ನವದೆಹಲಿ: ಅಮೆರಿಕದಲ್ಲಿ ನೆಲೆಸಿರುವ ವಿದೇಶಿಯರ ಎಚ್1ಬಿ ವೀಸಾ ರದ್ದು ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದು, ಸಾವಿರಾರು ಭಾರತೀಯರಿಗೆ ಬಾರೀ ಹೊಡೆತ ಬೀಳಲಿದೆ. ಅಮೆರಿಕದಲ್ಲಿ ಸಾವಿರಾರು ಸಾಫ್ಟ್‍ವೇರ್ ಕಂಪನಿಗಳಲ್ಲಿ ಕೆಲಸ ಮಾಡಲು ಎಚ್1ಬಿ ವೀವಾದೊಂದಿಗೆ ತೆರಳಿರುವ ಭಾರತೀಯರು, ಕೆಲಸ ಕಳೆದುಕೊಂಡು ಭಾರತಕ್ಕೆ ವಾಪಸ್ ಆಗುವ ಅಪಾಯ ಎದುರಾಗಿದೆ.
ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸದಿಂದಾಗಿ ಅಮೆರಿಕದಲ್ಲಿ ಲಾಕ್‍ಡೌನ್ ಮಾಡಲಾಗಿತ್ತು. ಲಾಕ್‍ಡೌನ್ ಪರಿಣಾಮ ಸಾವಿರಾರು ಕಂಪನಿಗಳು ಬಾಗಿಲು ಮುಚ್ಚಿವೆ. ಹೀಗಾಗಿ ಲಕ್ಷಾಂತರ ಅಮೆರಿಕನ್ನರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರಿಗೆ ಉದ್ಯೋಗವಕಾಶನ್ನು ನೀಡಿ ನಿರುದ್ಯೋಗ ತಡೆಯಲು ಎಚ್1ಬಿ ವೀಸಾ ರದ್ದು ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ.
ಎಚ್1ಬಿ ವೀಸಾದಲ್ಲಿ ಕೆಲಸ ಮಾಡುತ್ತಿರುವವ ವಿದೇಶಿಯರ ಪೈಕಿ ಭಾರತೀಯರೇ ಅತಿ ಹೆಚ್ಚು. ಅದರಲ್ಲೂ ಭಾರತದಿಂದ ಎಚ್1ಬಿ ವೀಸಾದ ಮೇಲೆ ಅಮೆರಿಕದಕ್ಕೆ ಹೋಗಿರುವ ಸಾಫ್ಟ್‍ವೇರ್ ಇಂಜಿನಿಯರ್‍ಗಳಿಗೆ ಟ್ರಂಪ್ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಲಾಕ್‍ಡೌನ್‍ನಿಂದಾಗಿ ಎಚ್1ಬಿ ವೀಸಾದ ಮೇಲೆ ಅಮೆರಿಕಕ್ಕೆ ತೆರಳಿರುವ ಭಾರತ ಮೂಲದ ಸಾಫ್ಟ್‍ವೇರ್ ಎಂಜಿನಿಯರ್‍ಗಳು ಕೆಲಸ ಕಳೆದುಕೊಂಡು ಭವಿಷ್ಯದ ಚಿಂತೆಯಲ್ಲಿದ್ದಾರೆ. ಅವರ ವೀಸಾವರನ್ನು ರದ್ದು ಮಾಡಿದರೆ ಬೀದಿಗೆ ಬೀಳುವ ಅಪಾಯವಿದೆ.
ಎಚ್1ಬಿ ವೀಸಾ ಅವಧಿ ವಿಸ್ತರಣೆ
ಎಚ್1ಬಿ ವೀಸಾದಡಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶಿಯರ ವೀಸಾ ನವೀಕರಣ ಅವಧಿಯಲ್ಲಿ ಅಕ್ಟೋಬರ್ 1ರವರೆಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಎಚ್1ಬಿ ವೀಸಾದಡಿ ಅಮೆರಿಕಕ್ಕೆ ತೆರಳಿರುವ ಭಾರತೀಯರು, ಸದ್ಯಕ್ಕೆ ನಿರಾಳರಾಗಿದ್ದಾರೆ. ಇದೇ ವೇಳೆ, ಎಚ್1ಬಿ ವೀಸಾ ಬದಲು ಕಡಿಮೆ ಅವಧಿಯ ಎಚ್2ಬಿ ವೀಸಾಕ್ಕೆ ಅರ್ಜಿ ಸಲ್ಲಿಸುವಂತೆ ಅಮೆರಿಕ ಸರ್ಕಾರ ಆದೇಶ ನೀಡಿದೆ. ತಾತ್ಕಾಲಿಕ ವೀಸಾ ನೀಡುವುದನ್ನು ಪ್ರಶ್ನಿಸಿ ಅಮೆರಿಕದ ಚೇಂಬರ್ ಆಫ್ ಕಾಮರ್ಸ್ ಟ್ರಂಪ್‍ಗೆ ಪತ್ರ ಬರೆದಿದೆ. ಲಾಕ್‍ಡೌನ್‍ನಿಂದ ಈಗಾಗಲೇ ಅಮೆರಿಕದ ಅರ್ಥವ್ಯವಸ್ಥೆ ಕುಸಿದುಹೋಗಿದೆ. ಆರ್ಥಿಕತೆಗೆ ಚೇತರಿಕೆ ಸಿಗಬೇಕಾದರೆ ಕೆಲಸದ ಸಾಮಥ್ರ್ಯ ಹೆಚ್ಚಿಸಬೇಕು. ಇಂತಹ ಸಂದರ್ಭದಲ್ಲಿ ತಾತ್ಕಾಲಿಕ ವೀಸಾ ನೀಡಿದರೆ ಅರ್ಥವ್ಯವಸ್ಥೆ ಮೇಲೆ ಮತ್ತಷ್ಟು ಹೊಡೆತ ಬೀಳಲಿದೆ ಎಂದು ಎಚ್ಚರಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಸರ್ಕಾರದ ಅಧಿಕಾರಿಗಳು, ಎನ್1ಬಿ ವೀಸಾ ವಿಸ್ತರಣೆ ಅಥವಾ ರದ್ದು ಬಗ್ಗೆ ಇನ್ನೂ ಅಧಿಕೃತ ನಿರ್ಧಾರ ತೆಗೆದುಕೊಂಡಿಲ್ಲ. ಎಲ್ಲಾ ಆಯಾಮಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ನಿರುದ್ಯೋಗಿಗಳಾಗಿ ಬೀದಿಗ ಬಂದ ಅಮೆರಿಕರನ್ನು ಉಳಿಸಬೇಕು, ಎಚ್1ಬಿ ವೀಸಾದಡಿ ಬಂದವರನ್ನೂ ರಕ್ಷಿಸಬೇಕು. ಸದ್ಯಕ್ಕೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.








