ಪತ್ನಿಯ ಮೈಬಣ್ಣ ಕಪ್ಪು ಎಂದು ತಲಾಖ್ ನೀಡಿದ ಪತಿ
ಉತ್ತರಪ್ರದೇಶ : ಪತ್ನಿಯ ಮೈಬಣ್ಣ ಕಪ್ಪೆಂದು ಪತಿಯೊಬ್ಬ ಮೂರು ಬಾರಿ ತಲಾಖ್ ಎಂದು – ಹೇಳುವ ಮೂಲಕ ತಲಾಖ್ ನೀಡಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಪತಿ ವಿರುದ್ಧ ಮಹಿಳೆಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೇಶಾದ್ಯಂತ ತ್ರಿವಳಿ ತಲಾಖ್ ನಿಷೇಧ ಮಾಡಲಾಗಿದೆ.. ಇದು ಈಗ ಕಾನೂನು ಬಾಹಿರವಾಗಿದ್ರು ಕೆಲವೆಡೆ ಇನ್ನೂವರೆಗೂ ಇಂತಹ ಪ್ರಕರಣಗಳು ದಾಖಲಾಗ್ತಿರುವುದು ವಿಪರ್ಯಾಸ.. ಈ ವ್ಯಕ್ತಿ ಪತ್ನಿ ಮೈಬಣ್ಣ ಕಪ್ಪು ಎಂದು ತಲಾಖ್ ನೀಡಿದ್ದಾನೆ.. ಘಟನೆ ಸಂಬಂಧ ಮಹಿಳೆ ಗಂಡ ಸೇರಿದಂತೆ 8 ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಹಾಗೂ ಮುಸ್ಲಿಂ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆ ಅಡಿ ದೂರು ದಾಖಲು ಮಾಡಿದ್ದಾರೆ..
ಕಳೆದ 9 ತಿಂಗಳ ಹಿಂದೆ ಆಲಂ ಎಂಬ ವ್ಯಕ್ತಿ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದಳು ಎಂದು ವರದಿಯಾಗಿದೆ. ಮಹಿಳೆಯ ಮೈಬಣ್ಣ ಹಾಗೂ ವರದಕ್ಷಿಣೆ ವಿಚಾರವಾಗಿ ಪತಿ ಮನೆಯವರು ಅಶ್ಲೀಲ ಪದಗಳ ಬಳಸಿ ಮಹಿಳೆಗೆ ಕಿರುಕುಳ ನೀಡಿದ್ಧಾರೆ.. ಜೊತೆಗೆ ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಅಲ್ಲದೇ ಮದುವೆ ಸಮಯದಲ್ಲಿ ಯುವತಿಯ ತಂದೆ ಗಂಡನ ಮನೆಯವರಿಗೆ 10 ಗುಂಟೆ ಜಮೀನು ನೀಡಿದ್ದರು. ಇದರ ಹೊರತಾಗಿ ಕೂಡ ಕಾರು ಖರೀದಿ ಮಾಡಲು 10 ಲಕ್ಷ ರೂ. ತೆಗೆದುಕೊಂಡು ಬರುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಣೆ ಮಾಡಿದಾಗ ಮಹಿಳೆ ಮೇಲೆ ಗಂಡನ ಮನೆಯವರು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪವಿದೆ.. ಜೊತೆಗೆ ತಲಾಖ್ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.