ಮತ್ತೊಮ್ಮೆ ಅಪ್ಪುಗೆ ಜೊತೆಯಾದ ‘ಪವರ್’ ಸುಂದರಿ – ‘ದ್ವಿತ್ವ’ದ ‘ಲೀಡಿಂಗ್ ಲೇಡಿ’ ತ್ರಿಶಾ..!
2014 ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಪವರ್’ ಸಿನಿಮಾದಲ್ಲಿ ಅಪ್ಪುಗೆ ನಾಯಕಿಯಾಗಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ತ್ರಿಸಾ ಇದೀಗ ಮತ್ತೊಮ್ಮೆ ಅಪ್ಪುಗೆ ನಾಯಕಿಯಾಗ್ತಿದ್ದಾರೆ.. ಹೊಂಬಾಳಿ ಫಿಲಮ್ಸ್ ಬ್ಯಾನರ್ ನಟಿ ಮೂಡಿಬರುತ್ತಿರುವ ದ್ವಿತ್ವ ಸಿನಿಮಾದ ಲೀಡಿಂಗ್ ಲೇಡಿಯನ್ನ ನಿರ್ಮಾಪಕ ವಿಜಯ್ ಕಕಿರಂಗದೂರ್ ಅವರು ಪರಿಚಯ ಮಾಡಿಕೊಟ್ಟಿದ್ದಾರೆ..
ಹೊಂಬಾಳೆ ಫಿಲಮ್ಸ್ ಟ್ವಿಟ್ಟರ್ ನಲ್ಲಿ ಸಿನಿಮಾದಲ್ಲಿ ತ್ರಿಶಾ ಲುಕ್ ಅನಾವರಣಗೊಳಿಸಸುವ ಮೂಲಕ ನಾಯಕಿಯ ಪರಿಚಯ ಮಾಡಿಕೊಟ್ಟಿದೆ ಸಿನಿಮಾತಂಡ. ಅಂದ್ಹಾಗೆ ಇದು ತ್ರಿಶಾ ಅವರ ಕನ್ನಡದ 2ನೇ ಸಿನಿಮಾ. ಕನ್ನಡದಲ್ಲಿ ಮೊದಲ ಸಿನಿಮಾ ಕೂಡ ಅಪ್ಪು ಅವರ ಜೊತೆಗೆ ಆಗಿತ್ತು.. ಇದೀಗ 2ನೇ ಸಿನಿಮಾ ಕೂಡ ಪುನೀತ್ ಅವರ ಜೊತೆಯೇ ಆಗಿರೋದು ವಿಶೇಷ. ತ್ರಿಸಾ ಬಹುಭಾಷಾ ನಟಿಯಾಗಿದ್ದು, ಬೇಡಿಕೆಯ ನಟಿ ಕೂಡ ಆಗಿದ್ದಾರೆ.. ಸೈಕಲಾಜಿಕಲ್ ಕಥಾಹಂದರ ಹೊಂದಿದ್ದ ಲೂಸಿಯಾ ಚಿತ್ರಕ್ಕೆ ನರ‍್ದೇಶನ ಮಾಡುವ ಮೂಲಕ ಪವನ್ ಕುಮಾರ್ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ದ್ವಿತ್ವ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಶರ‍್ಷಿಕೆ ಜೊತೆಗೆ ಡಿಫರೆಂಟ್ ಆದಂತಹ ಪೋಸ್ಟರ್ ಕೂಡ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಈಗ ಈ ಚಿತ್ರಕ್ಕೆ ತ್ರಿಷಾ ಕೃಷ್ಣನ್ ನಾಯಕಿಯಾಗಿದ್ದಾರೆ.
ಆಕ್ಷನ್ ಪ್ರಿನ್ಸ್ `ಧ್ರುವ ಸರ್ಜಾ’ಗೆ `ಜೋಗಿ ಪ್ರೇಮ್’ ಆಕ್ಷನ್ ಕಟ್








