ರಾಜಕೀಯ ಅಖಾಡಕ್ಕೆ ಬರಲು ರೆಡಿಯಾದ ತ್ರಿಶಾ ಇಳಯ ದಳಪತಿ ಎಂದೇ ಪ್ರಖ್ಯಾತವಾದ ವಿಜಯ್ ಕೂಡ ಈ ಸಾಲಿನಲ್ಲಿ ನಿಂತವರೇ. ಈಗಾಗಲೇ ತಮ್ಮ ಪಕ್ಷದ ಧ್ವಜ ಮತ್ತು ಹೆಸರನ್ನು ಬಹಿರಂಗ ಮಾಡಿರುವ ವಿಜಯ್ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ನಿಗಾ ವಹಿಸಿದ್ದಾರೆ. ರಾಜಕೀಯ ರಣರಂಗದಲ್ಲೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ನಡುವೆ ಈಗ ತಮಿಳುನಾಡು ರಾಜಕೀಯ ರಂಗಸ್ಥಳದ ಲ್ಲಿ ಸಂಚಲನ ಮೂಡಿಸುವಂತಹ ಸುದ್ದಿಯೊಂದು ಹೊರ ಬಿದ್ದಿದೆ. ಇಳಯ ದಳಪತಿ ವಿಜಯ್ ಅವರ ಜೊತೆ ಸಂಬಂಧಗಳಿಂದ ಆಗಾಗ ಚರ್ಚೆಗೀಡಾಗುವ ತ್ರಿಶಾ ರಾಜಕೀಯಕ್ಕೆ ರಂಗಕ್ಕೆ ಧುಮುಕಲಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್ ಅನೇಕರ ನಿದ್ದೆಯನ್ನು ಕೆಡಿಸಿದೆ.
ಕೆಲವೊಂದು ವರದಿಯ ಪ್ರಕಾರ ನಟಿ ತ್ರಿಶಾ ಕೃಷ್ಣನ್, ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಜಕೀಯಕ್ಕೆ ಬರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಯಾಗುವುದೇ ನನ್ನ ಜೀವನದ ಏಕೈಕ ಉದ್ದೇಶ ಎಂದು ತ್ರಿಶಾ ಹೇಳಿಕೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿ ಜನಸೇವೆ ಮಾಡಬೇಕೆನ್ನುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳು ದಳಪತಿ ವಿಜಯ್ ಹಿಂದೆ ಹಿಂದೆಯೇ ರಾಜಕೀಯಕ್ಕೆ ಬರಲು ರೆಡಿಯಾದ ತ್ರಿಶಾ! ಎನ್ನುತ್ತಿದ್ದಾರೆ.








