ಕಿಲ್ಲರ್ ಕೊರೊನಾಸುರ ವಿಶ್ವದಾದ್ಯಂತ ಮರಣಮೃದಂಗವನ್ನು ಮುಂದುವರಿಸಿದ್ದಾರೆ. ಈ ಸಾಂಕ್ರಾಮಿಕ ಹೆಮ್ಮಾರಿಯಲ್ಲಿ ತಡೆಯಲು ಹಲವು ದೇಶಗಳು ಲಾಕ್ ಡೌನ್ ಆಗಿದ್ದರೂ, ಸೋಂಕು ಮತ್ತು ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಲೇ ಇದೆ. ಇನ್ನು ಈ ಮಹಾಮಾರಿಯನ್ನು ಕಟ್ಟಿಹಾಕಲು ವಿಜ್ಞಾನಿಗಳು ಔಷಧಿ ಮತ್ತು ಲಸಿಕೆ ಅಭಿವೃದ್ಧಿ ಪಡಿಸುವ ಕಾಯಕದಲ್ಲಿ ಬಿಜಿಯಾಗಿದ್ದಾರೆ. ಏತನ್ಮಧ್ಯೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ”ಕೊರೊನಾ ವೈರಸ್ ಕೊಲ್ಲಲು ಹೊಸ ಐಡಿಯಾ” ನೀಡಿದ್ದಾರೆ.
ವೈಟ್ ಹೌಸ್ ನ್ಯೂಸ್ ಬ್ರೀಫಿಂಗ್ ವೇಳೆ ”ಕೊರೊನಾ ವೈರಸ್ ನ ಕೊಲ್ಲಲು ಮನುಷ್ಯನ ದೇಹದೊಳಗೆ light, heat ಅಥವಾ disinfectant inject ಮಾಡಬಹುದಾ?” ಎಂದು ಟಾಪ್ ಎಕ್ಸ್ ಪರ್ಟ್ ಗಳನ್ನು ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ. ಸಾಲದಕ್ಕೆ ”ಈ ಬಗ್ಗೆ ಗಮನ ಹರಿಸಿ” ಎಂದೂ ವೈದ್ಯರಿಗೆ ಸೂಚಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಆಡಿರುವ ಈ ಮಾತು ಇದೀಗ ನಗೆಪಾಟಲಿಗೆ ಈಡಾಗಿದೆ. ಕೊರೊನಾ ಕೊಲ್ಲಲು ಟ್ರಂಪ್ ಕೊಟ್ಟ ಐಡಿಯಾ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಟ್ರೋಲ್ ಆಗಿದೆ.
ಡೊನಾಲ್ಡ್ ಟ್ರಂಪ್ ನೀಡಿರುವ ಐಡಿಯಾಗಳನ್ನು ಪಾಲಿಸಬೇಕು ಅಂದ್ರೆ ಟಾರ್ಚ್ ಅನ್ನು ನುಂಗಬೇಕು,Antiseptic ಕುಡಿಯಬೇಕು, ಬ್ಲೀಚ್ ನಲ್ಲಿ ಸ್ನಾನ ಮಾಡಬೇಕು. ಆಲ್ಕೋಹಾಲ್ ನಲ್ಲಿ ಮುಖ ಮುಳುಗಿಸಬೇಕು ಮತ್ತು ತಲೆಯನ್ನ ಒವನ್ ನಲ್ಲಿ ಇಡಬೇಕು” ಎಂದು ಟ್ವೀಟಿಗರೊಬ್ಬರು ಡೊನಾಲ್ಡ್ ಟ್ರಂಪ್ ಕಾಲೆಳೆದಿದ್ದಾರೆ.
ಇದಲ್ಲದೆ ಟ್ರಂಪ್ ಆಡಿದ ಮಾತುಗಳು ಟಿಕ್ ಟಾಕ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ಟ್ರಂಪ್ ಹೇಳಿದ್ದನ್ನ ದಯವಿಟ್ಟು ಮನೆಯಲ್ಲಿ ಯಾರೂ ಟ್ರೈ ಮಾಡಿ ಎಂಬ ಸಂದೇಶವೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.








