವುದನ್ನು ಕಂಡು ರೈಲು ನಿಲ್ದಾಣದ ಕೆಲಸಗಾರ ಮಯೂರ್ ಶೆಲ್ಕೆ ಮಿಂಚಿನ ವೇಗದಲ್ಲಿ ಓಡಿ ಮಗುವನ್ನು ಎತ್ತಿ ಪ್ಲಾಟ್ಫಾರ್ಮ್ ಮೇಲೆ ಹಾಕಿದರು. ರೈಲು ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪ್ಲಾಟ್ಫಾರ್ಮ್ ಮೇಲೆ ಹಾರಿ ತಮ್ಮ ಪ್ರಾಣ ಹಾಗೂ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.
ಈ ಘಟನೆಯ ವಿಡಿಯೋವನ್ನು ಕೇಂದ್ರ ರೈಲ್ವೇ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಮಗುವಿನ ಜೀವ ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ನೌಕರನ ಧೈರ್ಯ ಮತ್ತು ಕರ್ತವ್ಯದ ಬಗ್ಗೆ ಅತ್ಯಂತ ಭಕ್ತಿಗೆ ನಮಸ್ಕರಿಸುತ್ತೇವೆ. ನೌಕರನಿಗೆ ಅಭಿನಂದನೆಗಳು ಎಂದು ಬರೆದುಕೊಂಡು ವೀಡಿಯೋವನ್ನು ಶೇರ್ ಮಾಡಿದೆ. ರೈಲ್ವೇ ಸಿಬ್ಬಂದಿ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಮಡಿಕೇರಿ | ಥಿಯೇಟರ್ ಗಳತ್ತ ಮುಖ ಮಾಡದ ಪ್ರೇಕ್ಷಕರು