ಪ್ರಯಾಣಿಕರೇ ಗಮನಿಸಿ, ನಾಳೆ ಬಸ್ ಸಂಚಾರ ಇರಲ್ಲ!
ಪ್ರಯಾಣಿಕರಿಗೆ ಸಾರಿಗೆ ನೌಕರರ ಸತ್ಯಗ್ರಹದ ಬಿಸಿ
ಫೆಬ್ರವರಿ 20ರಂದು ಸಾರಿಗೆ ಸಿಬ್ಬಂದಿಗಳ ಸತ್ಯಾಗ್ರಹ
ಬೆಂಗಳೂರು : ಫೆಬ್ರವರಿ 20ರಂದು ಸಾರಿಗೆ ಸಿಬ್ಬಂದಿಗಳು ಸತ್ಯಾಗ್ರಹ ನಡೆಸುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬಿಎಂಟಿಸಿ ಸಿಬ್ಬಂದಿಗಳು ಕೂಡ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಶಿವರಾತ್ರಿ ಹಬ್ಬಕ್ಕೆ ತೆರಳುವ ಜನರಿಗೆ ನಾಳೆ ನಾಡಿದ್ದು ಬಸ್ ಸಂಚಾರದ ವ್ಯತ್ಯಾಸ ಕಾಡಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಫೆಬ್ರವರಿ 20ರಂದು ಸಾರಿಗೆ ಸಿಬ್ಬಂದಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.ಈ ಹಿನ್ನಲೆಯಲ್ಲಿ ನಾಳೆಯೇ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಸಿಬ್ಬಂದಿಗಳು, ಕುಟುಂಬಸ್ಥರು ನಗರಕ್ಕೆ ಆಗಮಿಸಿ, ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೀಗಾಗಿ ಫೆಬ್ರವರಿ 21ರ ಶಿವರಾತ್ರಿಗೆ ತೆರಳುವ ಬಸ್ ಪ್ರಯಾಣಿಕರಿಗೆ ಸಾರಿಗೆ ನೌಕರರ ಸತ್ಯಗ್ರಹದ ಬಿಸಿ ತಟ್ಟಲಿದೆ. ಸರಿಯಾದ ಸಮಯಕ್ಕೆ ಬಸ್ ಸಿಗದೇ ಶಿವರಾತ್ರಿಯ ಹಬ್ಬಕ್ಕೆ ತೆರಳಲು ಸಮಸ್ಯೆ ಎದುರಾಗಬಹುದು.