ನವದೆಹಲಿ: ಕೇರಳದ ತಿರುವನಂತಪುರದ ಇತಿಹಾಸ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಮಲ್ಹೋತ್ರಾ, ಯು.ಯು ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ 300 ಪುಟಗಳ ಸುದಿರ್ಘ ತೀರ್ಪು ಪ್ರಕಟಿಸಿದೆ. ಇನ್ನು ಮುಂದೆ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ನೋಡಿಕೊಳ್ಳುತ್ತಿದ್ದ ತಿರುವಾಂಕೂರು ರಾಜ ಮನೆತನಕ್ಕೆ ದೇವಾಲಯ ಸೇರಿದೆ ಎಂದು ಹೇಳುವ ಮೂಲಕ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾ ಮಾಡಿದೆ.
1991ರಲ್ಲಿ ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ ಮೃತಪಟ್ಟಿದ್ದರು. ಅಂದಿನಿಂದ ದೇವಸ್ಥಾನದ ಆಡಳಿತ ಮಂಡಳಿ ಹಕ್ಕು ರಾಜಮನೆತನಿಂದ ಕೊನೆಗೊಂಡಿದೆ ಎಂದು ಕೇರಳ ಹೈಕೋರ್ಟ್ ಆದೇಶ ನೀಡಿತ್ತು.
ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜಮನೆತನದವರು ಹಾಗೂ ಇತರರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಹಕ್ಕಿಗಾಗಿ ರಾಜಮನೆತನ ನಡೆಸಿದ್ದ 9 ವರ್ಷಗಳ ಕಾನೂನು ಹೋರಾಟಕ್ಕೆ ಫಲ ಸಿಕ್ಕಿದೆ.

ತಮ್ಮ ನಂತರ ಸಾವಿನ ಮಂತರ ದೇವಸ್ಥಾನದ ಆಡಳಿತದ ಹಕ್ಕು ಕೊನೆಗೊಳ್ಳುತ್ತದೆ ಎಂದು 1991ರಲ್ಲಿ ಮೃತಪಟ್ಟ ರಾಜಮನೆತನದ ವ್ಯಕ್ತಿ ಕೇರಳ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದರು. ಅವರು ಮೃತಪಟ್ಟ ನಂತರ ಆಡಳಿತ ಮಂಡಳಿ ಸರ್ಕಾರಕ್ಕೆ ಸೇರಿದ್ದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು.
ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಆಡಳಿತ ಸಮಿತಿ ದೇವಸ್ಥಾನದ ಆಡಳಿತದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಸಮಿತಿ ರಚನೆಯಾಗುವರೆಗೆ ಹಾಲಿ ಇರುವ ಸಮಿತಿ ಮುಂದುವರೆಯಲಿದೆ. ಇನ್ನು ಮುಂದೆ ರಾಜಮನೆತನದವರು ದೇವಸ್ಥಾನದ ಆಸ್ತಿ-ಪಾಸ್ತಿ ಹಾಗೂ ಆಡಳಿತ ಮಂಡಳಿಯ ಹಕ್ಕು ಪಡೆಯುವರು. ಅವರ ಕುಟುಂಬದವರು ಕೂಡ ಟ್ರಸ್ಟ್‍ನ ಸದಸ್ಯರಾಗಬಹುದು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ತೀರ್ಪಿಗೆ ರಾಜಮನೆತನ ಹರ್ಷ
ಸುಪ್ರೀಂಕೋರ್ಟ್‍ನ ಈ ಮಹತ್ವದ ತೀರ್ಪನ್ನು ಸ್ವಾತಗತಿಸಿರುವ ರಾಜಮನೆತನದ ಸದಸ್ಯ ಆದಿತ್ಯ ವರ್ಮ, ಪದ್ಮನಾಭಸ್ವಾಮಿ ಹಾಗೂ ರಾಜಮನೆತದ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ದೇವಸ್ಥಾನದ ಸಂಪತ್ತು ದೇವರಿಗೇ ಸೇರಿದ್ದು, ರಾಜಮನೆತನದಲ್ಲ ಎಂದಿದ್ದಾರೆ.







