ಅಹಮದಾಬಾದ್: ಎರಡು ದಿನಗಳ ಭಾರತದ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಹಮದಾಬಾದ್ ಏರ್ ಪೋರ್ಟ್ ನಿಂದ ನೇರವಾಗಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ರು. ಸಬರಮತಿ ಆಶ್ರಮದಲ್ಲಿ ಸುತ್ತಾಡಿ ಅಲ್ಲಿ
ನ ವಿಶೇಷತೆಗಳನ್ನು ತಿಳಿದುಕೊಂಡ ಟ್ರಂಪ್, ಅಲ್ಲಿಂದ ಹೊರಡುವ ಮುನ್ನ ಅಲ್ಲಿನ ವಿಸಿಟರ್ಸ್ ಪುಸ್ತಕದಲ್ಲಿ ಈ ಭೇಟಿ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದು, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
‘TO MY GREAT FRIEND PRIME MINISTER MODI.. THANK YOU FOR THIS.. WONDERFUL VISIT’ (ನನ್ನ ಗೆಳೆಯ ಪ್ರಧಾನ ಮಂತ್ರಿ ಮೋದಿಗೆ .. ಇದು ಅದ್ಭುತ ಭೇಟಿ.. ಧನ್ಯವಾದ) ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.








