ಕಾಸರಗೋಡು, ಜುಲೈ 7: ಕೇರಳಿಗರು ಉದ್ಯೋಗ ನಿಮಿತ್ತ ಹಾಗೂ ಇನ್ನಿತರ ಕಾರಣದಿಂದ ಪ್ರತಿನಿತ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೇರಿದೆ. ಒಮ್ಮೆ ಕರ್ನಾಟಕಕ್ಕೆ ಪ್ರಯಾಣಿಸಿದರೆ ಮುಂದಿನ 28 ದಿನ ಅಲ್ಲೇ ಇರಬೇಕು ಎಂಬ ನಿರ್ಣಯವನ್ನು ಕೇರಳದಲ್ಲಿ ಕೈಗೊಳ್ಳಲಾಗಿದೆ.
ಮಂಗಳೂರು ಪ್ರವೇಶಕ್ಕೆ ಕೇರಳದಿಂದ ಕೊಡುತ್ತಿದ್ದ ನಿತ್ಯದ ಪಾಸ್ ಅನ್ನು ರದ್ದುಗೊಳಿಸಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಕೇರಳದ ಕಾಸರಗೋಡು, ಮಂಜೇಶ್ವರ ಭಾಗದಿಂದ ಮಂಗಳೂರಿಗೆ ಬರ್ತಿದ್ದ ಜನರು
ಉದ್ಯೋಗ ಮತ್ತು ವ್ಯಾಪಾರದ ಹಿನ್ನೆಲೆಯಲ್ಲಿ ಕೇರಳದ ಕಾಸರಗೋಡು, ಮಂಜೇಶ್ವರ ಭಾಗದಿಂದ ಜನರು ಮಂಗಳೂರಿಗೆ ನಿತ್ಯದ ಪಾಸ್ ಬಳಸಿ ಪ್ರಯಾಣ ಮಾಡುತ್ತಿದ್ದರು. ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ ಕೇರಳ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಈ ಆದೇಶ ಅನ್ವಯವಾಗಲಿದ್ದು, ಇನ್ನು ಮುಂದೆ ತಿಂಗಳಿಗೊಮ್ಮೆ ಮಾತ್ರ ಮಂಗಳೂರಿಗೆ ಪ್ರಯಾಣಿಸಬಹುದಾಗಿದೆ. ಒಮ್ಮೆ ಮಂಗಳೂರಿಗೆ ಪ್ರಯಾಣಿಸಿದರೆ, ಅಲ್ಲೇ ಉಳಿದುಕೊಂಡು 28 ದಿನಕ್ಕೊಮ್ಮೆ ಕೇರಳಕ್ಕೆ ಬಂದು ಹೋಗಬಹುದು.