ಕನ್ನಡದ ರಾಜರತ್ನ `ಪುನೀತ್ ನಮನ’ ಕಾರ್ಯಕ್ರಮ ಶುರು puneeth-rajkumar saaksha tv
ಹೃದಯಸ್ತಂಭನದಿಂದ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದಿಂದ ನಮನ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸದ್ಯ ಗಾಯಿತ್ರಿ ವಿಹಾರ ಅಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.
ದೀಪಾಂಜಲಿ, ಪುಷ್ಪಾಂಜಲಿ ಮತ್ತು ಗೀತಾಂಜಲಿ ಎಂಬ ಮೂರು ಕಾನ್ಸೆಪ್ಟ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಪಾಸ್ ಇಲ್ಲದವರಿಗೆ ಒಳಗಡೆ ಹೋಗಲು ಅವಕಾಶ ಇಲ್ಲಾ ಜೊತೆಗೆ ಸಾರ್ವಜನಿಕರಿಗೋ ಪ್ರವೇಶಕ್ಕೆ ಅವಕಾಶವಿಲ್ಲ.
ಸಂಗೀತ ನಿರ್ದೇಶಕ ಗುರು ಕಿರಣ್ ತಂಡದಿಂದ ಪುನೀತ್ ಸಿನಿಮಾಗಳ ಹಾಡುಗಳನ್ನ ಹಾಡಿದ್ದಾರೆ.
ಸದ್ಯ ನುಡಿ ನಮನ ಕಾರ್ಯಕ್ರಮ ಆರಂಭವಾಗಿದ್ದು, ಕಾರ್ಯಕ್ರಮದಲ್ಲಿ ಸಿ ಎಂ ಬಸವರಾಜ್ ಬೊಮ್ಮಾಯಿ, ಸಚಿವ ಸಂಪುಟದ ಸಚಿವರು, ರಾಜಕೀಯ ಗಣ್ಯರು, ಕನ್ನಡ, ತೆಲುಗು, ತಮಿಳು ಹಾಗು ಮಲೆಯಾಳಂ ಚಿತ್ರರಂಗದ ತಾರೆಯರು ಭಾಗವಹಿಸಿದ್ದಾರೆ.









