ಅಮೆರಿಕದ ಇತಿಹಾಸದಲ್ಲೇ ಟ್ರಂಪ್ ಅತ್ಯಂತ ಕೆಟ್ಟ ಅಧ್ಯಕ್ಷ
ವಾಷಿಂಗ್ಟನ್ : ‘ಡೋನಾಲ್ಡ್ ಟ್ರಂಪ್ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಧ್ಯಕ್ಷ’ ಎಂದು ಖ್ಯಾತ ಹಾಲಿವುಡ್ ನಾಯಕ ಹಾಗೂ ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ ಅರ್ನಾಲ್ಡ್ ಶ್ವಾರ್ಜ್ ನೆಗ್ಗರ್ ಟೀಕಿಸಿದ್ದಾರೆ.
ಕಳೆದ ವಾರ ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಬಿಲ್ಡಿಂಗ್ ಮೇಲೆ ನಡೆದ ದಾಳಿಯನ್ನು ಖಂಡಿಸಿ ಅವರು ಸೋಮವಾರ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ.
ಸದ್ಯ ಅಮೆರಿಕ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಒಬ್ಬ ದುರ್ಬಲ ಎಂದು ವ್ಯಾಖ್ಯಾನಿಸಿದ್ದಾರೆ. ಅಲ್ಲದೆ ಟ್ರಂಪ್ ಬೆಂಬಲಿಗರನ್ನು ನಾಜಿಗಳಿಗೆ ಹೋಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
My message to my fellow Americans and friends around the world following this week's attack on the Capitol. pic.twitter.com/blOy35LWJ5
— Arnold (@Schwarzenegger) January 10, 2021
ವಿಡಿಯೋದಲ್ಲಿ ಅವರು, ನಮ್ಮ ದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳ ಬಗ್ಗೆ ಮಾತಾಡಬೇಕೆಂದುಕೊಂಡಿದ್ದೇನೆ. ನಾನು ಹುಟ್ಟಿದ್ದು, ಬೆಳೆದದ್ದು ಆಸ್ಟ್ರಿಯಾದಲ್ಲಿ.
ಅಲ್ಲಿ 1938ರಲ್ಲಿ ನಡೆದ ಕ್ರಿಸ್ಟಲಾನಾಚ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಜರ್ಮನಿಯ ನಾಜಿಗಳು ಆಸ್ಟ್ರಿಯಾದಲ್ಲಿ ಯಹೂದಿಗಳ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ನಾಶವನ್ನು ಉಂಟುಮಾಡಿದರು.
ಕೆಜಿಎಫ್ 2 ಟೀಸರ್ ನಲ್ಲಿ ಪವರ್ ಫುಲ್ ನಲ್ಲಿ ಲುಕ್ ನಲ್ಲಿ ಕಾಣಿಸಿಕೊಂಡ ಈ ನಟಿ ಯಾರು…? ಪಾತ್ರ ಯಾವುದು…?
ಈಗ ಯುನೈಟೆಡ್ ಸ್ಟೇಟ್ಸ್ ಕೆಲವರು (ಟ್ರಂಪ್ ಬೆಂಬಲಿಗರ ಗುಂಪು) ಕೂಡ ಅದನ್ನೇ ಮಾಡಿದ್ದಾರೆ. ಇತ್ತೀಚೆಗೆ, ಕ್ಯಾಪಿಟಲ್ ಬಿಲ್ಡಿಂಗ್ ಮೇಲೆ ಅವರು ನಡೆಸಿದ ದಾಳಿಯಲ್ಲಿ ಕಟ್ಟಡದ ಕನ್ನಡಿ ಒಡೆದು ಹೋಯಿತು.
ಆದರೆ ಅದು ಕೇವಲ ಕನ್ನಡಿಯಲ್ಲ. ಅಮೆರಿಕದ ಕಾಂಗ್ರೆಸ್ ಶಾಸಕರ ಆಲೋಚನೆ ಕೂಡ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೆ ನೂತನ ಅಧ್ಯಕ್ಷ ಜೋ ಬಿಡೆನ್ ಅವರನ್ನು ಬೆಂಬಲಿಸುವಂತೆ ಅವರು ಕರೆ ಕೊಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel