ಭಾನುವಾರದಿಂದ ಚೆನ್ನೈಗೆ ಕೇರಳ ಮತ್ತು ಕರ್ನಾಟಕದ ರೈಲು ಸೇವೆಗಳು ಪುನರಾರಂಭ
ಚೆನ್ನೈ, ಸೆಪ್ಟೆಂಬರ್25: ಸುಮಾರು ಆರು ತಿಂಗಳ ಅಂತರದ ನಂತರ ಚೆನ್ನೈನಿಂದ ಕೇರಳ ಮತ್ತು ಕರ್ನಾಟಕದ ರೈಲು ಸೇವೆಗಳು ಪುನರಾರಂಭಗೊಳ್ಳಲಿವೆ.
ರೈಲ್ವೆ ಮಂಡಳಿ ದಕ್ಷಿಣ ರೈಲ್ವೆ ಚೆನ್ನೈನಿಂದ ತಿರುವನಂತಪುರಂ, ಮಂಗಳೂರು ಮತ್ತು ಮೈಸೂರುಗಳಿಗೆ ಪ್ರತಿದಿನ ಮೂರು ಕಾಯ್ದಿರಿಸಿದ ವಿಶೇಷ ರೈಲುಗಳನ್ನು ಪರಿಚಯಿಸುತ್ತಿದೆ.
ಚೆನ್ನೈ-ತಿರುವನಂತಪುರಂ ಮಾರ್ಗದಲ್ಲಿ ವಿಶೇಷ ರೈಲುಗಳ ಮೊದಲ ಸಂಚಾರ ಸೆಪ್ಟೆಂಬರ್ 27 ಭಾನುವಾರ ದಂದು ಮತ್ತು ಚೆನ್ನೈ-ಮಂಗಳೂರು ಮಾರ್ಗದಲ್ಲಿ ಸೆಪ್ಟೆಂಬರ್ 28 ಸೋಮವಾರದಂದು ಪ್ರಾರಂಭವಾಗಲಿದೆ. ಮೈಸೂರು ರೈಲುಗಳನ್ನು ಪುನರಾರಂಭಿಸುವ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಜಿಆರ್ ಚೆನ್ನೈ ಸೆಂಟ್ರಲ್-ತಿರುವನಂತಪುರಂ ಕಾಯ್ದಿರಿಸಿದ ವಿಶೇಷ ರೈಲು ಚೆನ್ನೈನಿಂದ ರಾತ್ರಿ 7.45 ಕ್ಕೆ ಹೊರಟು ಮರುದಿನ ಬೆಳಿಗ್ಗೆ 11.45 ಕ್ಕೆ ತಿರುವನಂತಪುರಂ ಸೆಂಟ್ರಲ್ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 3 ಗಂಟೆಗೆ ತಿರುವನಂತಪುರಂ ಸೆಂಟ್ರಲ್‌ನಲ್ಲಿ ರೈಲು ಹೊರಟು ಮರುದಿನ ಬೆಳಿಗ್ಗೆ 7.40 ಕ್ಕೆ ಚೆನ್ನೈ ತಲುಪಲಿದೆ.
ತಮ್ಮ ಆರೋಗ್ಯದ ಗುಟ್ಟನ್ನು ಬಹಿರಂಗ ಪಡಿಸಿದ ಪ್ರಧಾನಿ ಮೋದಿ
ಎಂಜಿಆರ್ ಚೆನ್ನೈ ಸೆಂಟ್ರಲ್-ಮಂಗಳೂರು ವಿಶೇಷ ರೈಲು ಚೆನ್ನೈನಿಂದ ರಾತ್ರಿ 8.10 ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.10 ಕ್ಕೆ ಮಂಗಳೂರು ತಲುಪಲಿದೆ. ಮಧ್ಯಾಹ್ನ 1.30 ಕ್ಕೆ ಮಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 5.35 ಕ್ಕೆ ಚೆನ್ನೈ ತಲುಪಲಿದೆ.
ದೃಢ ಪಡಿಸಿದ ಟಿಕೆಟ್ ಹೊಂದಿರುವವರಿಗೆ ಮಾತ್ರ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ. ರೈಲುಗಳು ಹೊರಡುವ 90 ನಿಮಿಷಗಳ ಮೊದಲು ಪ್ರಯಾಣಿಕರು ನಿಲ್ದಾಣಗಳನ್ನು ತಲುಪಬೇಕು ಎಂದು ರೈಲ್ವೆ ಹೇಳಿಕೆ ತಿಳಿಸಿದೆ








