ಬಿಯರ್ ದಾನ ಮಾಡಿ ಎಂದಿ ಸೋನು ಸೂದ್ ಗೆ ಬೇಡಿಕೆ – ಫನ್ನಿ ಉತ್ತರ ಕೊಟ್ಟ ಸೂದ್
ನಟ ಸೋನು ಸೂದ್ ಅವರು ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಸಖತ್ ಫೇಮಸ್ ಆಗಿದ್ದಾರೆ. ಅವರನ್ನ ರಿಯಲ್ ಹಿರೋಗಳಂತೆ ನೊಡಲಾಗುತ್ತದೆ. ಕರೋನಾ ಲಾಕ್ಡೌನ್ ಅವಧಿಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಅವರವರ ಮನೆಗೆ ಸುರಕ್ಷಿತವಾಗಿ ತಲುಪಿಸಲು ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಸೋನೂ ಸೂದ್ ಅವರು ರಿಯಲ್ ಹೀರೋ ಎನಿಸಿಕೊಂಡಿದ್ದರು.
ಟ್ವೀಟರ್ ಮೂಲಕ ಸೋನು ಸೂದ್ ಅವರನ್ನ ಅಭಿಮಾನಿಗಳು ಸಹಾಯವನ್ನ ಕೇಳುತ್ತಿರುತ್ತಾರೆ , ಈ ಸಂದರ್ಭದಲ್ಲಿ ಕೆಲವರು ತಮಾಶೆಯಾಗಿ ಕಾಲೆಳೆಯುತ್ತಾರೆ. ‘ಬಿಯರ್ ದಾನ ಮಾಡಿ’ ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸೋನು ಸೂದ್ ಅವರು ಜಾಣತನದಿಂದ ಉತ್ತರ ನೀಡಿದ್ದಾರೆ.
ಸೋನು ಸೂದ್ ಅವರಿಗೆ ಸಂಬಂಧಿಸಿದಂತೆ ಅನೇಕ ಮೀಮ್ಸ್ ಹರಿದಾಡುತ್ತಿವೆ. ಆ ಪೈಕಿ ಒಂದು ಮೀಮ್ ಬಹಳ ಗಮನ ಸೆಳೆದಿದೆ. ‘ಚಳಿಗಾಲದಲ್ಲಿ ಕಂಬಳಿ ವಿತರಿಸುವ ನೀವು, ಈ ಬೇಸಿಗೆಯಲ್ಲಿ ನಮಗೆ ತಂಪಾದ ಬಿಯರ್ ದಾನ ಮಾಡುವುದಿಲ್ಲವೇ’ ಎಂದು ಬರೆದಿರುವ ಮೀಮ್ ಅನ್ನು ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
बियर के साथ भुजिया चलेगा ? 🤣 https://t.co/SX3rEtoYgL
— sonu sood (@SonuSood) April 6, 2022
ಅದನ್ನು ಕಂಡು ಸೋನು ಸೂದ್ ಉತ್ತರ ನೀಡಿದ್ದಾರೆ. ‘ಬೀಯರ್ ಜೊತೆ ತಿನ್ನಲು ಖಾರ ನೀಡಿದರೆ ನಡೆಯುತ್ತಾ’ ಎಂದು ಅವರು ಫನ್ನಿಯಾಗಿ ಪ್ರಶ್ನಿಸಿದ್ದಾರೆ. ‘ಖಾರ ಪಡೆಯಲು ಬಿಯರ್ ಕುಡಿಯುವುದು ಅನಿವಾರ್ಯವೇ?’ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಪ್ರಸ್ತುತ ಸೋನು ಸೂದ್ ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಎಂಟಿವಿ ರೋಡೀಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದಾರೆ. ಏ.8ರಿಂದ ಈ ಶೋ ಪ್ರಸಾರ ಆಗಲಿದೆ. ತೆಲುಗಿನ ‘ಆಚಾರ್ಯ’ ಸಿನಿಮಾದ ಜೊತೆ ಬಾಲಿವುಡ್ ನ ‘ಪೃಥ್ವಿರಾಜ್’, ‘ಫತೆ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.