ಮೈಕ್ರೋಸಾಫ್ಟ್ ಜತೆ ಮಾತುಕತೆ ನಡೆಸಲು ಟಿಕ್ ಟಾಕ್ ಗೆ 45 ದಿನದ ಕಾಲಾವಕಾಶ ನೀಡಿದ ಟ್ರಂಪ್
ವಾಷಿಂಗ್ಟನ್, ಅಗಸ್ಟ್ 6: ಜನಪ್ರಿಯ ಆ್ಯಪ್ ಟಿಕ್ ಟಾಕ್ ಅನ್ನು ಮೈಕ್ರೋಸಾಫ್ಟ್ ಕಾರ್ಪ್ ಗೆ ಮಾರಾಟ ಮಾಡುವ ಸಂಬಂಧ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಬೈಟ್ ಡ್ಯಾನ್ ಗೆ 45 ದಿನಗಳ ಕಾಲಾವಕಾಶ ನೀಡಿದೆ.
ಈ 45 ದಿನಗಳ ಕಾಲಾವಕಾಶದ ಅವಧಿಯಲ್ಲಿ ಎರಡೂ ಕಂಪನಿಗಳೂ ಮಾತುಕತೆ ನಡೆಸದೆ ಹೋದಲ್ಲಿ ಚೀನಾ ಅಪ್ಲಿಕೇಶನ್ ಅನ್ನು ಅಮೆರಿಕದಲ್ಲಿ ನಿಷೇಧಿಸಲಾಗುವುದು ಎಂದು ಟ್ರಂಪ್ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಖಾಸಗಿ ಮಾಹಿತಿಗಳ ನಿರ್ವಹಣೆ ವಿಚಾರದಲ್ಲಿ ಚೀನಾ ಒಡೆತನದ ಟಿಕ್ ಟಾಕ್ ಆ್ಯಪ್ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಯುನೈಟೆಡ್ ಸ್ಟೆಟ್ಸ್ ಆಫ್ ಅಮೇರಿಕದಾದ್ಯಂತ ಟಿಕ್ ಟಕ್ ನಿಷೇಧಿಸುವುದಾಗಿ ಟ್ರಂಪ್ ಹೇಳಿದ್ದಾರೆ.
ಸೆಪ್ಟೆಂಬರ್ 15ರೊಳಗೆ ಮೈಕ್ರೋಸಾಫ್ಟ್ ಜೊತೆಗೆ ಟಿಕ್ ಟಾಕ್ ಒಪ್ಪಂದ ಮಾಡಿಕೊಳ್ಳದೆ ಹೋದಲ್ಲಿ, ಚೀನಾದ ಟಿಕ್ ಟಾಕ್ ಶಾರ್ಟ್ ವಿಡಿಯೋ ಆಪ್ ಗೆ ಅಮೇರಿಕಾದಿಂದ ಗೇಟ್ ಪಾಸ್ ನೀಡಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜೊತೆಗೆ ಚೀನಾದ ಆ್ಯಪ್ ಟಿಕ್ ಟಾಕ್ ಅನ್ನು ಖರೀದಿಸಿದರೆ ಬರುವ ಲಾಭದಲ್ಲಿ ಒಂದು ಭಾಗವನ್ನು ಸರ್ಕಾರಕ್ಕೆ ನೀಡಬೇಕು ಎಂದು ಡೊನಾಲ್ಡ್ ಟ್ರಂಪ್, ಮೈಕ್ರೋಸಾಫ್ಟ್ ಸಿಇಒ ಭಾರತೀಯ ಮೂಲದ ಸತ್ಯ ನಾಡೆಲ್ಲಾ ಅವರಿಗೆ ಫೋನ್ ಸಂಭಾಷಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.