ಅಮೆರಿಕಾ ಅಧ್ಯಕ್ಷ ಡೊನಾಲ್ ಟ್ರಂಪ್ ಆಗಮನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಟ್ರಂಪ್ ಆಗಮನ ಹಿನ್ನೆಲೆ ಅವರನ್ನ ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಕಾತುರರಾಗಿದ್ದಾರೆ. ಇತ್ತ, ಸಿಲಿಕಾನ್ ಸಿಟಿಯಲ್ಲಿ ಗಾಳಿಪಟ ಕಲಾವಿದನೊಬ್ಬ ಟ್ರಂಪ್ ಹಾಗೂ ಮೋದಿ ಭಾವಚಿತ್ರವುಳ್ಳ 15 ಅಡಿ ಉದ್ದದ ಗಾಳಿಪಟವನ್ನ ಆಗಸಕ್ಕೆ ಹಾರಿಸಿ ಸ್ವಾಗತ ಕೋರಿದ್ದಾರೆ.
ಕರ್ನಾಟಕದ ಅಂತರಾಷ್ಟ್ರೀಯ ಗಾಳಿಪಟ ಕಲಾವಿದ ವಿ.ಕೆ.ರಾವ್ ಈ ವಿಶೇಷ ಗಾಳಿಪಟ ತಯಾರಿಸಿದ್ದಾರೆ. ಗಾಳಿಪಟದಲ್ಲಿ ಉಭಯನಾಯಕರ ಫೋಟೋವನ್ನ ಹಾಕಿ ‘ನಮಸ್ತೆ ಟ್ರಂಪ್’ ಮತ್ತು ‘ಭಾರತಕ್ಕೆ ಸ್ವಾಗತ’ ಎಂಬ ಸಂದೇಶ ಬರೆದು ಹಾರಿಸಿದ್ದಾರೆ. ಈ ಬಗ್ಗೆ ಸಂಸತ ವ್ಯಕ್ತಪಡಿಸಿರುವ ವಿ.ಕೆ.ರಾವ್, ನಾನು ಅಮೆರಿಕಾ ಅಧ್ಯಕ್ಷರನ್ನು ಸ್ವಾಗತಿಸಲು ಈ ವಿಶೇಷ ಗಾಳಿಪಟವನ್ನು ರಚಿಸಿದ್ದೇನೆ. ಟ್ರಂಪ್ ಭಾರತಕ್ಕೆ ಆಗಮಿಸುತ್ತಿರುವುದು ಎಲ್ಲರಿಗೂ ಖುಷಿಯ ವಿಚಾರವಾಗಿದೆ ಈ ಮೂಲಕ ಭಾರತ ವಿಶ್ವದ ಜನರ ಗಮನ ಸೆಳೆದಿದೆ ಎಂದು ಹೇಳಿದ್ದಾರೆ.








