ಚೀನಾದಿಂದ ಮಹಾಮಾರಿ ಕೊರೊನಾ ಇಡೀ ವಿಶ್ವಕ್ಕೆ ವ್ಯಾಪಿಸಿದ್ದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಇದೇ ವಿಚಾರವಾಗಿಯೇ ಅಮೆರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಆಗಾಗ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ ಡ್ರ್ಯಾಗನ್ ವಿರುದ್ಧ ಹರಿಹಾಯ್ದಿರುವ ಟ್ರಂಪ್ “ಕೊರೊನಾ ಚೀನಾದಿಂದ ಇಡೀ ವಿಶ್ವಕ್ಕೆ ವ್ಯಾಪಿಸಿದೆ. ಈ ಸೋಂಕು ಇಡೀ ಜಗತ್ತಿಗೆ ಹರಡದಂತೆ ತಡೆಯುವ ಕ್ರಮ ಮೊದಲೇ ತೆಗೆದುಕೊಳ್ಳಬಹುದಾಗಿತ್ತು. ಆ ಅವಕಾಶ ಚೀನಾಗೆ ಇತ್ತು. ಆದರೂ ಅವರು ಅದ್ಯಾವುದನ್ನೂ ಮಾಡದೇ ಉದ್ದೇಶಪೂರ್ವಕವಾಗಿಯೇ ಇಡೀ ವಿಶ್ವಕ್ಕೆ ಸೋಂಕು ಹರಡಲಿ ಎಂದು ಬಿಟ್ಟರು ಎಂದು ಆರೋಪಿಸುವ ಮೂಲಕ ಟ್ರಂಪ್ ತೀಕ್ಷ್ಣವಾಗಿ ಚೀನಾ ವಿರುದ್ಧ ಕಿಡಿಕಾರಿದ್ದಾರೆ. ಇದಷ್ಟೇ ಅಲ್ಲದೆ ಕೊರೊನಾ ಚೀನಾದಿಂದಲೇ ಹರಡಿರುವ ಬಗ್ಗೆ ನಮ್ಮ ಬಳಿ ಸಾಕಷ್ಟು ಆಧಾರಗಳಿವೆ. ಚೈನಾ ಸೋಂಕನ್ನು ಇಡೀ ವಿಶ್ವಕ್ಕೆ ಹಬ್ಬಿಸುತ್ತಿದೆ. ಆದರೆ ಅಮೆರಿಕಾ ಇತರೇ ದೇಶಗಳನ್ನು ಸೋಂಕಿನಿಂದ ರಕ್ಷಿಸುತ್ತಿದೆ. ಹಲವು ದೇಶಗಳಿಗೆ ಅಮೆರಿಕಾದಿಂದ ವೆಂಟಿಲೇಟರ್ ಸರಬರಾಜು ಮಾಡುವ ಮೂಲಕ ನೆರವಾಗಿದ್ದೇವೆ ಎಂದಿದ್ದು, ಚೀನಾದಿಂದಲೇ ಮಹಾಮಾರಿ ಇಡೀ ವಿಶ್ವವ್ಯಾಪಿ ಹರಡಿದ್ದು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ
ಏಪ್ರಿಲ್ 1 ರಿಂದ ದೇಶಾದ್ಯಂತ ಆದಾಯ ತೆರಿಗೆ ಇಲಾಖೆಯ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದೆ. 64 ವರ್ಷಗಳ ಹಳೆಯ ಕಾನೂನಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು ಕಪ್ಪು ಹಣದ...








