ಭಾರತದ ಅಂಡರ್-19 ಮಹಿಳಾ ವಿಶ್ವಕಪ್ ಆಟಗಾರ್ತಿ ತ್ರಿಶಾ ತಮ್ಮ ಶತಕವನ್ನು ತಮ್ಮ ಅಜ್ಜ-ಅಜ್ಜಿಗೆ ಅರ್ಪಿಸಿದ್ದಾರೆ. ತಮ್ಮ ಮೊದಲ ಶತಕವನ್ನು ಗಳಿಸುವುದು ತುಂಬಾ ವಿಶೇಷ ಎಂದು ತಂದೆ ಹೇಳಿದ್ದರು ಎಂದು ತ್ರಿಶಾ ಹೇಳಿದ್ದಾರೆ. 20 ಓವರ್ಗಳ ಕಾಲ ಬ್ಯಾಟಿಂಗ್ ಮಾಡುವ ದೃಢನಿಶ್ಚಯದಿಂದ ಇನಿಂಗ್ಸ್ ಆಡಿದ್ದೇನೆ ಎಂದು ವಿವರಿಸಿದ ತ್ರಿಶಾ, ಕಳೆದ ವಿಶ್ವಕಪ್ನಲ್ಲಿ ಶತಕ ಗಳಿಸಲು ಯೋಜಿಸಿದ್ದೆ ಆದರೆ ಈಗ ಅದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರ್ತಿ ಮಿಥಾಲಿ ರಾಜ್ ನನ್ನ ಆದರ್ಶ ಎಂದು ತ್ರಿಶಾ ತಿಳಿಸಿದ್ದಾರೆ.
ಇಂದು ದೆಹಲಿಯಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ – ಫೆ.20ರಂದು ಪ್ರಮಾಣವಚನ ಸಮಾರಂಭ
ರಾಷ್ಟ್ರ ರಾಜಧಾನಿ ನವದೆಹಲಿ ಹೊಸ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಇಂದು (ಫೆಬ್ರವರಿ 19) ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿಯ ಹೆಸರು...